‘ಕಿರುತೆರೆಗೆ ಮಾಡಿದ ಅವಮಾನ’; ಜಾನಿ ಸಿನ್ಸ್ ಹಾಗೂ ರಣವೀರ್ ಜಾಹೀರಾತಿಗೆ ಬಹಿಷ್ಕಾರದ ಭೀತಿ

ಪತಿ-ಪತ್ನಿ ಮಧ್ಯೆ ಜಗಳ ಆಗಿರುತ್ತದೆ. ಪತ್ನಿ ಮನೆ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಲೈಂಗಿಕವಾಗಿ ಪತಿ ಆ್ಯಕ್ಟೀವ್ ಆಗಿಲ್ಲ ಎಂಬುದೇ ಪತ್ನಿಯು ಮನೆ ಬಿಟ್ಟು ಹೋಗಲು ಕಾರಣ. ನಂತರ ಮಾತ್ರೆ ಒಂದನ್ನು ತೆಗೆದುಕೊಂಡ ಬಳಿಕ ಪತಿ ಬದಲಾಗುತ್ತಾನೆ. ಇದನ್ನು ಧಾರಾವಾಹಿಯ ಕಥೆ ರೀತಿಯಲ್ಲಿ ತೋರಿಸಲಾಗಿದೆ.

‘ಕಿರುತೆರೆಗೆ ಮಾಡಿದ ಅವಮಾನ’; ಜಾನಿ ಸಿನ್ಸ್ ಹಾಗೂ ರಣವೀರ್ ಜಾಹೀರಾತಿಗೆ ಬಹಿಷ್ಕಾರದ ಭೀತಿ
ಜಾನಿ-ರಶ್ಮಿ-ರಣವೀರ್
Follow us
ರಾಜೇಶ್ ದುಗ್ಗುಮನೆ
|

Updated on: Feb 13, 2024 | 10:30 AM

ನೀಲಿ ಚಿತ್ರ ತಾರೆ ಜಾನಿ ಸಿನ್ಸ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಇಬ್ಬರೂ ಒಟ್ಟಾಗಿ ಜಾಹೀರಾತು ಒಂದರಲ್ಲಿ ನಟಿಸಿದ್ದರು. ಧಾರಾವಾಹಿಯ ಶೈಲಿಯಲ್ಲಿ ಈ ಜಾಹೀರಾತು ಮೂಡಿ ಬಂದಿತ್ತು. ಈ ಜಾಹೀರಾತಿಗೆ ಕಿರುತೆರೆ ಕಲಾವಿದರು ಅಪಸ್ವರ ತೆಗೆದಿದ್ದಾರೆ. ಇದು ‘ಕಿರುತೆರೆಗೆ ಮಾಡಿದ ಅವಮಾನ’ ಎಂದು ಅನೇಕರು ಹೇಳಿದ್ದಾರೆ. ಧಾರಾವಾಹಿ ನಟಿ ರಶ್ಮಿ ದೇಸಾಯಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ‘ಅವಮಾನ ಮಾಡಿದಂತೆ ಭಾಸವಾಯಿತು’ ಎಂದು ಹೇಳಿದ್ದಾರೆ.

ಜಾಹಿರಾತಿನಲ್ಲಿ ಏನಿದೆ?

ಪತಿ-ಪತ್ನಿ ಮಧ್ಯೆ ಜಗಳ ಆಗುತ್ತದೆ. ಪತ್ನಿ ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬರುತ್ತಾಳೆ. ಲೈಂಗಿಕವಾಗಿ ಪತಿ ಆ್ಯಕ್ಟೀವ್ ಆಗಿಲ್ಲ ಎಂಬುದೇ ಪತ್ನಿಯು ಮನೆ ಬಿಟ್ಟು ಹೋಗಲು ಕಾರಣ. ನಂತರ ಮಾತ್ರೆ ಒಂದನ್ನು ತೆಗೆದುಕೊಂಡ ಬಳಿಕ ಪತಿ ಬದಲಾಗುತ್ತಾನೆ. ಇದನ್ನು ಧಾರಾವಾಹಿಯ ಕಥೆ ರೀತಿಯಲ್ಲಿ ತೋರಿಸಲಾಗಿದೆ. ಮೇಕಿಂಗ್ ಕೂಡ ಹಾಗೆಯೇ ಇದೆ. ಜಾನಿ ಸಿನ್ಸ್ ಹಾಗೂ ರಣವೀರ್ ಸಿಂಗ್ ಇಬ್ಬರೂ ಒಟ್ಟಾಗಿ ನಟಿಸಿದ್ದಾರೆ.

ರಶ್ಮಿ ದೇಸಾಯಿ ಅಭಿಪ್ರಾಯ

‘ನಾನು ಪ್ರಾದೇಶಿಕ ಸಿನಿಮಾಗಳಿಂದ ನನ್ನ ವೃತ್ತಿ ಆರಂಭಿಸಿದ್ದೇನೆ. ನಂತರ ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಜನರು ಇದನ್ನು ಸಣ್ಣ ಪರದೆ ಎಂದು ಕರೆಯುತ್ತಾರೆ. ಇದೇ ಟಿವಿಯಲ್ಲಿ ಅವರು ಜಗತ್ತಿನ ಸುದ್ದಿ, ಕ್ರಿಕೆಟ್, ಸಿನಿಮಾ ಸೇರಿ ಬಹುತೇಕ ಎಲ್ಲವನ್ನೂ ಇಲ್ಲಿಯೇ ವೀಕ್ಷಿಸುತ್ತಾರೆ. ಈ ಜಾಹೀರಾತು ನೋಡಿದ ನಂತರ ಇದು ಅತ್ಯಂತ ಅನಿರೀಕ್ಷಿತ ಎನಿಸಿತು. ಇದು ಎಲ್ಲಾ ಕಿರುತೆರೆಯಲ್ಲಿ ಕೆಲಸ ಮಾಡುವರಿಗೆ ಮಾಡಿದ ಅವಮಾನ’ ಎಂದು ರಶ್ಮಿ ದೇಸಾಯಿ ಹೇಳಿದ್ದಾರೆ.

‘ನಮ್ಮನ್ನು ಹೇಗೆ ಟ್ರೀಟ್ ಮಾಡುತ್ತಾರೆ ಎಂಬುದಕ್ಕೆ ಒದೊಂದು ಉದಾಹರಣೆ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಟಿವಿಯಲ್ಲಿ ಎಲ್ಲವನ್ನೂ ತೊರಿಸುವುದಿಲ್ಲ. ಅದೇನಿದ್ದರೂ ದೊಡ್ಡ ಪರದೆಯಲ್ಲಿ. ಯಾರೋ ಕೆನ್ನೆಗೆ ಹೊಡೆದಂತೆ ಅನಿಸುತ್ತಿದೆ. ನನಗೆ ಬೇಸರ ಆಗಿದೆ. ನಾನು ನನ್ನ ಕಿರುತೆರೆ ಜರ್ನಿಯನ್ನು ಗೌರವಿಸುತ್ತೇನೆ. ಬಹುಶಃ ನಮ್ಮ ಭಾವನೆಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಅನಿಸುತ್ತದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟ್ರೆಂಡ್ ಆರಂಭಿಸಿದ್ದಾರೆ. ಈ ಜಾಹಿರಾತಿನ ಮೇಲೆ ಬ್ಯಾನ್ ಹೇರಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಮೊದಲು ಅನೇಕ ಜಾಹೀರಾತುಗಳು ಬ್ಯಾನ್ ಆದ ಉದಾಹರಣೆ ಇದೆ. ಆ ಸಾಲಿಗೆ ಈ ಅಡ್ವಟೈಸ್​ಮೆಂಟ್ ಕೂಡ ಸೇರ್ಪಡೆ ಆಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ