ಭಾರತದ ಜಾಹೀರಾತಿನಲ್ಲಿ ನಟಿಸೋಕೆ ಜಾನಿ ಸಿನ್ಸ್ ಮನ ಒಲಿಸಿದ್ದು ಈ ಸ್ಟಾರ್ ನಟ  

| Updated By: ರಾಜೇಶ್ ದುಗ್ಗುಮನೆ

Updated on: Feb 16, 2024 | 8:58 AM

ರಣವೀರ್ ಸಿಂಗ್ ಅವರಿಗೆ ಜಾಹೀರಾತಿನ ಬಗ್ಗೆ ಕೇಳಿ ಖುಷಿ ಆಯಿತು. ಆದರೆ ಜಾನಿ ಸಿನ್ಸ್ ಜೊತೆ ಮಾತನಾಡೋದು ಯಾರು ಎನ್ನುವ ಪ್ರಶ್ನೆ ಮೂಡಿದಾಗ ರಣವೀರ್ ಸಿಂಗ್ ಅವರೇ ಮುಂದಾಳತ್ವ ತೆಗೆದುಕೊಂಡರು. ತಾವೇ ಅವರನ್ನು ಕರೆತರುವುದಾಗಿ ಹೇಳಿದರು. ಅಂತೆಯೇ ನಡೆದುಕೊಂಡರು.

ಭಾರತದ ಜಾಹೀರಾತಿನಲ್ಲಿ ನಟಿಸೋಕೆ ಜಾನಿ ಸಿನ್ಸ್ ಮನ ಒಲಿಸಿದ್ದು ಈ ಸ್ಟಾರ್ ನಟ  
ರಣವೀರ್ ಸಿಂಗ್
Follow us on

ರಣವೀರ್ ಸಿಂಗ್ (Ranveer Singh) ಹಾಗೂ ಜಾನಿ ಸಿನ್ಸ್ ಇತ್ತೀಚೆಗೆ ಜಾಹೀರಾತಿನಲ್ಲಿ ನಟಿಸಿದ್ದರು. ಲೈಂಗಿಕ ಶಕ್ತಿ ಹೆಚ್ಚಿಸುವ ಟ್ಯಾಬ್ಲೆಟ್ ಒಂದರ ಜಾಹೀರಾತು ಇದಾಗಿತ್ತು. ಇದನ್ನು ಭಾರತದ ಧಾರಾವಾಹಿಯ ಶೈಲಿಯಲ್ಲಿ ಸಿದ್ಧಪಡಿಸಲಾಗಿತ್ತು. ಜಾನಿ ಸಿನ್ಸ್​​ಗೂ ಭಾರತಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಆದಾಗ್ಯೂ ಅವರು ಹಿಂದಿ ಜಾಹೀರಾತಿನಲ್ಲಿ ನಟಿಸಿದ್ದು ಹೇಗೆ? ಅವರನ್ನು ಒಪ್ಪಿಸಿದ್ದು ಯಾರು ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆಲ್ಲ ಕಾರಣ ಆಗಿದ್ದು ರಣವೀರ್ ಸಿಂಗ್. ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ರಣವೀರ್ ಸಿಂಗ್ ಅವರು ಸದಾ ಜೋಶ್​ನಲ್ಲಿ ಇರುತ್ತಾರೆ. ಅವರು ಎಲ್ಲಾ ವಿಚಾರಗಳಲ್ಲೂ ಸಾಕಷ್ಟು ಉತ್ಸಾಹ ತೋರಿಸುತ್ತಾರೆ. ಈ ರೀತಿ ಜಾಹೀರಾತಿನಲ್ಲಿ ನಟಿಸಬೇಕು ಎಂದಾಗ ಅವರಿಗೆ ಸಖತ್ ಖುಷಿ ಆಯಿತು. ಆದರೆ, ಜಾನಿ ಸಿನ್ಸ್ ಜೊತೆ ಮಾತನಾಡೋದು ಯಾರು? ಅವರನ್ನು ಭಾರತಕ್ಕೆ ಕರೆತರೋದು ಯಾರು ಎನ್ನುವ ಪ್ರಶ್ನೆ ಮೂಡಿದಾಗ ರಣವೀರ್ ಸಿಂಗ್ ಅವರೇ ಮುಂದಾಳತ್ವ ತೆಗೆದುಕೊಂಡರು. ತಾವೇ ಅವರನ್ನು ಕರೆತರುವುದಾಗಿ ಹೇಳಿದರು. ಅಂತೆಯೇ ಮಾಡಿದರು.

‘ಜಾನಿ ಸಿನ್ಸ್ ಅವರು ಈ ಜಾಹೀರಾತಿನಲ್ಲಿ ಇರಲಿದ್ದಾರೆ ಎನ್ನುವ ವಿಚಾರ ಕೇಳಿದಾಗ ರಣವೀರ್ ಸಿಂಗ್ ಸಖತ್ ಖುಷಿಪಟ್ಟರು. ಅವರನ್ನು ಕಾಂಟ್ಯಾಕ್ಟ್ ಮಾಡೋದು ಹೇಗೆ? ಅವರನ್ನು ಕರೆತರೋದು ಹೇಗೆ ಎನ್ನುವ ಚಿಂತೆಯಲ್ಲಿ ತಂಡ ಇತ್ತು. ಆಗ ರಣವೀರ್ ಸಿಂಗ್ ಯಾರೂ ಊಹಿಸದ ರೀತಿ ನಡೆದುಕೊಂಡರು. ರಣವೀರ್ ತಮ್ಮ ತಂಡಕ್ಕೆ ಜಾನಿ ಸಿನ್ಸ್​ಗೆ ಇನ್​ಸ್ಟಾಗ್ರಾಮ್​ನಲ್ಲಿ ಮೆಸೇಜ್ ಮಾಡುವಂತೆ ಹೇಳಿದರು. ಒಂದೇ ವಾರದಲ್ಲಿ ಜಾನಿ ಸಿನ್ಸ್ ಕಾಂಟ್ರ್ಯಾಕ್ಟ್​ಗೆ ಸಹಿ ಹಾಕಾಗಿತ್ತು’ ಎಂದು ಮೂಲಗಳು ಹೇಳಿರುವುದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.

ರಣವೀರ್ ಸಿಂಗ್ ಹಾಗೂ ಜಾನಿ ಸಿನ್ಸ್​ ಮೊದಲ ಬಾರಿಗೆ ಒಂದಾಗಿದ್ದಾರೆ. ರಣವೀರ್ ಸಿಂಗ್ ಅವರು ಐಡಿಯಾನ ಜಾನಿ ಸಿನ್ಸ್​ ಬಳಿ ಹೇಳಿಕೊಂಡರು. ತಕ್ಷಣಕ್ಕೆ ಅವರು ಒಪ್ಪಿಕೊಂಡರು. ಆ ಬಳಿಕ ಅವರು ಜಾಹೀರಾತಿಗೆ ಬಂದರು.

ಇದನ್ನೂ ಓದಿ: ‘ಕಿರುತೆರೆಗೆ ಮಾಡಿದ ಅವಮಾನ’; ಜಾನಿ ಸಿನ್ಸ್ ಹಾಗೂ ರಣವೀರ್ ಜಾಹೀರಾತಿಗೆ ಬಹಿಷ್ಕಾರದ ಭೀತಿ

ಜಾನಿ ಸಿನ್ಸ್ ಅವರು ಈ ಜಾಹೀರಾತಿನ ಶೂಟಿಂಗ್​ಗಾಗಿ ಭಾರತಕ್ಕೆ ಬಂದಿದ್ದರು. ಎರಡು ದಿನಗಳ ಕಾಲ ಅವರು ಭಾರತದಲ್ಲಿ ಶೂಟ್ ಮಾಡಿದ್ದಾರೆ. ಆ ಬಳಿಕ ಅವರು ಮರಳಿ ತಮ್ಮ ದೇಶಕ್ಕೆ ತೆರಳಿದ್ದಾರೆ. ಈ ಅಡ್ವಟೈಸ್​​ಮೆಂಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ.

ಜಾಹೀರಾತಿನಲ್ಲಿ ಏನಿದೆ?

ಪತಿ ಪತ್ನಿ ಮಧ್ಯೆ ಲೈಂಗಿಕ ಜೀವನ ಉತ್ತಮವಾಗಿರುವುದಿಲ್ಲ. ಈ ಕಾರಣಕ್ಕೆ ಪತ್ನಿ ಮನೆಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಒಂದು ಟ್ಯಾಬ್ಲೆಟ್ ತಿಂದ ಬಳಿಕ ಪತಿಗೆ ಲೈಂಗಿಕವಾಗಿ ಶಕ್ತಿ ಬರುತ್ತದೆ. ಇದನ್ನು ಧಾರಾವಾಹಿ ಶೈಲಿಯಲ್ಲಿ ತೋರಿಸಲಾಗಿತ್ತು. ಅನೇಕ ಕಿರುತೆರೆ ಕಲಾವಿದರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ