Rashmika Mandanna: ರಶ್ಮಿಕಾ ಮಂದಣ್ಣಗೆ ಬರ್ತ್​ಡೇ ಸಂಭ್ರಮ; ಕೊಡಗಿನ ಕುವರಿಗೆ ವಯಸ್ಸೆಷ್ಟು?

| Updated By: ರಾಜೇಶ್ ದುಗ್ಗುಮನೆ

Updated on: Apr 05, 2022 | 6:30 AM

ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ‘ಪುಷ್ಪ’ ಸಿನಿಮಾದಲ್ಲಿ ಅವರು ನಿರ್ವಹಿಸಿರುವ ಶ್ರೀವಲ್ಲಿ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ, ರಶ್ಮಿಕಾ ‘ಮಿಷನ್​ ಮಜ್ನು’, ‘ಗುಡ್​ಬೈ’ ಹಾಗೂ ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Rashmika Mandanna: ರಶ್ಮಿಕಾ ಮಂದಣ್ಣಗೆ ಬರ್ತ್​ಡೇ ಸಂಭ್ರಮ; ಕೊಡಗಿನ ಕುವರಿಗೆ ವಯಸ್ಸೆಷ್ಟು?
ರಶ್ಮಿಕಾ ಮಂದಣ್ಣ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿಕ್ಕ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಯಾರೂ ಊಹಿಸದ ರೀತಿಯಲ್ಲಿ ಅವರು ಜನಪ್ರಿಯತೆ ಪಡೆದುಕೊಂಡರು. ಕನ್ನಡದ ‘ಕಿರಿಕ್​ ಪಾರ್ಟಿ’ಯಿಂದ (Kirik Party) ಆರಂಭವಾದ ಅವರ ಪಯಣ ಈಗ ಬಾಲಿವುಡ್​ವರೆಗೆ ಹೋಗಿ ನಿಂತಿದೆ. ಬಾಲಿವುಡ್​ನಲ್ಲೂ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ದಕ್ಷಿಣದ ಹಲವು ಸ್ಟಾರ್ ನಟರ ಜತೆ ತೆರೆಹಂಚಿಕೊಂಡ ಹೆಚ್ಚುಗಾರಿಕೆ ಅವರದ್ದು. ರಶ್ಮಿಕಾಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಕಡೆಯಿಂದ ಬರ್ತ್​ಡೇ ವಿಶ್​ಗಳು ಬರುತ್ತಿವೆ.

ರಶ್ಮಿಕಾ ಮಂದಣ್ಣ ಹುಟ್ಟಿದ್ದು 1996ರ ಏಪ್ರಿಲ್​ 5ರಂದು. ಅಂದರೆ, ಅವರಿಗೆ ಈಗಿನ್ನೂ 26ರ ಹರೆಯ. ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಅವರಿಗೆ ಕೇವಲ 20 ವರ್ಷ. ಆರು ವರ್ಷಗಳಲ್ಲಿ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಲವು ಅಚ್ಚರಿಗಳು ಅವರ ಬದುಕಿನಲ್ಲಿ ನಡೆದಿವೆ. ಯಾವುದೇ ನೆಗೆಟಿವಿಟಿಗೆ ತಲೆಕೆಡಿಸಿಕೊಳ್ಳದೆ, ಕೇವಲ ಪಾಸಿಟಿವಿಟಿ ಹಂಚುವ ಕೆಲಸ ಅವರಿಂದ ಆಗುತ್ತಿದೆ.

2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ರಶ್ಮಿಕಾ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಪುನೀತ್​ ರಾಜ್​ಕುಮಾರ್, ಗಣೇಶ್​ ಜತೆ ತೆರೆಹಂಚಿಕೊಂಡರು. ಇದೇ ಸಮಯದಲ್ಲಿ ಅವರಿಗೆ ತೆಲುಗಿನಿಂದ ಆಫರ್ ಬಂತು. ‘ಚಲೋ’ ಚಿತ್ರದಿಂದ ಅವರಿಗೆ ಟಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಿತು. ಇದಾದ ಬಳಿಕ ತೆರೆಗೆ ಬಂದಿದ್ದು ‘ಗೀತ ಗೋವಿಂದಂ’ ಸಿನಿಮಾ. ವಿಜಯ್ ದೇವರಕೊಂಡ ಅಭಿನಯದ ಈ ಚಿತ್ರದಿಂದ ರಶ್ಮಿಕಾ ಲಕ್​ ಸಂಪೂರ್ಣ ಬದಲಾಯಿತು. ಅವರ ವೃತ್ತಿ ಜೀವನವನ್ನು ಈ ಸಿನಿಮಾ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.

ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ‘ಪುಷ್ಪ’ ಸಿನಿಮಾದಲ್ಲಿ ಅವರು ನಿರ್ವಹಿಸಿರುವ ಶ್ರೀವಲ್ಲಿ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ, ರಶ್ಮಿಕಾ ‘ಮಿಷನ್​ ಮಜ್ನು’, ‘ಗುಡ್​ಬೈ’ ಹಾಗೂ ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳಿಗಾಗಿ ಅಭಿಮಾನಿಗಳು ಕಾದಿದ್ದಾರೆ.

ಸ್ಟಾರ್​ ನಟ/ನಟಿಯರ ಬರ್ತ್​ಡೇ ಎಂದರೆ ಚಿತ್ರತಂಡದಿಂದ ಪೋಸ್ಟರ್​ ಅಥವಾ ಟೀಸರ್ ರಿಲೀಸ್ ಆಗೋದು ವಾಡಿಕೆ. ರಶ್ಮಿಕಾ ನಟಿಸುತ್ತಿರುವ ಈ ಮೂರು ಸಿನಿಮಾಗಳಿಂದ ಯಾವುದಾದರೂ ಅಪ್​ಡೇಟ್​ ಸಿಗಲಿದೆಯೇ ಎಂಬ ಬಗ್ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ರಶ್ಮಿಕಾಗೆ ಸಾಕಷ್ಟು ಸೆಲೆಬ್ರಿಟಿಗಳು ಬರ್ತ್​ಡೇ ವಿಶ್​ ತಿಳಿಸಿದ್ದಾರೆ. ಅಭಿಮಾನಿಗಳು ರಶ್ಮಿಕಾ ಫೋಟೋ ಹಂಚಿಕೊಂಡು ವಿಶ್​ ತಿಳಿಸುತ್ತಿದ್ದಾರೆ. ಅವರ ಹೊಸ ಸಿನಿಮಾ ಬಗ್ಗೆ ಇಂದು ಘೋಷಣೆ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ನಾನು ಪ್ಯಾನ್​ ಇಂಡಿಯಾ ನಟಿ ಆಗಬೇಕು’; ರಶ್ಮಿಕಾ ಮಂದಣ್ಣ ಹೀಗೆ ಹೇಳಲು ಇದೆ ಒಂದು ಮುಖ್ಯ ಕಾರಣ

ರಶ್ಮಿಕಾ ಮಂದಣ್ಣ, ಪೂಜಾ ಬಳಿಕ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಮತ್ತೋರ್ವ ಕನ್ನಡದ ನಟಿ