ಕನ್ನಡದಲ್ಲಿ ಒಂದು ಲೈನ್ ಹೇಳಲೂ ಕಷ್ಟಪಟ್ಟ ರಶ್ಮಿಕಾ; ಮೊದಲ ಆಡಿಷನ್ ವಿಡಿಯೋ ಇಲ್ಲಿದೆ ನೋಡಿ..

ರಶ್ಮಿಕಾ ಮಂದಣ್ಣ ಅವರು ಕನ್ನಡ ಮಾತನಾಡಲು ಕಷ್ಟಪಡುತ್ತಾರೆ ಎಂಬ ಕಾರಣಕ್ಕೆ ಈ ಮೊದಲು ಟ್ರೋಲ್ ಆಗಿದ್ದರು. ಈಗ ಅವರ ಹಳೇ ವಿಡಿಯೋ ವೈರಲ್ ಆಗಿದೆ. ಕನ್ನಡದಲ್ಲಿ ಚಿಕ್ಕ ಡೈಲಾಗ್​ ಕೂಡ ಹೇಳಲು ಆಗದೇ ಅವರು ಸುಸ್ತಾಗಿದ್ದರು. ಈ ವಿಡಿಯೋದಲ್ಲಿ ಇರುವ ರಶ್ಮಿಕಾ ಮಂದಣ್ಣ ಅವರೇ ನಂತರ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದರು ಎಂದರೆ ನಂಬಲೇ ಬೇಕು.

ಕನ್ನಡದಲ್ಲಿ ಒಂದು ಲೈನ್ ಹೇಳಲೂ ಕಷ್ಟಪಟ್ಟ ರಶ್ಮಿಕಾ; ಮೊದಲ ಆಡಿಷನ್ ವಿಡಿಯೋ ಇಲ್ಲಿದೆ ನೋಡಿ..
ರಶ್ಮಿಕಾ ಮಂದಣ್ಣ

Updated on: Oct 04, 2024 | 8:32 PM

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಬಹುಬೇಡಿಕೆಯ ಪ್ಯಾನ್​ ಇಂಡಿಯಾ ಸ್ಟಾರ್​. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಕೋಟ್ಯಂತರ ಫಾಲೋವರ್ಸ್​ ಇದ್ದಾರೆ. ಹಲವಾರು ಸಿನಿಮಾಗಳ ಆಫರ್​ ಕೈಯಲ್ಲಿ ಇಟ್ಟುಕೊಂಡು ರಶ್ಮಿಕಾ ಮಿಂಚುತ್ತಿದ್ದಾರೆ. ಮಹೇಶ್ ಬಾಬು, ಸಿದ್ದಾರ್ಥ್​ ಮಲ್ಹೋತ್ರ, ದಳಪತಿ ವಿಜಯ್, ರಣಬೀರ್​ ಕಪೂರ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಮುಂತಾದ ಸ್ಟಾರ್​ ಕಲಾವಿದರ ಜೊತೆ ನಟಿಸಿ ರಶ್ಮಿಕಾ ಜನಪ್ರಿಯತೆ ಪಡೆದಿದ್ದಾರೆ. ಆದರೆ 2016ಕ್ಕೂ ಮುನ್ನ ಹೀಗಿರಲಿಲ್ಲ. ಅವರು ಆಡಿಷನ್​ ನೀಡುವಾಗ ಒಂದು ಚಿಕ್ಕ ಡೈಲಾಗ್​ ಹೇಳಲು ಕೂಡ ಕಷ್ಟಪಟ್ಟಿದ್ದರು. ಆ ವಿಡಿಯೋ ಈಗ ವೈರಲ್​ ಆಗಿದೆ.

ರಶ್ಮಿಕಾ ಮಂದಣ್ಣ ಅವರು ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಭಾರಿ ಫೇಮಸ್​ ಆದರು. ಅದು ಅವರ ಮೊದಲ ಸಿನಿಮಾ. ಅದಕ್ಕೂ ಮುನ್ನ ಅವರು ಕೆಲವು ಪ್ರಾಜೆಕ್ಟ್​ಗಳಿಗೆ ಆಡಿಷನ್​ ನೀಡಿದ್ದರು. ಮೊಟ್ಟ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಅವರು ಆಡಿಷನ್​ ನೀಡಿದ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಕನ್ನಡದಲ್ಲಿ ಡೈಲಾಗ್​ ಹೇಳಲು ಅವರು ಕಷ್ಟಪಟ್ಟಿದ್ದು ಈ ವಿಡಿಯೋದಲ್ಲಿದೆ.

ರಶ್ಮಿಕಾ ಮಂದಣ್ಣ ಆಡಿಷನ್​ ವಿಡಿಯೋ:

‘ನನ್ನ ಹೆಸರು ರಶ್ಮಿಕಾ ಅಂತ. ವಯಸ್ಸು 19 ವರ್ಷ. ಎತ್ತರ 5.5. ನಾನು ದ್ವಿತೀಯ ವರ್ಷದ ಬಿ.ಎ. ಓದುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಆಡಿಷನ್​ ನೀಡುತ್ತಿರುವುದು’ ಎಂದು ಬಹುತೇಕ ಇಂಗ್ಲಿಷ್​ನಲ್ಲಿ ರಶ್ಮಿಕಾ ಮಂದಣ್ಣ ಹೇಳುತ್ತಾರೆ. ‘ಆದಷ್ಟು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡಿ’ ಎಂದು ಚಿತ್ರತಂಡದವರು ಸೂಚನೆ ನೀಡುತ್ತಾರೆ. ‘ಫಸ್ಟ್​ ಟೈಮ್​ ಆಡಿಷನ್​ ಮಾಡ್ತಿರದು’ ಎಂದು ಹೇಳಿ ರಶ್ಮಿಕಾ ಮುಂದಿನ ಡೈಲಾಗ್​ ಹೇಳುತ್ತಾರೆ.

‘ಅತ್ತೆ ಆಗೋರ ಮುಂದೆ ಅಸಭ್ಯ ಮಾತು ಯಾಕೆ’ ಎಂಬ ಸಣ್ಣ ಡೈಲಾಗ್​ ಹೇಳಿದ ಬಳಿಕ ರಶ್ಮಿಕಾ ಅವರಿಗೆ ಮುಂದಿನ ಸಾಲು ಮರೆತು ಹೋಗುತ್ತದೆ. ‘ನನಗೆ ಇದು ಗೊತ್ತಾಗುತ್ತಿಲ್ಲ. ಇದು ನನ್ನಿಂದ ಸಾಧ್ಯ ಇಲ್ಲ’ ಎಂದು ರಶ್ಮಿಕಾ ಕೈಚೆಲ್ಲುತ್ತಾರೆ. ಮುಂದಿನ ವಿಡಿಯೋದಲ್ಲಿ ಅವರು ಸ್ವಲ್ಪ ಸುಧಾರಿಸಿದಂತೆ ಕಾಣುತ್ತಾರೆ. ಕಷ್ಟಪಟ್ಟು ಎರಡು ಡೈಲಾಗ್​ ಕನ್ನಡದಲ್ಲಿ ಹೇಳುತ್ತಾರೆ. ಡ್ಯಾನ್ಸ್ ಮಾಡಿ ತಮ್ಮ ಪ್ರತಿಭೆ ತೋರಿಸುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಜನರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?

ಸಲ್ಮಾನ್​ ಖಾನ್​ ಜೊತೆ ‘ಸಿಕಂದರ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​ ಜೊತೆ ‘ಪುಷ್ಪ 2’ ಸಿನಿಮಾದಲ್ಲಿ ಅವರು ತೆರೆ ಹಂಚಿಕೊಂಡಿದ್ದಾರೆ. ಇನ್ನೂ ಅನೇಕ ಬಹುನಿರೀಕ್ಷಿತ ಸಿನಿಮಾಗಳಿಗೆ ಅವರು ಸಹಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us