ದರ್ಶನ್ ಪ್ರಕರಣ: ಮಹಜರು ಮಾಡಿದ ಸ್ಥಳ ಹಾಗೂ ವಶಪಡಿಸಿಕೊಂಡ ವಸ್ತುಗಳ ವಿವರ

|

Updated on: Jun 19, 2024 | 8:01 AM

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತವಾಗಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಂದಲೂ ಪೊಲೀಸರು ವಿವಿಧ ಸ್ಥಳಗಳಲ್ಲಿ ಮಹಜರು ಮಾಡಿದ್ದಾರೆ. ಮಹಜರು ಮಾಡಿರುವ ಸ್ಥಳ ಹಾಗೂ ವಶಪಡಿಸಿಕೊಂಡ ವಸ್ತುಗಳ ವಿವರ ಇಲ್ಲಿದೆ.

ದರ್ಶನ್ ಪ್ರಕರಣ: ಮಹಜರು ಮಾಡಿದ ಸ್ಥಳ ಹಾಗೂ ವಶಪಡಿಸಿಕೊಂಡ ವಸ್ತುಗಳ ವಿವರ
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ (Darshan Thoogudeepa), ಪವಿತ್ರಾ ಗೌಡ ಸೇರಿ 20ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ. ಕಳೆದ ಒಂದು ವಾರದಿಂದಲೂ ಪೊಲೀಸರು ಪ್ರತಿಯೊಬ್ಬ ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಆರೋಪಿಯನ್ನೂ ಕರೆದೊಯ್ದು ಅಪರಾಧ ನಡೆದ ಸ್ಥಳ ಹಾಗೂ ಇತರೆ ಸ್ಥಳಗಳಲ್ಲಿ ಮಹಜರು ಮಾಡಿದ್ದಾರೆ. ಇನ್ನೂ ಕೆಲವು ಸ್ಥಳಗಳ ಮಹಜರು ಬಾಕಿ ಇದೆ ಎನ್ನಲಾಗುತ್ತಿದೆ. ಯಾವ ಆರೋಪಿಗಳನ್ನು ಎಲ್ಲಿ ಸ್ಥಳ ಮಹಜರು ಮಾಡಿದರು, ವಶಪಡಿಸಿಕೊಂಡ ವಸ್ತುಗಳು ಯಾವುವು? ಇಲ್ಲಿದೆ ಪಟ್ಟಿ.

* ದರ್ಶನ್ ನಿಂದ 30 ಲಕ್ಷ ಹಣ ಪಡೆದ ಪ್ರದೋಶ್ ಗಿರಿನಗರದ ನಿವಾಸದಲ್ಲಿ ಮಹಜರ್-ಹಣ ಹಾಗೂ ಸಿಸಿಟಿವಿ ಪೋಟೆಜ್ ವಶಕ್ಕೆ.

* ರಾಘವೇಂದ್ರ, ಕಾರ್ತಿಕ್, ನಿಖಿಲ್, ವಿನಯ್, ನಾಗರಾಜು, ಲಕ್ಷ್ಮಣ್, ಪ್ರದೂಶ್ ಅವರನ್ನು ಕರದ್ಯೊದ್ದು ಶವ ಬೀಸಾಕಿದ್ದ ಸತ್ವ ಅನುಗ್ರಹ ಅಪರ್ಟ್ಮೆಂಟ್ ಬಳಿ ಮಹಜರು. ರೇಣುಕಾ ಸ್ವಾಮಿಯ ಮೊಬೈಲ್ ಸಿಕ್ಕಿಲ್ಲ, ಅದಕ್ಕಾಗಿ ಹುಡುಕಾಟ.

* ಪವಿತ್ರ ಗೌಡ, ದರ್ಶನ್, ಪವನ್, ರಾಘವೇಂದ್ರ, ನಂದೀಶ್ , ವಿನಯ್, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತೀಕ್‌, ನಿಖಿಲ್ ಕರೆದೊಯ್ದು ಪಟ್ಟಣಗೆರೆ ಜಯಣ್ಣ ಫಾರ್ಂ ( ರೇಣುಕಾ ಸ್ವಾಮಿ ಕೊಲೆಯಾದ ಸ್ಥಳ) ನಲ್ಲಿ ಮಹಜರ್- ಕೃತ್ಯಕ್ಕೆ ಬಳಸಿದ್ದ ಲಾಠಿ, ಮರದ ಕೊಂಬೆಯ ಪೀಸ್, ವಾಟರ್ ಬಾಟಲ್, ಸೆಕ್ಯೂರಿಟಿ ರೂಮ್ ನಲ್ಲಿ ದೊರೆತ ರಕ್ತದ ಕಲೆಗಳು ಹಾಗೂ ಸಿಸಿಟಿವಿ ಪೋಟೆಜ್ ವಶಕ್ಕೆ.

* ಎ 11 ನಾಗರಾಜ್ ನಿಂದ‌ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನ‌ ನಿಲ್ಲಿಸಿದ್ದ ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಇ ಕ್ರಾಸ್ ನಲ್ಲಿ ಮಹಜರ್- ಕೆ‌ಎ 03 ಎಂಯು 8821 ಸ್ಕಾರ್ಪಿಯೋ ಕಾರ್ ವಶಕ್ಕೆ- ಕಾರಿನ ಹಿಂಬದಿ ಸೀಟ್ ನಲ್ಲಿ ರಕ್ತದ ಕಲೆಗಳು ಪತ್ತೆ.

* ಆರೋಪಿಗಳಾದ ರಾಘವೇಂದ್ರ@ ರಾಘು, ಜಗದೀಶ್, ರವಿ , ಅನು ಕರೆದುಕೊಂಡು ಹೋಗಿ ಚಿತ್ರದುರ್ಗದಲ್ಲಿ ಮಹಜರು- ಅಪಹರಣಕ್ಕೆ ಬಳಸಿದ್ದ ಟೊಯೊಟಾ ಇಟಿಯಸ್ ಕಾರು ವಶ. ಕಾರಿನಲ್ಲಿದ್ದ ದೊರೆತ ರಕ್ತ, ಕೂದಲು, ಬೆರಳಚ್ಚು ಮಾದರಿ ಸಂಗ್ರಹ- ಸಾಂದರ್ಭಿಕ ಸಾಕ್ಷ್ಯವಾಗಿ ಚಿತ್ರದುರ್ಗದ ಬೆಂಗಳೂರು ಮಾರ್ಗದ ಟೋಲ್‌ಗಳ ಸಿಸಿಟಿವಿ ಪೋಟೆಜ್ ಸಂಗ್ರಹ. ಜೊತೆಗೆ ಆರೋಪಿ ಜಗದೀಶ್, ರವಿ ಹಾಗೂ ಅನುಕುಮಾರ್ ನಿವಾಸದಲ್ಲಿ ಮಹಜರ್- ಮೃತ ರೇಣುಕಾ ಸ್ವಾಮಿಯ ಚಿನ್ನದ ಸರ,‌ ಉಂಗುರ, ವಾಚ್ ವಶಕ್ಕೆ. ಮೃತದೇಹ ಸಾಗಿಸೋ ವೇಳೆ ರೇಣುಕಾ ಸ್ವಾಮಿಯ ಚಿನ್ನಾಭರಣವನ್ನ ತೆಗೆದುಕೊಂಡಿದ್ದ ಜಗದೀಶ್, ವಾಚ್ ತೆಗೆದುಕೊಂಡಿದ್ದ ಅನುಕುಮಾರ್.

ಇದನ್ನೂ ಓದಿ:ಮೋದಿ-ಸಿದ್ದರಾಮಯ್ಯ ಸರ್ಕಾರ, ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

* ಎ 14 ಪ್ರದೋಶ್ ಅನ್ನು ಕರೆದೊಯ್ದು ಸುಮ್ಮನಹಳ್ಳಿಯ ಮೋರಿ ಬಳಿ ಮೊಬೈಲ್ ಗಾಗಿ ಮಹಜರ್- ಮೃತ‌ ರೇಣುಕಾ ಸ್ವಾಮಿ ಮತ್ತು ಆರೋಪಿ ರಾಘವೇಂದ್ರ ಮೊಬೈಲ್ ಮೋರಿಗೆ ಎಸೆದಿದ್ದ ಪ್ರದೂಶ್.

* ಆರೋಪಿ ರಾಘವೇಂದ್ರನನ್ನು ಕರೆದೊಯ್ದು ಆರ್ ಆರ್ ನಗರದ 18 ನೇ ಕ್ರಾಸ್ ನ ಐಡಿಯಲ್ ಹೋಮ್ಸ್ ನಲ್ಲಿ ಮಹಜರ್- ಕೊಲೆಯ ವೇಳೆ ಧರಿಸಿದ್ದ ಬಟ್ಟೆ ಮತ್ತು ಚಪ್ಪಲಿ ಬದಲಾಯಿಸಿದ್ದ ಆರೋಪಿ.

* ಆರೋಪಿ ಕಾರ್ತಿಕ್ ಅನ್ನು ಕರೆದೊಯ್ದು ಆರ್ ಆರ್ ನಗರದ ಟ್ರೋಬೋ‌ ಹೋಟಲ್ 98 ಸ್ಟ್ರೀಟ್ ರೂಮ್ ನಂ 203 ರಲ್ಲಿ ಮಹಜರ್- ಕೊಲೆಯ ನಂತರ ಹೋಟಲ್ ನಲ್ಲಿ‌ ಕಾರ್ತಿಕ್ ಜೊತೆಗೆ ಕೇಶವ್ ನಿಖಿಲ್ ತಂಗಿದ್ದ ಹೋಟೆಲ್, ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ವಶಕ್ಕೆ ಪಡೆದಿರೋ ಪೊಲೀಸರು.

* ದರ್ಶನ್ ಮತ್ತು ಪವನ್ ಕರೆದೊಯ್ದು ಆರ್ ಆರ್ ನಗರದ ನಿವಾಸದಲ್ಲಿ ಮಹಜರ್. ಕೃತ್ಯದ ಸಮಯದಲ್ಲಿ ದರ್ಶನ್ ಧರಿಸಿದ್ದ ಬಟ್ಟೆಗಳು ಮನೆಯ ಟೇರೆಸ್ ನಲ್ಲಿ ಒಗೆದು ಒಣಗಲು ಹಾಕಿತ್ತು‌‌. ಪೊಲೀಸರು ದರ್ಶನ್ ನೀಡಿದ ಮಾಹಿತಿಯಂತೆ ಕೃತ್ಯದ ದಿನ ಧರಿಸಿದ್ದ ನೀಲಿ‌ ಬಣ್ಣದ True religion ಹೆಸರಿನ ಜೀನ್ಸ್ ಪ್ಯಾಂಟ್ ಹಾಗೂ opium velly ಹೆಸರಿನ ಕಪ್ಪು ಬಣ್ಣದ ರೌಂಡ್ ನೇಕ್‌ ಟೀ ಶಾರ್ಟ್ ಮತ್ತು ಸಿಸಿಟಿವಿ ಪೋಟೇಜ್ ಸೀಜ್- ದರ್ಶನ್ ಧರಿಸಿದ್ದ ಲೂಫರ್ಸ್ ಡಿಸೈನ್ ನೀಲಿ ಬಣ್ಣದ ಶೂ ಪತ್ನಿ ವಿಜಯಲಕ್ಷ್ಮಿ ವಾಸವಾಗಿರೋ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ ನಿಂದ ವಶಕ್ಕೆ.

ಇದನ್ನೂ ಓದಿ:‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ

* ನಿಖಿಲ್ ನಾಯಕ್ ವಾಸವಾಗಿದ್ದ ಬನ್ನೇರುಘಟ್ಟ ರಸ್ತೆಯ ಕೆಂಬತ್ತಳ್ಳಿ ನಿವಾಸದಲ್ಲಿ ಮಹಜರ್- ಮನೆಯಲ್ಲಿದ್ದ 4.5 ಲಕ್ಷ ರೂಪಾಯಿ ಹಣ ಹಾಗೂ ಮೊಬೈಲ್ ಪೋನ್ ವಶಕ್ಕೆ.

* ಎ 1 ಆರೋಪಿ ಪವಿತ್ರಗೌಡ ಕರೆದೊಯ್ದು ಆರ್ ಆರ್‌‌ನಗರದ ನಿವಾಸದಲ್ಲಿ ಮಹಜರ್- ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆ ಮತ್ತು ಚಪ್ಪಲಿ ವಶಕ್ಕೆ.

* ಎ 10 ಆರೋಪಿ ವಿನಯ್ ನನ್ನ ಕರೆದೊಯ್ದು ಆರ್ ಆರ್ ನಗರದ ಸ್ಟೋನಿ‌ಬ್ರೂಕ್ ನಲ್ಲಿ ಮಹಜರ್ ಸಿಸಿಟಿವಿ ವಶಕ್ಕೆ.

* ಕೃತ್ಯ ಎಸಗಿದ ನಂತರ ಆರೋಪಿಗಳು ಸಾಕ್ಷ್ಯ ನಾಶ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನ ಮರೆಮಾಚೋ ಪ್ರಯತ್ನದ ಹಿನ್ನಲೆ ಎಲ್ಲ ಆರೋಪಿಗಳ‌ ನಿವಾಸದಲ್ಲೂ ಮಜಹರ್. ಮಹತ್ವದ ಸಾಕ್ಷಿಗಳು ವಶಕ್ಕೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ