AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್​​’ ಚಿತ್ರಕ್ಕಾಗಿ ಲಂಡನ್​ಗೆ ಹಾರಿದ ಯಶ್; ನಡೆಯುತ್ತಿದೆ ದೊಡ್ಡ ಕೊಲಾಬರೇಷನ್

Toxic Movie: ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಮುಂಬೈ ಶೂಟಿಂಗ್ ಮುಗಿದ ನಂತರ, ಅವರು ಲಂಡನ್‌ಗೆ ತೆರಳಿದ್ದಾರೆ. ಹಾಲಿವುಡ್ ಆ್ಯಕ್ಷನ್ ನಿರ್ದೇಶಕರ ಸಹಯೋಗದೊಂದಿಗೆ ಚಿತ್ರೀಕರಣ ನಡೆದಿದೆ. ಲಂಡನ್‌ನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ವಿತರಣಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ಯಶ್ ತೆರಳಿದ್ದಾರೆ ಎನ್ನಲಾಗಿದೆ.

‘ಟಾಕ್ಸಿಕ್​​’ ಚಿತ್ರಕ್ಕಾಗಿ ಲಂಡನ್​ಗೆ ಹಾರಿದ ಯಶ್; ನಡೆಯುತ್ತಿದೆ ದೊಡ್ಡ ಕೊಲಾಬರೇಷನ್
ಯಶ್
ರಾಜೇಶ್ ದುಗ್ಗುಮನೆ
|

Updated on: Sep 19, 2025 | 11:52 AM

Share

ರಾಕಿಂಗ್ ಸ್ಟಾರ್ ಯಶ್ ಅವರು ಇಷ್ಟು ದಿನ ಮುಂಬೈನಲ್ಲಿದ್ದರು. ಮುಂಬೈನಲ್ಲಿ ಹಾಕಲಾದ ಸೆಟ್​ಗಳಲ್ಲಿ ‘ಟಾಕ್ಸಿಕ್’ ಸಿನಿಮಾ (Toxic) ಶೂಟ್ ಮಾಡಿದ್ದರು. ಇದಕ್ಕಾಗಿ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಕೂಡ ಬಂದಿದ್ದರು. ಮುಂಬೈನಲ್ಲಿ ಸಾಕಷ್ಟು ಆ್ಯಕ್ಷ್ ದೃಶ್ಯಗಳನ್ನು ಶೂಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗ ಯಶ್ ಅವರು ನೇರವಾಗಿ ಲಂಡನ್​ಗೆ ಹಾರಿದ್ದಾರೆ. ಅವರು ದೊಡ್ಡ ಕೊಲಾಬರೇಷನ್ ಮಾಡಿಕೊಳ್ಳಲು ತೆರಳಿದ್ದಾರೆ ಎನ್ನಲಾಗುತ್ತಿದೆ.

ಹಾಲಿವುಡ್ ಆ್ಯಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಅವರು ಆಗಸ್ಟ್​ನಲ್ಲಿ ಭಾರತಕ್ಕೆ ಬಂದಿದ್ದರು.  ಅವರು ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’, ‘ಜಾನ್ ವಕ್’ ‘ಡೇ ಶಿಫ್ಟ್’ ರೀತಿಯ ಸಿನಿಮಾಗಳಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ಅವರು ಕನ್ನಡ ಚಿತ್ರಕ್ಕಾಗಿ ಆಗಮಿಸಿದ್ದರು. ಮುಂಬೈನಲ್ಲಿ ಕಳೆದ ಒಂದು ತಿಂಗಳಿಂದ ಅವರು ನೆಲೆಸಿದ್ದರು. ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳನ್ನು ಅವರೇ ನಿರ್ದೇಶಿಸಿದ್ದಾರೆ. ಈಗ ಈ ಶೆಡ್ಯೂಲ್ ಮುಗಿದಿದೆ. ಹೀಗಿರುವಾಗಲೇ ಯಶ್ ಅವರು ಮುಂಬೈನಿಂದ ಲಂಡನ್​ಗೆ ತೆರಳಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ‘ಟಾಕ್ಸಿಕ್’ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದೆ. ಉಳಿದ ಭಾಷೆಗಳಿಗೆ ಸಿನಿಮಾ ಡಬ್ ಆಗುತ್ತಿದೆ. ಈಗ ಯಶ್ ಲಂಡನ್​ಗೆ ತೆರಳಿ ಅಲ್ಲಿರೋ ನಿರ್ಮಾಣ ಸಂಸ್ಥೆಗಳ ಜೊತೆ ಸಿನಿಮಾ ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಚಿತ್ರವನ್ನು ವಿಶ್ವ ಮಟ್ಟದಲ್ಲಿ ರಿಲೀಸ್ ಮಾಡಲು ಈ ಮಾತುಕತೆ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇದನ್ನೂ ಓದಿ
Image
ಬಯಸಿ ಬಂದ ಪ್ರೀತಿಯನ್ನು ಕಾಲಿನಿಂದ ಒದ್ದ ಭೂಮಿಕಾ; ಗೌತಮ್ ಮತ್ತೆ ಏಕಾಂಗಿ
Image
ಸೌಂದರ್ಯಾ ಜೊತೆ ವಿಮಾನದಲ್ಲಿ ಕನ್ನಡದ ಈ ನಟಿಯೂ ಇರಬೇಕಿತ್ತು
Image
‘ಏನಾಗಿದೆ ಅದನ್ನು ಬದಲಿಸಲು ಸಾಧ್ಯವಿಲ್ಲ’; ದೀಪಿಕಾ ಬಗ್ಗೆ ನಾಗ್ ಬೇಸರ
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

ಈಗಾಗಲೇ ‘ಟಾಕ್ಸಿಕ್’ ಸಿನಿಮಾನ ಹಂಚಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಅಮೆರಿಕದ ಕೆಲ ನಿರ್ಮಾಣ ಸಂಸ್ಥೆಗಳ ಜೊತೆ ಯಶ್ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈಗ ಲಂಡನ್​ಗೆ ತೆರಳಿ ಅವರು ಯಾವ ರೀತಿ ಡೀಲ್ ಖುದುರಿಸಿಕೊಂಡು ಬರುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಕಾಂತಾರ’, ‘ಟಾಕ್ಸಿಕ್’ ಚಿತ್ರಗಳಿಗೆ ಅಷ್ಟಾಗಿ ಆಗಲ್ಲ ಟಿಕೆಟ್ ಪ್ರೈಸ್ ಕಟ್ ಎಫೆಕ್ಟ್?

‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಕೆವಿಎನ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾ ಮುಂದಿನ ವರ್ಷ ಮಾರ್ಚ್​​ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ