Rashmika Mandanna: ಮುಂಬೈ ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ದೇವರಕೊಂಡ​ ; ಮುಖ ಮುಚ್ಚಿಕೊಂಡ ನಟ ​

Rashmika Mandanna-Vijay Deverakonda: ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಮೀಟ್​ ಆಗುತ್ತಿದ್ದಾರೆ.

Rashmika Mandanna: ಮುಂಬೈ ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ದೇವರಕೊಂಡ​ ; ಮುಖ ಮುಚ್ಚಿಕೊಂಡ ನಟ ​
ವಿಜಯ್​ ದೇವರಕೊಂಡ -ರಶ್ಮಿಕಾ ಮಂದಣ್ಣ

Updated on: Apr 18, 2021 | 7:43 PM

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಇಬ್ಬರೂ ಮುಂಬೈನಲ್ಲಿದ್ದಾರೆ. ಸಮಯ ಸಿಕ್ಕಾಗೆಲ್ಲ ಇಬ್ಬರೂ ಮೀಟ್​ ಆಗುತ್ತಿದ್ದಾರೆ. ಈಗ ವಿಜಯ್​ ಹಾಗೂ ರಶ್ಮಿಕಾ ಒಟ್ಟಾಗಿ ಜಿಮ್​ಗೆ ತೆರಳಿ ವೌರ್ಕ್​ಔಟ್​ ಮಾಡಿದ್ದಾರೆ. ಜಿಮ್​ನಿಂದ ಹೊರ ಬರುವಾಗ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಫೋಟೋಗಳು ವೈರಲ್​ ಆಗಿವೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಒಟ್ಟಿಗೆ ಜಿಮ್​ನಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂದರೆ, ವಿಜಯ್​ ದೇವರಕೊಂಡ ಮುಖಕ್ಕೆ ಮಾಸ್ಕ್​ ಹಾಕಿದ್ದು ಮಾತ್ರವಲ್ಲ ಸಂಪೂರ್ಣವಾಗಿ ಮುಖವನ್ನು ಕ್ಯಾಪ್​ನಿಂದ ಮುಚ್ಚಿಕೊಂಡಿದ್ದಾರೆ. ರಶ್ಮಿಕಾ ಮನಸ್ಪೂರ್ತಿಯಾಗಿ ನಗುತ್ತಿದ್ದಾರೆ. ಜಿಮ್​ ಹೊರಗೆ ಮಾಧ್ಯಮಗಳು ಕ್ಯಾಮರಾ ಕಂಡಿದ್ದೇ ಇಬ್ಬರೂ ಕಾರನ್ನು ಏರಿ ತೆರಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಮೀಟ್​ ಆಗುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಒಟ್ಟಾಗಿ ಊಟ ಸವಿದಿದ್ದರು. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಜಯ್​, ಲೈಗರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಪುರಿ ಜಗನ್ನಾಥ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್​ 9ರಂದು ಸಿನಿಮಾ ತೆರೆಗೆ ಬರುತ್ತಿದೆ. ರಶ್ಮಿಕಾ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಹಿಂದಿಯಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಮಿಷನ್​ ಮಜ್ನು ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಪುಷ್ಪ ಚಿತ್ರದ ಶೂಟಿಂಗ್​ನಲ್ಲೂ ಅವರು ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Rashmika Mandanna: ಮೆಕ್​ಡೊನಾಲ್ಡ್ ಇಂಡಿಯಾ ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕವಾದ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಬೆಂಬಲವಾಗಿ ನಿಂತ ಸಿದ್ಧಾರ್ಥ್ ಮಲ್ಹೋತ್ರ! ಅನುಭವ ಹಂಚಿಕೊಂಡ ಕಿರಿಕ್​ ಬೆಡಗಿ

Published On - 7:02 pm, Sun, 18 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us