ರಿಯಾಲಿಟಿ ಶೋ ಸ್ಪರ್ಧಿ ರಜತ್ ‘ಸಿಗರೇಟ್​ ಕಿರಿಕ್​‘; ಹಲ್ಲೆ ಆರೋಪದಡಿ ಪ್ರಕರಣ ದಾಖಲು

ಕನ್ನಡ ಕಿರುತೆರೆಯ ಕೆಲವು ರಿಯಾಲಿ ಶೋನಲ್ಲಿ ಸ್ಪರ್ಧಿಯಾಗಿದ್ದ ರಜತ್ ವಿರುದ್ಧ ಸಿಗರೇಟ್ ಸೇದುವ ವಿಚಾರಕ್ಕೆ ಕಿರಿಕ್, ಹಲ್ಲೆ ಮತ್ತು ದರ್ಪ ಆರೋಪ ಕೇಳಿಬಂದಿದ್ದು, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಾಲಿಟಿ ಶೋ ಸ್ಪರ್ಧಿ ರಜತ್ ‘ಸಿಗರೇಟ್​ ಕಿರಿಕ್​‘; ಹಲ್ಲೆ ಆರೋಪದಡಿ ಪ್ರಕರಣ ದಾಖಲು
ರಿಯಾಲಿಟಿ ಶೋ ಸ್ಪರ್ಧಿ ರಜತ್
Updated By: Lakshmi Hegde

Updated on: Feb 28, 2021 | 12:16 PM

ಬೆಂಗಳೂರು: ಕನ್ನಡ ಕಿರುತೆರೆಯ ಕೆಲವು ರಿಯಾಲಿ ಶೋನಲ್ಲಿ ಸ್ಪರ್ಧಿಯಾಗಿದ್ದ ರಜತ್ ವಿರುದ್ಧ  ಕಿರಿಕ್, ಹಲ್ಲೆ ಮತ್ತು ದರ್ಪ ತೋರಿಸಿದ ಆರೋಪ ಕೇಳಿಬಂದಿದೆ. ಅದೂ ಸಿಗರೇಟ್​ ಸೇದುವ ವಿಚಾರಕ್ಕೆ ಎಂದು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ಯಾನ್ಸ್ ರಿಯಾಲಿಟಿ ಶೋವೊಂದರ ಸ್ಪರ್ಧಿಯಾಗಿದ್ದ ರಜತ್ ಸಿಗರೇಟ್ ಸೇಯುವುದಕ್ಕೆ ಬಸವೇಶ್ವರ ನಗರ ಸಾಣೆಗುರವನಹಳ್ಲಿ ಸರ್ಕಲ್​ನ ಅಂಗಡಿಯೊಂದರ ಬಾಗಿಲಿಗೆ ಐಷಾರಾಮಿ ಕಾರನ್ನು ತಂದು ಅಡ್ಡವಾಗಿ ನಿಲ್ಲಿಸಿದ್ದರು. ವ್ಯಾಪಾರದ ಸಮಯದಲ್ಲಿ ಅಂಗಡಿ ಮುಂದೆ ಕಾರನ್ನು ನಿಲ್ಲಿಸಿ ಸಿಗರೇಟ್ ಸೇದುವುದಕ್ಕೆಂದು ಸೈಡಿಗೆ ಹೋಗಿದ್ದರು. ಈ ವೇಳೆ ಅಂಗಡಿ ಮುಂದೆ ಕಾರನ್ನು ನಿಲ್ಲಿಸಬೇಡಿ. ಕಾರನ್ನು ಪಕ್ಕಕ್ಕೆ ಹಾಕಿ ಎಂದು ಅಂಗಡಿ ಮಾಲೀಕ ಕಿರಣ್ ರಾಜ್ ರಜತ್​ಗೆ ತಿಳಿಸಿದರು. ಇದನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಸಿಟ್ಟಾದ ರಜತ್ ಮಾಲೀಕ ಕಿರಣ್​ರಾಜು ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಪ್ರಥಮ ವರ್ತಮಾನ ವರದಿ

ಇದನ್ನೂ ಓದಿ

‘ಅನಾರೋಗ್ಯ..ಸರ್ಜರಿ’: ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಪೋಸ್ಟ್​ ನೋಡಿ ಅಭಿಮಾನಿಗಳಲ್ಲಿ ಆತಂಕ​

Bigg Boss Kannada 8: ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?