
ರಶ್ಮಿಕಾ ಮಂದಣ್ಣ (Rashmika Mandanna) ಅವರು ಭಾರತದ ಬಹುಬೇಡಿಕೆಯ ನಟಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇರೋದು ಗೊತ್ತೇ ಇದೆ. ಈ ಕಾರಣದಿಂದಲೇ ಅವರ ಕಾಲ್ಶೀಟ್ ಪಡೆಯಲು ಎಲ್ಲರೂ ಆಸಕ್ತಿ ತೋರಿಸುತ್ತಾರೆ. ಆದರೆ, ಅದು ಅಷ್ಟು ಸುಲಭ ಅಲ್ಲ. ಈಗ ರಶ್ಮಿಕಾ ಈ ಮೊದಲು ನೀಡಿರೋ ಹೇಳಿಕೆ ವೈರಲ್ ಆಗಿದೆ. ತಾವು ದುಬಾರಿ ನಟಿ ಎಂಬುದನ್ನು ಅವರು ಒಪ್ಪಿಕೊಳ್ಳಲೇ ಇಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.
ರಶ್ಮಿಕಾ ಮಂದಣ್ಣ ಅವರ ಜೊತೆ ಸಿನಿಮಾ ಮಾಡಬೇಕು ಎಂದರೆ ಅವರಿಗೆ ಕಥೆ ಹಾಗೂ ಪಾತ್ರ ಎರಡೂ ಇಷ್ಟ ಆಗಬೇಕು. ಹಣ ನೀಡುತ್ತಾರೆ ಎನ್ನುವ ಕಾರಣಕ್ಕೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳೋದಿಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲ. ಈ ಮೊದಲು ಕಾರ್ಯಕ್ರಮ ಒಂದರಲ್ಲಿ ಅವರು ಹೇಳಿದಂತಹ ಮಾತು ವೈರಲ್ ಆಗಿ ಗಮನ ಸೆಳೆದಿದೆ.
ರಶ್ಮಿಕಾ ಮಂದಣ್ಣ ಅವರು ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಆಗ ರಶ್ಮಿಕಾಗೆ ‘ನೀವು ಭಾರತದ ದುಬಾರಿ ನಟಿ’ ಎಂದು ಹೇಳಲಾಯಿತು. ಆದರೆ, ಇದನ್ನು ಅವರು ಒಪ್ಪಿಕೊಳ್ಳಲಿಲ್ಲ. ‘ಇಲ್ಲ ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅದು ನಿಜವಲ್ಲ’ ಎಂದು ಹೇಳುವ ಮೂಲಕ ಅದು ನಿಜವಲ್ಲ ಎಂದು ಸ್ಪಷ್ಟಪಡಿಸಿದರು. ರಶ್ಮಿಕಾ ಚಿತ್ರರಂಗಕ್ಕೆ ಬಂದು ದಶಕ ಕಳೆದಿಲ್ಲ. ಆದಾಗ್ಯೂ ಅವರು ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ ಎನ್ನಬಹುದು. ವರ್ಷ ಕಳೆದಂತೆ ಅವರ ಬೇಡಿಕೆ ಮತ್ತಷ್ಟು ಹೆಚ್ಚಲಿದೆ.
ಇದನ್ನೂ ಓದಿ: ಒಮನ್ನಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ಸುತ್ತಾಟ; ಅಭಿಮಾನಿಗಳ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’, ‘ಛಾವಾ’, ‘ಅನಿಮಲ್’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರಕ್ಕೆ ರಶ್ಮಿಕಾ ನಾಯಕಿ. ಆದರೆ, ಈ ಸಿನಿಮಾ ಯಶಸ್ಸು ಕಾಣಲೇ ಇಲ್ಲ. ಇದು ಅವರ ವೃತ್ತಿ ಜೀವನಕ್ಕೆ ಕೊಂಚ ಹಿನ್ನಡೆ ತಂದಿದೆ. ಆದರೆ, ಇದು ಅವರ ವೃತ್ತಿ ಜೀವನವನ್ನು ನಾಶ ಮಾಡಿಲ್ಲ. ಅವರ ಬೇಡಿಕೆ ಈಗಲೂ ಮುಂದುವರಿದಿದೆ. ಅವರ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:26 am, Fri, 11 April 25