AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀಮಿಯರ್ ಶೋನಲ್ಲೇ ಪ್ರೇಕ್ಷಕರ ಮನ ಗೆದ್ದ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ

ಹಾಸ್ಯ ನಟ ಮಹಂತೇಶ್ ಹಿರೇಮಠ ಅವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಮೂಲಕ ಜನರನ್ನು ನಗಿಸಿದ್ದಾರೆ. ಈಗ ಅವರು ‘ಅರಸಯ್ಯನ ಪ್ರೇಮ ಪ್ರಸಂಗ’ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಸೆಪ್ಟೆಂಬರ್ 19ರಂದು ಈ ಸಿನಿಮಾದ ಬಿಡುಗಡೆ. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋಗಳಲ್ಲೇ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಪ್ರೀಮಿಯರ್ ಶೋನಲ್ಲೇ ಪ್ರೇಕ್ಷಕರ ಮನ ಗೆದ್ದ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ
Arasayyana Prema Prasanga
ಮದನ್​ ಕುಮಾರ್​
|

Updated on: Sep 18, 2025 | 10:19 PM

Share

ಪ್ರೀಮಿಯರ್ ಶೋಗಳಲ್ಲಿ ಜನರು ಸಿನಿಮಾ ನೋಡಿ ಮೆಚ್ಚಿಕೊಂಡರೆ ನಂತರದ ದಿನಗಳಲ್ಲಿ ನೋಡಲು ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ. ಈ ವರ್ಷ ಸೂಪರ್ ಹಿಟ್ ಆದ ‘ಸು ಫ್ರಮ್ ಸೋ’ (Su From So) ಚಿತ್ರವೇ ಈ ಮಾತಿಗೆ ಸಾಕ್ಷಿ. ಈಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಅದೇ ರೀತಿ ಪ್ರೀಮಿಯರ್ ಶೋನಲ್ಲೇ ಜನರನ್ನು ಸೆಳೆದುಕೊಂಡಿದೆ. ಹೌದು, ‘ಅರಸಯ್ಯನ ಪ್ರೇಮಪ್ರಸಂಗ’ (Arasayyana Prema Prasanga) ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರೀಮಿಯರ್ ಶೋ ನೋಡಿದ ಜನರು ನಕ್ಕು ಎಂಜಾಯ್ ಮಾಡಿದ್ದಾರೆ. ಹಾಸ್ಯ ನಟ ಮಹಂತೇಶ್ ಹಿರೇಮಠ (Mahantesh Hiremath) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.

ಒಂದು ಡಿಫರೆಂಟ್ ಕಥೆಯನ್ನು ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಿನಿಮಾದ ಥೀಮ್ ಏನು ಎಂಬುದು ಟ್ರೇಲರ್ ಮೂಲಕವೇ ಗೊತ್ತಾಗಿದೆ. ಟ್ರೇಲರ್ ನೋಡಿದ ಎಲ್ಲರೂ ಚಿತ್ರತಂಡದ ಬೆನ್ನು ತಟ್ಟಿದ್ದರು. ಅದರಿಂದಲೇ ಜನರು ಪ್ರೀಮಿಯರ್ ಶೋಗಳಿಗೆ ಬರುವಂತಾಯಿತು. ಚಿತ್ರವು ಫ್ಯಾಮಿಲಿ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿದೆ.

‘ಸಿನಿಮಾದಲ್ಲಿ ಕಾಮಿಡಿ ತುಂಬ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಎಮೋಷನಲ್ ಆಗಿದೆ. ಆಗ ನಮಗೆ ಅಳುಬಂತು. ಪ್ರೀತಿಗೆ ಮೇಲು-ಬೀಳು ಎಂಬ ಭೇದ ಇಲ್ಲ ಎಂಬುದನ್ನು ಈ ಸಿನಿಮಾ ತೋರಿಸಿದೆ. ಸಮಯ ಹೇಗೆ ಕಳೆಯಿತು ಎಂಬುದೇ ಗೊತ್ತಾಗುವುದಿಲ್ಲ. ಅಷ್ಟು ಎಂಜಾಯ್ ಮಾಡಬಹುದು. ಮೊದಲಿನಿಂದ ಕೊನೆಯವರೆಗೆ ಸ್ವಲ್ಪ ಕೂಡ ಬೋರ್ ಆಗಲಿಲ್ಲ’ ಎಂಬಿತ್ಯಾದಿ ಪ್ರತಿಕ್ರಿಯೆಗಳು ಪ್ರೇಕ್ಷಕರಿಂದ ಸಿಕ್ಕಿವೆ.

ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ‘ಫ್ಯಾಮಿಲಿ ಪ್ರೇಕ್ಷಕರು ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಅರಸಯ್ಯನಿಗೆ ಪ್ರೇಯಸಿ ಸಿಗುತ್ತಾಳೋ ಇಲ್ಲವೋ ಎಂಬುದನ್ನು ನೀವು ಕೂಡ ಚಿತ್ರಮಂದಿರಕ್ಕೆ ಬಂದು ನೋಡಿ’ ಎಂದು ಮಹಂತೇಶ್ ಅವರು ಸಿನಿಪ್ರಿಯರಿಗೆ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ: ಜಾಲಿ ಎಲ್​ಎಲ್​ಬಿ 3, ಅರಸಯ್ಯನ ಪ್ರೇಮ ಪ್ರಸಂಗ, ಕಮಲ್ ಶ್ರೀದೇವಿ ನಡುವೆ ಈ ವಾರ ಪೈಪೋಟಿ

‘ರಾಜ್ ಕಮಲ ಪಿಕ್ಚರ್ಸ್’ ಮೂಲಕ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ ನಿರ್ಮಾಣ ಆಗಿದೆ. ಜೆವಿಆರ್​ ದೀಪು ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಮತಿ ಮೇಘಶ್ರೀ ರಾಜೇಶ್ ಅವರು ಬಂಡವಾಳ ಹೂಡಿದ್ದಾರೆ. ಮಹಂತೇಶ್ ಹಿರೇಮಠ ಅವರ ಜೊತೆ ರಶ್ಮಿತಾ, ವಿಜಯ್ ಚಂಡೂರು, ಪಿಡಿ ಸತೀಶ್ ಚಂದ್ರ, ರಘು ರಾಮನಕೊಪ್ಪ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!