ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ; ಫೋಟೋ ವೈರಲ್

|

Updated on: Nov 13, 2023 | 10:46 AM

ರಶ್ಮಿಕಾ ಮಂದಣ್ಣ ಅವರು ಸೀರೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ‘ಹ್ಯಾಪಿ ದೀಪಾವಳಿ ಮೈ ಲವ್ಸ್’ ಎಂದು ಇದಕ್ಕೆ ಅವರು ಕ್ಯಾಪ್ಶನ್ ನೀಡಿದ್ದಾರೆ. ವಿಜಯ್ ದೇವರಕೊಂಡ ಕೂಡ ಸೆಲೆಬ್ರೇಷನ್ ಫೋಟೋ ಹಂಚಿಕೊಂಡಿದ್ದಾರೆ. ಅವರ ಕ್ಯಾಪ್ಶನ್ ಕೂಡ ಸೇಮ್ ಟು ಸೇಮ್ ಇದೆ.

ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ; ಫೋಟೋ ವೈರಲ್
ವಿಜಯ್-ರಶ್ಮಿಕಾ
Follow us on

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಆದರೆ ಈ ವಿಚಾರವನ್ನು ಅವರು ಒಪ್ಪಿಕೊಂಡಿಲ್ಲ. ನಾವಿಬ್ಬರೂ ಫ್ರೆಂಡ್ಸ್​ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆಯ ಫೋಟೋ ಹಾಕಿದ್ದಾರೆ. ರಶ್ಮಿಕಾ ಅವರು ವಿಜಯ್ ದೇವರಕೊಂಡ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ ಎಂಬುದಕ್ಕೆ ಅಭಿಮಾನಿಗಳು ಸಾಕ್ಷಿ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸೀರೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ‘ಹ್ಯಾಪಿ ದೀಪಾವಳಿ ಮೈ ಲವ್ಸ್’ ಎಂದು ಇದಕ್ಕೆ ಅವರು ಕ್ಯಾಪ್ಶನ್ ನೀಡಿದ್ದಾರೆ. ವಿಜಯ್ ದೇವರಕೊಂಡ ಕೂಡ ಸೆಲೆಬ್ರೇಷನ್ ಫೋಟೋ ಹಂಚಿಕೊಂಡಿದ್ದಾರೆ. ಅವರ ಕ್ಯಾಪ್ಶನ್ ಕೂಡ ಸೇಮ್ ಟು ಸೇಮ್ ಇದೆ. ರಶ್ಮಿಕಾ ಪೋಸ್ಟ್ ಮಾಡಿರುವ ಫೋಟೋದ ಬ್ಯಾಕ್​ಗ್ರೌಂಡ್ ನೋಡಿರೋ ಅನೇಕರು ಇದು ವಿಜಯ್ ದೇವರಕೊಂಡ ಮನೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈ ರೀತಿಯಲ್ಲಿ ಒಟ್ಟಾಗಿ ಸಮಯ ಕಳೆದಿದ್ದು ಇದೇ ಮೊದಲೇನು ಅಲ್ಲ. ಈ ಮೊದಲು ಅನೇಕ ಬಾರಿ ಇಬ್ಬರೂ ಒಟ್ಟಾಗಿ ಪ್ರವಾಸ ತೆರಳಿದ್ದರು. ಆದರೆ, ಇದು ಗೊತ್ತಾಗದ ರೀತಿಯಲ್ಲಿ ನಡೆದುಕೊಂಡಿದ್ದರು. ಆದರೆ, ಇದನ್ನು ಅಭಿಮಾನಿಗಳು ಪತ್ತೆ ಹಚ್ಚಿದ್ದರು. ಈಗ ಇಬ್ಬರೂ ಒಟ್ಟಾಗಿ ದೀಪಾವಳಿ ಆಚರಿಸಿಕೊಂಡು ಅಭಿಮಾನಿಗಳ ಬಳಿ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ಫೇಕ್​ ವಿಡಿಯೋ ನೋಡಿ ವಿಜಯ್​ ದೇವರಕೊಂಡ ಗರಂ; ನಟ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಅವರ ಡಿಪ್​ಫೇಕ್ ವಿಡಿಯೋ. ಜರಾ ಪಟೇಲ್ ಎಂಬುವವರ ವಿಡಿಯೋನ ಎಡಿಟ್ ಮಾಡಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಹಾಕಲಾಗಿತ್ತು. ಈ ವಿಡಿಯೋ ಸಖತ್ ಬೋಲ್ಡ್ ಆಗಿತ್ತು. ಈ ವೇಳೆ ರಶ್ಮಿಕಾ ಮಂದಣ್ಣ ಅವರನ್ನು ಸಾಕಷ್ಟು ಟೀಕೆ ಮಾಡಲಾಯಿತು. ಆ ಬಳಿಕ ಇದು ಫೇಕ್ ವಿಡಿಯೋ ಅನ್ನೋದು ಗೊತ್ತಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ