ತಾವು ನಟಿಸಿರುವ ಸಿನಿಮಾ ತೆರೆಗೆ ಬರುತ್ತಿದೆ ಎಂದರೆ ನಟ-ನಟಿಯರು ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ಜತೆಯೇ ಫಸ್ಟ್ ಡೇ ಫಸ್ಟ್ ಡೇ ಶೋ ನೋಡೊದು ಸಂಪ್ರದಾಯ. ಸ್ಯಾಂಡಲ್ವುಡ್ನಲ್ಲಂತೂ ಈ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಗಾಂಧಿ ನಗರವನ್ನು ದೇವಾಲಯದಂತೆ ಕಾಣುವ ಕಲಾವಿದರು, ಮೊದಲ ಶೋಗೆ ಹಾಜರಿ ಹಾಕುತ್ತಾರೆ. ಇಂದು ತೆರೆಕಂಡ ಪೊಗರು ಸಿನಿಮಾದಲ್ಲೂ ಅಷ್ಟೇ. ನಟ ಧ್ರುವ ಸರ್ಜಾ ಗಾಂಧಿ ನಗರದಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ಜತೆ ಸಿನಿಮಾ ನೋಡಿದ್ದಾರೆ. ಆದರೆ, ಅಲ್ಲೆಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡೇ ಇಲ್ಲ!
ರಶ್ಮಿಕಾ ಮಂದಣ್ಣ ಈಗ ಕನ್ನಡದ ನಟಿಯಾಗಿ ಮಾತ್ರ ಉಳಿದಿಲ್ಲ. ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು, ಹೈದರಾಬಾದ್ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಇದರ ಜತೆಗೆ ಬಾಲಿವುಡ್ ಸಿನಿಮಾದಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ರಶ್ಮಿಕಾಗೆ ಕೈತುಂಬ ಸಿನಿಮಾಗಳು ಇವೆ. ಬೇರೆ ಬೇರೆ ಚಿತ್ರದ ಶೂಟಿಂಗ್ನಲ್ಲಿ ಅವರು ಬ್ಯುಸಿ ಇರುತ್ತಾರೆ. ಹೀಗಾಗಿ, ಅವರು ಫಸ್ಟ್ ಡೇ ಫಸ್ಟ್ ಡೇ ಶೋಗೆ ಬರಲು ಸಾಧ್ಯವಾಗಿಲ್ಲ ಎಂದಿಟ್ಟುಕೊಳ್ಳೋಣ.
ಆದರೆ.. ರಶ್ಮಿಕಾ ಕಡೆಯಿಂದ ಟ್ವಿಟ್ಟರ್ನಲ್ಲಿ ಪೊಗರು ಸಿನಿಮಾ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಪೋಸ್ಟ್ ಬಿದ್ದಿಲ್ಲ. ಇನ್ಸ್ಟಾಗ್ರಾಂನಲ್ಲಿ ಒಂದೇ ಒಂದು ಸ್ಟೇಟಸ್ ಕೂಡ ಹಾಕಿಕೊಂಡಿಲ್ಲ. ಕೊನೆಯ ಪಕ್ಷ, ಇಂದು ಸಿನಿಮಾ ರಿಲೀಸ್ ಆಗುತ್ತಿದೆ. ಅಭಿಮಾನಿಗಳು ಸಿನಿಮಾ ನೋಡಿ ಎಂದು ಇನ್ಸ್ಟಾಗ್ರಾಂನಲ್ಲಿ ಒಂದು ಸ್ಟೇಟಸ್ ಆದರೂ ಹಾಕಬಹುದಿತ್ತಲ್ಲ ಎನ್ನುವುದು ಕೆಲವರ ಅಭಿಪ್ರಾಯ.
ಇತ್ತೀಚೆಗೆ ರಶ್ಮಿಕಾ ನಟನೆಯ ಟಾಪ್ ಟಕ್ಕರ್ ವಿಡಿಯೋ ಸಾಂಗ್ ರಿಲೀಸ್ ಆಗಿತ್ತು. ಈ ವಿಡಿಯೋ ನೋಡಿ ಎಂದು ರಶ್ಮಿಕಾ ಮಂದಣ್ಣ ತುಂಬಾನೇ ವಿನಮ್ರವಾಗಿ ಅಭಿಮಾನಿಗಳ ಬಳಿ ಕೋರಿಕೊಂಡಿದ್ದರು. ಹೀಗಿರುವಾಗ, ಕನ್ನಡದ ಸಿನಿಮಾ ರಿಲೀಸ್ ಆಗುತ್ತಿದ್ದರೂ ಅವರು ಒಂದೇ ಒಂದು ಪೋಸ್ಟ್ ಹಾಕದೇ ಇರುವುದು ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ.
ಇದನ್ನೂ ಓದಿ: Pogaru Movie Review: ಪೊಗರು ವಿಮರ್ಶೆ: ಫ್ಯಾನ್ಸ್ ಖುಷಿಪಡಿಸಲು ಮತ್ತೆ ಮಾಸ್ ಅವತಾರ ಎತ್ತಿದ ಧ್ರುವ ಸರ್ಜಾ