
‘ಕೆಜಿಎಫ್’ ಸಿನಿಮಾ ಮೂಲಕ ಬೇರೆಯದೇ ಹಂತಕ್ಕೆ ಹೋದವರು ರವಿ ಬಸ್ರೂರು (Ravi Basruru) ಅವರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಾಸ್ ಸಿನಿಮಾಗಳು ಎಂದಾದಾಗ ಅವರಿಗೆ ಆಫರ್ ಹೋಗೋದು ಹೆಚ್ಚು. ಅವರು ನಿರ್ದೇಶನ ಮಾಡಿದ ‘ವೀರಚಂದ್ರಹಾಸ’ ಸಿನಿಮಾ ಸೆಪ್ಟೆಂಬರ್ 19ರಂದು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಈ ವೇಳೆ ಅವರು ತೆಲುಗು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
‘ಉಗ್ರಂ’, ‘ಕೆಜಿಎಫ್’, ಸಲಾರ್ ರೀತಿಯ ಸಿನಿಮಾಗಳಿಗೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದರು. ಈ ಸಿನಿಮಾಗಳ ಹಿನ್ನೆಲೆ ಸಂಗೀತ ಸಾಕಷ್ಟು ಗಮನ ಸೆಳೆಯಿತು. ಈ ಕಾರಣ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ‘ಸಲಾರ್’ ಚಿತ್ರದಿಂದ ಅವರಿಗೆ ಸಾಕಷ್ಟು ಆಫರ್‌ಗಳು ಬಂದವಂತೆ.
‘ಸಲಾರ್’ ಸಿನಿಮಾದ ಹಿನ್ನೆಲೆ ಸಂಗೀತ ಕೆಲವರಿಗೆ ಇಷ್ಟ ಆಗಿಲ್ಲ. ‘ಕೆಜಿಎಫ್’ ಚಿತ್ರದ ಪವರ್ ಫುಲ್ ಆಗಿಲ್ಲ ಎಂದು ಅನೇಕರು ಹೇಳಿದ್ದು ಇದೆ. ಆದರೆ, ರವಿ ಬಸ್ರೂರು ಜೀವನದಲ್ಲಿ ಈ ಚಿತ್ರ ಬದಲಾವಣೆ ತಂದಿತ್ತು. ‘ಸಲಾರ್ ಸಿನಿಮಾ ರಿಲೀಸ್ ಆದ ಬಳಿಕ ನನಗೆ ಅಮೆರಿಕ ಪ್ರೊಡಕ್ಷನ್ ಹೌಸ್ಗಳಿಂದ 3-4 ಫೋನ್ಗಳು ಬಂದವು ಎಂದು ಅವರು ಹೇಳಿದ್ದಾರೆ.
ರವಿ ಬಸ್ರೂರು ಅವರು ಸದ್ಯ ಸಾಕಷ್ಟು ಆಫರ್ ಪಡೆಯುತ್ತಿದ್ದಾರೆ. ಆದರೆ, ಮೊದಲಿನಷ್ಟು ಸಿನಿಮಾ ಹಿಟ್ ಆಗುತ್ತಿಲ್ಲ. ಈಗ ಅವರು ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಸಿನಿಮಾ ಜೊತೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರು 3-4 ವರ್ಷನ್ಗಳ ಮ್ಯೂಸಿಕ್ನ ಕಂಪೋಸ್ ಮಾಡಿಯಾಗಿದೆ. ಅವರು ಈ ಬಾರಿ ನಿರೀಕ್ಷೆಯನ್ನು ಮೀರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: s‘ಸಲಾರ್’ ಸಂಗೀತ ಹಿಟ್ ಆಗದಿರಲು ‘ಕೆಜಿಎಫ್’ ಕಾರಣ: ರವಿ ಬಸ್ರೂರು ವಿಶ್ಲೇಷಣೆ ಏನು?
ರವಿ ಬಸ್ರೂರು ಅವರು ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾಗಳನ್ನು ಅವರು ನಿರ್ದೇಶನ ಮಾಡುತ್ತಾರೆ. ಈ ಮೊದಲು ಸಣ್ಣ ಮಕ್ಕಳ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಪಾತ್ರಧಾರಿಗಳಿಗೆ ಯಶ್, ರಾಧಿಕಾ ಪಂಡಿತ್ ಮೊದಲಾದವರಿಂದ ವಾಯ್ಸ್ ಕೊಡಿಸಿದ್ದರು. ಆದರೆ, ಈ ಪ್ರಯತ್ನ ಯಶಸ್ಸು ಕಂಡಿರಲಿಲ್ಲ. ಈಗ ವೀರಚಂದ್ರಹಾಸ ಯಕ್ಷಗಾನ ಆಧರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.