ಅಲ್ಲು ಅರ್ಜುನ್-ರಶ್ಮಿಕಾ ರೀತಿ ಡ್ರೆಸ್ ಮಾಡಿಕೊಂಡು ರಸ್ತೆಯಲ್ಲಿ ಮಕ್ಕಳ ಡ್ಯಾನ್ಸ್

ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್​ ಅವರು ಈ ವಿಡಿಯೋ ನೋಡಿದರೆ ಖಂಡಿತವಾಗಿಯೂ ಖುಷಿಪಡುತ್ತಾರೆ. ಅಲ್ಲದೇ ಅವರು ಪ್ರತಿಕ್ರಿಯೆ ಕೂಡ ನೀಡುತ್ತಾರೆ. ಅಷ್ಟರಮಟ್ಟಿಗೆ ಈ ಮಕ್ಕಳ ಡ್ಯಾನ್ಸ್​ ಮುದ್ದಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ‘ಸೂಸೇಕಿ..’ ಹಾಡಿನ ಹಿಂದಿ ವರ್ಷನ್​ಗೆ ಮಕ್ಕಳಿಬ್ಬರು ಸಖತ್​ ಆಗಿ ಡ್ಯಾನ್ಸ್​ ಮಾಡಿದ ವಿಡಿಯೋ ವೈರಲ್​ ಆಗುತ್ತಿದೆ.

ಅಲ್ಲು ಅರ್ಜುನ್-ರಶ್ಮಿಕಾ ರೀತಿ ಡ್ರೆಸ್ ಮಾಡಿಕೊಂಡು ರಸ್ತೆಯಲ್ಲಿ ಮಕ್ಕಳ ಡ್ಯಾನ್ಸ್
ಡ್ಯಾನ್ಸ್​ ಮಾಡಿದ ಮಕ್ಕಳು
Follow us
ಮದನ್​ ಕುಮಾರ್​
|

Updated on: Sep 25, 2024 | 9:23 PM

ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ಫ್ಯಾನ್ಸ್​ ಕಾಯುತ್ತಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ಸೌಂಡು ಮಾಡುತ್ತಿವೆ. ಟೈಟಲ್​ ಸಾಂಗ್​ ನೋಡಿ ಅಲ್ಲು ಅರ್ಜುನ್​ ಅಭಿಮಾನಿಗಳು ಫಿದಾ ಆಗಿದ್ದರು. ಬಳಿಕ ರಶ್ಮಿಕಾ ಮಂದಣ್ಣ ಫ್ಯಾನ್ಸ್​ಗೋಸ್ಕರ ಡ್ಯುಯೆಟ್ ಸಾಂಗ್​ ಕೂಡ ಬಿಡುಗಡೆ ಮಾಡಲಾಯಿತು. ‘ಸೂಸೇಕಿ..’ ಹಾಡಿನ ಲಿರಿಕಲ್ ವಿಡಿಯೋ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿದೆ. ಈ ಹಾಡಿನ ಕ್ರೇಜ್​ ಎಷ್ಟಿದೆ ಎಂಬುದಕ್ಕೆ ಇಲ್ಲೊಂದು ಹೊಸ ಸಾಕ್ಷಿ ಸಿಕ್ಕಿದೆ. ರಸ್ತೆಯಲ್ಲಿ ಮಕ್ಕಳು ಈ ಹಾಡಿಗೆ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್​ ರೀತಿಯೇ ಮಕ್ಕಳಿಬ್ಬರು ಡ್ರೆಸ್​ ಮಾಡಿಕೊಂಡಿದ್ದಾರೆ. ‘ಸೂಸೇಕಿ..’ ಹಾಡಿನ ಹಿಂದಿ ವರ್ಷನ್​ಗೆ ಅವರಿಬ್ಬರು ಡ್ಯಾನ್ಸ್​ ಮಾಡಿದ್ದಾರೆ. ಮಕ್ಕಳ ಡ್ಯಾನ್ಸ್​ ನೋಡಲು ಜನರು ಸೇರಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುವ ಮೂಲಕ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ವಿಡಿಯೋವನ್ನು ನೋಡಿದರೆ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್​ ಅವರು ಖಂಡಿತವಾಗಿಯೂ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ನೆಟ್ಟಿಗರ ಅಭಿಪ್ರಾಯ. ‘ಪುಷ್ಪ 2’ ಸಿನಿಮಾ ಡಿಸೆಂಬರ್​ 6ರಂದು ಬಿಡುಗಡೆ ಆಗಲಿದೆ. ಸಿನಿಮಾ ಮೇಲೆ ಜನರಿಗೆ ಇರುವ ಕ್ರೇಜ್​ ನೋಡಿದರೆ ಬಾಕ್ಸ್​ ಆಫೀಸ್​ನಲ್ಲಿ ಬಿರುಗಾಳಿ ಬೀಸುವುದು ಗ್ಯಾರಂಟಿ ಎಂಬುದು ಸಿನಿಪ್ರಿಯರ ನಂಬಿಕೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಈ ಸಿನಿಮಾವನ್ನು ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: 2.74 ಲಕ್ಷ ರೂಪಾಯಿ ಬೆಲೆಯ ಬ್ಯಾಗ್​ ಹಿಡಿದು ಬಂದ ರಶ್ಮಿಕಾ ಮಂದಣ್ಣ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಸಿನಿಮಾದ ಕೆಲಸಗಳು ಕಾರಣಾಂತರಗಳಿಂದ ತಡವಾಗಿದ್ದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡುವುದು ಅನಿವಾರ್ಯ ಆಯಿತು. ನಿರ್ದೇಶಕ ಸುಕುಮಾರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶದ ಅನೇಕ ಕಡೆಗಳಲ್ಲಿ ಈ ಸಿನಿಮಾ ಧೂಳೆಬ್ಬಿಸಲಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೊತೆ ಡಾಲಿ ಧನಂಜಯ್, ಫಹಾದ್​ ಫಾಸಿಲ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ವಿವಿಧ ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ರಿಲೀಸ್​ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು