ಕನ್ನಡ ಚಿತ್ರರಂಗದಲ್ಲಿ ಕೆಟ್ಟ ಅನುಭವ ಆಗಿತ್ತು: ಸೊನಾಲಿ ಬೇಂದ್ರೆ
Sonali Bendre: ಸೊನಾಲಿ ಬೇಂದ್ರೆ 2000 ದಶಕದ ಸ್ಟಾರ್ ನಟಿ. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲಿಯೂ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡದ ಕೇವಲ ಒಂದು ಸಿನಿಮಾದಲ್ಲಿ ಮಾತ್ರ ಸೊನಾಲಿ ನಟಿಸಿದ್ದಾರೆ. ಆದರೆ ಆ ಸಿನಿಮಾದಲ್ಲಿ ನಟಿಸುವಾಗ ಕೆಟ್ಟ ಅನುಭವ ಅವರಿಗೆ ಆಯ್ತಂತೆ.

ಬಾಲಿವುಡ್ ನಟಿಯರು ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣದ ಚಿತ್ರರಂಗದಲ್ಲಿ ಅವಕಾಶ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ಇಲ್ಲಿ ನಟಿಸಿ ಹೋದವರು, ಬಾಲಿವುಡ್ಗಿಂತಲೂ ದಕ್ಷಿಣ ಭಾರತ ಚಿತ್ರರಂಗ ಎಷ್ಟು ಎತ್ತದಲ್ಲಿದೆ, ಪ್ರತಿಭಾವಂತರು ಇಲ್ಲಿದ್ದಾರೆ ಎಂದೆಲ್ಲ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಬಾಲಿವುಡ್ನವರು ದಕ್ಷಿಣ ಭಾರತ ಚಿತ್ರರಂಗದವರಿಂದ ಕಲಿಯಬೇಕು ಎನ್ನುತ್ತಿದ್ದಾರೆ. ಆದರೆ ಬಾಲಿವುಡ್ನ ಖ್ಯಾತ ನಟಿ ಸೊನಾಲಿ ಬೇಂದ್ರೆ ಮಾತ್ರ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ತಕರಾರು ಎತ್ತಿದ್ದಾರೆ. ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಅಮೆಜಾನ್ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಸೊನಾಲಿ ಬೇಂದ್ರೆ, ಕನ್ನಡ ಚಿತ್ರರಂಗದಲ್ಲಿ ತಮಗೆ ಕಹಿ ಅನುಭವ ಆಯ್ತೆಂದು ಹೇಳಿಕೊಂಡಿದ್ದಾರೆ. ‘ನಾನು ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರ ನಡುವೆ ಒಂದು ಕನ್ನಡ ಸಿನಿಮಾದಲ್ಲಿ ನಾನು ನಟಿಸಿದ್ದೆ. ಆದರೆ ನನಗೆ ಆ ಸಿನಿಮಾದಲ್ಲಿ ಬಹಳ ಕೆಟ್ಟ ಅನುಭವ ಆಯ್ತು. ಇನ್ನೆಂದೂ ಕನ್ನಡ ಸಿನಿಮಾನಲ್ಲಿ ನಟಿಸುವಿದಲ್ಲ ಎಂಬ ನಿರ್ಧಾರ ಮಾಡಿದೆ. ಆ ನಂತರ ಎಂದೂ ನಾನು ಕನ್ನಡ ಸಿನಿಮಾನಲ್ಲಿ ನಟಿಸಲಿಲ್ಲ’ ಎಂದಿದ್ದಾರೆ.
ಸೊನಾಲಿ ಬೇಂದ್ರೆ ಕನ್ನಡದ ‘ಪ್ರೀತ್ಸೆ’ ಸಿನಿಮಾನಲ್ಲಿ ನಟಿಸಿದ್ದರು. ಈ ಸಿನಿಮಾನಲ್ಲಿ ಶಿವರಾಜ್ ಕುಮಾರ್ ನಾಯಕ, ಉಪೇಂದ್ರ ಸಹ ಇದ್ದರು. ಶಾರುಖ್ ಖಾನ್ ನಟನೆಯ ‘ಡರ್’ ಸಿನಿಮಾದ ರೀಮೇಕ್ ಆಗಿದೆ ಈ ಸಿನಿಮಾ. ಸಿನಿಮಾದಲ್ಲಿ ಉಪೇಂದ್ರ ಪಾಗಲ್ ಪ್ರೇಮಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗ ಸೊನಾಲಿ ಬೇಂದ್ರೆಗೆ ಕೆಟ್ಟ ಅನುಭವ ಆಗಿತ್ತಂತೆ. ಹಾಗಾಗಿ ಅವರು ಮತ್ತೆಂದೂ ಸಹ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲವಂತೆ. ಆದರೆ ತಮಗೆ ಆದ ಕಹಿ ಅನುಭವ ಏನು ಎಂಬುದನ್ನು ಸೊನಾಲಿ ಬೇಂದ್ರೆ ಹೇಳಿಕೊಂಡಿಲ್ಲ.
ಇದನ್ನೂ ಓದಿ:ಸೊನಾಲಿ ಬೇಂದ್ರೆಗೆ ಇರಿಸಿದ್ದ ಚುಕ್ಕಿಯನ್ನು ಅಳಿಸಿದವರು ಯಾರು?
ಕನ್ನಡದ ‘ಪ್ರೀತ್ಸೆ’ ಸಿನಿಮಾನಲ್ಲಿ ನಟಿಸುವ ಮುನ್ನ ತಮಿಳಿನ ಎರಡು ಸಿನಿಮಾಗಳಲ್ಲಿ ಸೊನಾಲಿ ಬೇಂದ್ರೆ ನಟಿಸಿದ್ದರು. ‘ಪ್ರೀತ್ಸೆ’ ಸಿನಿಮಾದ ಬಳಿಕ ಸೊನಾಲಿ ಬೇಂದ್ರೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ‘ಮುರಾರಿ’ ಸಿನಿಮಾ ಮೂಲಕ. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಅದಾದ ಬಳಿಕ ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದರು. 2004 ರಲ್ಲಿ ಬಿಡುಗಡೆ ಆದ ‘ಶಂಕರ್ ದಾದ ಎಂಬಿಬಿಎಸ್’ ಸೊನಾಲಿ ಬೇಂದ್ರೆಯ ಕೊನೆ ಸಿನಿಮಾ. ಅದಾದ ಬಳಿಕ ಸುಮಾರು 10 ವರ್ಷಗಳ ಕಾಲ ಯಾವ ಸಿನಿಮಾದಲ್ಲಿಯೂ ನಟಿಸಲಿಲ್ಲ ಸೊನಾಲಿ. ಆ ಬಳಿಕ ಮತ್ತೆ ಹತ್ತು ವರ್ಷ ಗ್ಯಾಪ್ ತೆಗೆದುಕೊಂಡು ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ