2016ರ ಡಿಸೆಂಬರ್ 30ರಂದು ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ತೆರೆಗೆ ಬಂದಿತ್ತು. ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ಈ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ (Rashmika Mandanna) ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾ ತೆರೆಗೆ ಬಂದು ಇಂದಿಗೆ ಐದು ವರ್ಷ ಕಳೆದಿದೆ. ‘ಕಿರಿಕ್ ಪಾರ್ಟಿ’ ಸಿನಿಮಾ ರಶ್ಮಿಕಾ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದೆ. ಈ ಐದು ವರ್ಷದಲ್ಲಿ ರಶ್ಮಿಕಾ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಕಲಿತಿದ್ದಾರೆ. ಈ ಬಗ್ಗೆ ರಶ್ಮಿಕಾ ಬರೆದುಕೊಂಡಿದ್ದಾರೆ. ಸಿನಿ ಬದುಕಿನಲ್ಲಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ ರಶ್ಮಿಕಾ. ಈ ಫೋಟೋಗೆ ಉದ್ದನೆಯ ಕ್ಯಾಪ್ಶನ್ ಬರೆದಿದ್ದಾರೆ. ತಾವು ಕಲಿತ ವಿಚಾರಗಳ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ, ರಶ್ಮಿಕಾ ಮಂದಣ್ಣ ಕಲಿತ ಅಂಶಗಳೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.
ರಶ್ಮಿಕಾ ಸದ್ಯ ‘ಪುಷ್ಪ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದಲ್ಲದೆ, ಬಾಲಿವುಡ್ನ ಎರಡು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ
‘ಪುಷ್ಪ’ ಗೆಲುವಿನ ಬಳಿಕ ರಶ್ಮಿಕಾಗೆ ಬಂಪರ್ ಚಾನ್ಸ್; ಮತ್ತೋರ್ವ ಸ್ಟಾರ್ ನಟನಿಗೆ ಕೊಡಗಿನ ಕುವರಿ ಜೋಡಿ?