ವಿನಯ್ ರಾಜ್​​ಕುಮಾರ್ ಜೊತೆ ರಮ್ಯಾ ಸುತ್ತಾಟ; ವೈರಲ್ ಆಗಿವೆ ಫೋಟೋಗಳು

ಒಂದಷ್ಟು ದಿನಗಳ ಹಿಂದೆ ರಮ್ಯಾ ಮತ್ತು ವಿನಯ್ ರಾಜ್​​ಕುಮಾರ್ ಅವರು ಒಟ್ಟಿಗೆ ಫೋಟೋಶೂಟ್ ಮಾಡಿಸಿದ್ದರು. ಈಗ ಅವರಿಬ್ಬರು ಜೊತೆಯಾಗಿ ಸುತ್ತಾಡಿದ ಫೋಟೋಗಳನ್ನು ಸ್ವತಃ ರಮ್ಯಾ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್​​ಕುಮಾರ್ ಪುತ್ರಿ ವಂದಿತಾ ರಾಜ್​​ಕುಮಾರ್ ಕೂಡ ರಮ್ಯಾ ಜೊತೆಯಲ್ಲಿ ಕಾಲ ಕಳೆದಿದ್ದಾರೆ.

ವಿನಯ್ ರಾಜ್​​ಕುಮಾರ್ ಜೊತೆ ರಮ್ಯಾ ಸುತ್ತಾಟ; ವೈರಲ್ ಆಗಿವೆ ಫೋಟೋಗಳು
Ramya Divya Spandana, Vinay Rajkumar

Updated on: Sep 10, 2025 | 6:39 PM

ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಈಗಂತೂ ರಮ್ಯಾ (Ramya) ಅವರು ಸಿನಿಮಾ ಆಯ್ಕೆಯಲ್ಲಿ ಅವರಸ ತೋರುತ್ತಿಲ್ಲ. ಆರಾಮಾಗಿ ಅವರು ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ದೇಶ-ವಿದೇಶ ಸುತ್ತುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ರಮ್ಯಾ ಅವರಿಗೆ ವಿನಯ್ ರಾಜ್​​ಕುಮಾರ್ (Vinay Rajkumar) ಕೂಡ ಸಾಥ್ ನೀಡಿದ್ದಾರೆ. ಈ ಬಾರಿ ಅವರ ಜೊತೆ ಪುನೀತ್ ರಾಜ್​​ಪುಮಾರ್ ಪುತ್ರಿ ವಂದಿತಾ ಕೂಡ ಇದ್ದಾರೆ.

ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಸುತ್ತಾಟಗಳ ಬಗ್ಗೆ ಅವರು ಅಪ್​ಡೇಟ್ ನೀಡುತ್ತಾರೆ. ಈಗ ಅವರು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿನಯ್ ರಾಜ್​​ಕುಮಾರ್, ರಮ್ಯಾ, ವಂದಿತಾ ರಾಜ್​ಕುಮಾರ್ ಅವರು ಖುಷಿ ಖುಷಿಯಾಗಿ ಕಾಲ ಕಳೆದ ಕ್ಷಣಗಳು ಈ ಫೋಟೋಗಳಲ್ಲಿ ಸೆರೆ ಆಗಿವೆ.

ಇದನ್ನೂ ಓದಿ
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಅಭಿಮಾನಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ರಮ್ಯಾ
ನಟ ದರ್ಶನ್ ಅಭಿಮಾನಿಗಳ ಕಮೆಂಟ್ ನೋಡಿ ರಮ್ಯಾ ಖಡಕ್ ಪ್ರತಿಕ್ರಿಯೆ

ರಾಜ್​​ಕುಮಾರ್ ಕುಟುಂಬದ ಜೊತೆ ರಮ್ಯಾ ಅವರಿಗೆ ಮೊದಲಿನಿಂದಲೂ ಆಪ್ತತೆ ಇದೆ. ರಮ್ಯಾ ಮತ್ತು ವಿನಯ್ ರಾಜ್​​ಕುಮಾರ್ ಅವರು ಕ್ಲೋಸ್ ಆಗಿದ್ದಾರೆ. ಇತ್ತೀಚೆಗೆ ವಿನಯ್ ರಾಜ್​ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾ ಬಿಡುಗಡೆ ಆಯಿತು. ಆ ಚಿತ್ರಕ್ಕೆ ರಮ್ಯಾ ಅವರು ಶುಭ ಕೋರಿದರು. ಆ ಮೂಲಕ ವಿನಯ್​ ರಾಜ್​​ಕುಮಾರ್ ಅವರಿಗೆ ರಮ್ಯಾ ಸಪೋರ್ಟ್ ಮಾಡಿದರು.

ಇನ್​ಸ್ಟಾಗ್ರಾಮ್​​ನಲ್ಲಿ ರಮ್ಯಾ ಅವರು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ವೈರಲ್ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಆದರೆ ಯಾರೊಬ್ಬರೂ ಕೂಡ ನೆಗೆಟಿವ್ ಕಮೆಂಟ್ ಮಾಡುವುದಾಗಲಿ, ಅಸಭ್ಯ ಪದಗಳನ್ನು ಬಳಸುವುದಾಗಲಿ ಮಾಡಿಲ್ಲ. ಅಷ್ಟರಮಟ್ಟಿಗೆ ರಮ್ಯಾ ಅವರು ಕಾನೂನಿನ ಮೂಲಕ ಬದಲಾವಣೆ ತಂದಿದ್ದಾರೆ.

ಇದನ್ನೂ ಓದಿ: ಎಷ್ಟೇ ವರ್ಷ ಕಳೆದರೂ ನೀವೇ ನಮ್ಮ ಕ್ರಶ್: ರಮ್ಯಾ ಫೋಟೋಗೆ ಹೊಗಳಿಕೆ

ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಾಗ ದರ್ಶನ್ ಅಭಿಮಾನಿಗಳು ಅಶ್ಲೀಲ ಮತ್ತು ಅಸಭ್ಯವಾಗಿ ರಮ್ಯಾಗೆ ಮೆಸೇಜ್ ಕಳಿಸಿದ್ದರು. ಅಂಥವರ ವಿರುದ್ಧ ರಮ್ಯಾ ದೂರು ನೀಡಿದ್ದರು. ಬಳಿಕ ಹಲವರನ್ನು ಅರೆಸ್ಟ್ ಮಾಡಲಾಗಿತ್ತು. ಆ ಘಟನೆಯ ಪರಿಣಾಮದಿಂದ ಕಮೆಂಟ್​​ ಬಾಕ್ಸ್​​ನಲ್ಲಿ ಈಗ ಸಭ್ಯತೆ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us