ಕನ್ನಡ ಚಿತ್ರರಂಗ ಕಂಡ ವಿಶೇಷ ನಟ ಅಂಬರೀಷ್ (Ambareesh). ಅಭಿಮಾನಿಗಳ ಪಾಲಿನ ‘ರೆಬಲ್ ಸ್ಟಾರ್’ ಅವರು. ನೂರಾರು ಬಗೆಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ ‘ಮಂಡ್ಯದ ಗಂಡು’ ಸಂಪಾದಿಸಿದ ಅಭಿಮಾನ ಅಷ್ಟಿಷ್ಟಲ್ಲ. ನಟನಾಗಿ, ರಾಜಕಾರಣಿ ಆಗಿ ಅವರು ಸಾಕಷ್ಟು ಗಮನ ಸೆಳೆದರು. ರಿಯಲ್ ಲೈಫ್ನಲ್ಲಿಯೂ ಅಂಬರೀಷ್ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅವರ ವಿಶೇಷ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಮನಸೋತಿದ್ದರು. ಇಂದು (ನ.24) ಅಂಬರೀಷ್ ಪುಣ್ಯ ಸ್ಮರಣೆ (Ambareesh Death Anniversary) ಪ್ರಯುಕ್ತ ಅವರನ್ನು ಹಲವು ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಕುಟುಂಬದವರು ಮತ್ತು ಅಭಿಮಾನಿಗಳು ಅಂಬಿ ಸಮಾಧಿ ಸ್ಥಳಕ್ಕೆ ತೆರಳಿ ನಮಿಸುತ್ತಿದ್ದಾರೆ. ಸುಮಲತಾ ಅಂಬರೀಷ್ (Sumalatha Ambareesh) ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
2014ರಲ್ಲಿ ಅಂಬರೀಷ್ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಅಭಿಮಾನಿಗಳ ಹಾರೈಕೆಯಿಂದ ಗುಣಮುಖರಾಗಿ ಬಂದಿದ್ದರು. ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ 2018ರ ನವೆಂಬರ್ 24 ಅಭಿಮಾನಿಗಳ ಪಾಲಿಗೆ ಕರಾಳ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಂದು ಅಂಬರೀಷ್ ಕೊನೆಯುಸಿರೆಳೆದರು.
ಅಂಬರೀಷ್ ಅವರನ್ನು ಸ್ಮರಿಸಿಕೊಂಡು ಸುಮಲತಾ ಅಂಬರೀಷ್ ಭಾವುಕ ಬರಹ ಹಂಚಿಕೊಂಡಿದ್ದಾರೆ. ‘ನಟನಾಗಿ ಜೊತೆಯಾಗಿ, ಬಾಳ ಸಂಗಾತಿಯಾಗಿ ಹಾಕಿದ ಹೆಜ್ಜೆಗಳು ಯಾವತ್ತಿಗೂ ಜೀವಂತ. ನಿಮ್ಮ ಸಿಡುಕು, ಸಂಭ್ರಮ ಹಿತ ಹಿತ. ದೈಹಿಕವಾಗಿ ನೀವು ನಮ್ಮೊಂದಿಗೆ ಇಲ್ಲ ಅನ್ನುವುದನ್ನು ಬಿಟ್ಟರೆ, ಕ್ಷಣಕ್ಷಣವೂ ನೆನಪಾಗಿ ನನ್ನೊಂದಿಗೆ ಇದ್ದೀರಿ. ನಿಮ್ಮ ಕನಸು, ಕನವರಿಕೆ, ಸಮಾಜಮುಖಿ ಕೆಲಸ, ನಾಡಿನ ಮೇಲಿದ್ದ ಒಲವು ಅವು ಮುಂದುವರಿಯುತ್ತಿವೆ ನಿಮ್ಮದೇ ಹೆಸರಿನಲಿ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಾಂತರಾಳದ ನಮನ. ಅಂಬಿ ಅಮರ’ ಎಂದು ಪೋಸ್ಟ್ ಮಾಡಿದ್ದಾರೆ.
ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ.
‘ಅಂಬಿ ಅಮರ’.
?❤️?❤️?❤️?#Ambareesh #RebelStar #RebelstarAmbareesh#AmbiAmara pic.twitter.com/DhCtWKocRo— Sumalatha Ambareesh ?? ಸುಮಲತಾ ಅಂಬರೀಶ್ (@sumalathaA) November 24, 2022
ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ, ಅಭಿಮಾನಿಗಳ ನೆಚ್ಚಿನ ರೆಬಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ನಮನಗಳು. ಒಬ್ಬ ನಟನಾಗಿ, ಒಬ್ಬ ಆದರ್ಶ ವ್ಯಕ್ತಿಯಾಗಿ, ಪ್ರೀತಿಯ ಗೆಳೆಯನಾಗಿ ನೀವೆಂದಿಗೂ ನಮ್ಮೆಲ್ಲರ ಮನಸ್ಸಲ್ಲಿ ಜೀವಂತ. pic.twitter.com/GIQtm4C5l9
— DK Shivakumar (@DKShivakumar) November 24, 2022
ಇಂದಿಗೆ ಅಂಬರೀಷ್ ಅವರು ಇಹಲೋಕ ತ್ಯಜಿಸಿ 4 ವರ್ಷ ಕಳೆದಿದೆ. ಸಿನಿಮಾಗಳ ಮೂಲಕ ಅವರು ಎಂದಿಗೂ ಜೀವಂತವಾಗಿ ಇರುತ್ತಾರೆ. ಅವರ ನೆನಪಿನಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 am, Thu, 24 November 22