
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಬಾಲಿವುಡ್‌ನಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಅವರು ದುಬಾರಿ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. 500+ ಕೋಟಿ ರೂಪಾಯಿ ಗಳಿಕೆ ಮಾಡಿದ ಮೂರು ಚಿತ್ರಗಳ (ಅನಿಮಲ್, ಪುಷ್ಪ 2, ಛಾವಾ) ಭಾಗವಾಗಿದ್ದಾರೆ ಅವರು. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ನಾಲ್ಕುವರೆ ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಹೀಗಿದ್ದರೂ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಆಗುವುದಂತೂ ನಿಂತಿಲ್ಲ. ಈಗ ಅವರು ‘ನಾನು ಕರ್ನಾಕದವಳು’ ಎಂದಿದ್ದಕ್ಕೂ ಟ್ರೋಲ್ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದರು. ಸಲ್ಮಾನ್ ಖಾನ್ ಕೂಡ ಇದರಲ್ಲಿ ಜೊತೆಗೆ ಇದ್ದರು. ಈ ವೇಳೆ ಭಾಷೆ ಕಲಿಯೋದು ಎಷ್ಟು ಕಷ್ಟ ಎಂಬುದನ್ನು ರಶ್ಮಿಕಾ ಮಂದಣ್ಣ ವಿವರಿಸಿದ್ದರು. ಕರ್ನಾಟಕದವರಾಗಿ ಕನ್ನಡ ಮಾತ್ರ ಬರುತ್ತಿತ್ತು ಎಂದು ರಶ್ಮಿಕಾ ಹೇಳಿರುವ ಸಾಲುಗಳನ್ನು ತೆಗೆದುಕೊಂಡು ಟೀಕೆ ಮಾಡಲಾಗಿದೆ.
ರಶ್ಮಿಕಾ ಮಂದಣ್ಣ ಅವರು ಈ ಮೊದಲು ನೀಡಿದ ಸಂದರ್ಶನ ಒಂದರಲ್ಲಿ ‘ನಾನು ಹೈದರಾಬಾದ್ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಈಗ ರಶ್ಮಿಕಾ ಕರ್ನಾಟಕದವರು ಎಂದಿದ್ದಾರೆ. ಅವರು ಸಿಂಪತಿ ಪಡೆದುಕೊಳ್ಳಲು ಹಾಗೂ ಪರಿಸ್ಥಿತಿಗೆ ತಕ್ಕಂತೆ ಊರನ್ನು ಬದಲಾಯಿಸುತ್ತಾರೆ ಎಂಬ ಕಾಮೆಂಟ್ಗಳು ವ್ಯಕ್ತವಾಗಿದೆ.
ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಪರಿಚಯ ಆಗಿದ್ದು ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ. ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಹೀರೋ. ಸಿನಿಮಾ ಸಂದರ್ಭದಲ್ಲಿ ರಶ್ಮಿಕಾ ಹಾಗೂ ರಕ್ಷಿತ್ ಪ್ರೀತಿಯಲ್ಲಿ ಬಿದ್ದರು. ನಿಶ್ಚಿತಾರ್ಥ ಮಾಡಿಕೊಂಡು ಅದನ್ನು ಮುರಿದುಕೊಂಡರು. ಈ ವಿಚಾರದಲ್ಲಿ ರಿಷಬ್ಗೆ ಈಗಲೂ ಸಿಟ್ಟಿದೆ. ಈ ಕಾರಣಕ್ಕೆ ಕಿರಿಕ್ ಪಾರ್ಟಿಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಹಾಕುವುದಿದ್ದರು ಅವರು ರಶ್ಮಿಕಾನ ಟ್ಯಾಗ್ ಮಾಡುವುದೇ ಇಲ್ಲ.
ಇದನ್ನೂ ಓದಿ: ‘ಸಿಕಂದರ್’ ಫ್ಲಾಪ್ ಆಗಿದ್ದಕ್ಕೆ ಬೇಸರದ ಮುಖ ಮಾಡಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 30ರಂದು ರಿಲೀಸ್ ಆಗಿದೆ. ಆದರೆ, ಸಿನಿಮಾ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಕಾಣುವ ಸೂಚನೆ ಸಿಕ್ಕಿಲ್ಲ. ಈ ಚಿತ್ರ ಮೊದಲ ದಿನ 26 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.