Rashmika Mandanna: ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ

|

Updated on: Feb 25, 2021 | 3:52 PM

Rashmika Mandanna: ಇತ್ತೀಚೆಗೆ ಹೈದಾರಾಬಾದ್​ನಲ್ಲಿ ಮನೆ ಖರೀದಿಸಿದ್ದ ರಶ್ಮಿಕಾ ಮಂದಣ್ಣ ಈಗ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರಂತೆ.

Rashmika Mandanna: ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
Follow us on

ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದ ಬೇಡಿಕೆಯ ನಟಿ. ಅಷ್ಟೇ ಅಲ್ಲ, ಈಗ ಅವರು ಬಾಲಿವುಡ್​ಗೂ ಕಾಲಿಟ್ಟಿದ್ದು, ಅಲ್ಲಿಯೂ ಧೂಳೆಬ್ಬಿಸಲು ರೆಡಿ ಆಗಿದ್ದಾರೆ. ರಶ್ಮಿಕಾ ಶೂಟಿಂಗ್ಗಾ​​ಗಿ ​ ಟಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ, ಅವರು ಬಹುತೇಕ ಸಮಯವನ್ನು ಹೈದರಾಬಾದ್​​ನಲ್ಲೇ ಕಳೆಯುತ್ತಿದ್ದಾರೆ. ಇದಕ್ಕಾಗಿಯೇ ಅವರು ಹೈದರಾಬಾದ್​ನಲ್ಲಿ ಮನೆ ಒಂದನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಅವರು ಐಷಾರಾಮಿ ಎಸ್​ಯುವಿ ಖರೀದಿಸಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ಅವರು ಮತ್ತೆ ಸುದ್ದಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮುಂಬೈನಲ್ಲಿ ಮನೆ ಖರೀದಿಸಿದ್ದು!

ಹೌದು, ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರಂತೆ. ಮುಂಬೈಗೆ ತೆರಳಿದಾಗ ಅವರು ಸಾಮಾನ್ಯವಾಗಿ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ, ಈಗ ಅವರು ಸಿದ್ಧಾರ್ಥ್​ ಮಲ್ಹೋತ್ರಾ ನಟನೆಯ ಮಿಷನ್​ ಮಂಜು ಚಿತ್ರಕ್ಕಾಗಿ ಅವರು ಮುಂಬೈನಲ್ಲಿ ನೆಲಸಬೇಕಾಗಿ ಬರುತ್ತದೆ. ಹೀಗಾಗಿ, ರಶ್ಮಿಕಾ ಮನೆ ಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

ಬಾಲಿವುಡ್​ಗೆ ಕಾಲಿಟ್ಟ ನಂತರ ಬಹುತೇಕ ನಟ-ನಟಿಯರು ಮುಂಬೈನಲ್ಲಿ ಫ್ಲ್ಯಾಟ್​ ಖರೀದಿಸುವುದು ವಾಡಿಕೆ. ಈಗ ರಶ್ಮಿಕಾ ಕೂಡ ಇದೇ ಮಾರ್ಗ ಅನುಸರಿಸಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನವೇ ಅವರು ಮನೆ ಖರೀದಿಸಿದ್ದು ವಿಶೇಷ. ಮಿಷನ್​ ಮಜ್ನು ಚಿತ್ರಕ್ಕಾಗಿ ರಶ್ಮಿಕಾ ಹಿಂದಿ ಕಲಿಯುತ್ತಿದ್ದಾರೆ ಎನ್ನಲಾಗಿದೆ. ಮಿಷನ್​ ಮಜ್ನು ನಂತರ ಡೆಡ್ಲಿ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜತೆ ರಶ್ಮಿಕಾ ತೆರೆ ಹಂಚಿಕೊಳ್ಳುವುದಕ್ಕೆ ತುಂಬಾನೇ ಎಕ್ಸೈಟ್​ ಆಗಿದ್ದಾರಂತೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗೆ ‘ಪೊಗರು’, ಅವರು ಮಾಡಿದ ತಪ್ಪನ್ನು ಕನ್ನಡಿಗರು ಕ್ಷಮಿಸ್ತಾರಾ?

ಸೂಪರ್​ ಸ್ಟಾರ್​ ಪಟ್ಟಕ್ಕೇರಲು ರಶ್ಮಿಕಾ ಹರಸಾಹಸ, ರಾಮ್‌ ಚರಣ್ ಜೊತೆ ನಟಿಸಲು ಕಷ್ಟಪಟ್ಟು ಡೇಟ್‌ ಹೊಂದಿಸಿಕೊಳ್ತಿದ್ದಾರಂತೆ..

Published On - 3:42 pm, Thu, 25 February 21