ನಟಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯನ್ನು ವಿವಿಧ ರೀತಿಯಲ್ಲಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಆರೋಪ ದರ್ಶನ್ ಹಾಗೂ ಗ್ಯಾಂಗ್ ಮೇಲೆ ಇದೆ. ಈ ಪ್ರಕರಣದ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಪ್ರಕರಣದ ವಿಚಾರಣೆ ಕಂಡು ದರ್ಶನ್ ಕಂಗಾಲಾಗಿದ್ದಾರೆ. ಈಗ ಅವರಿಗೆ ಭವಿಷ್ಯದ ಚಿಂತೆ ಕಾಡಿದೆಯಂತೆ. ಅವರು ದಿನಕಳೆದಂತೆ ಸೈಲೆಂಟ್ ಆಗಿದ್ದಾರೆ ಎಂದು ವರದಿ ಆಗಿದೆ.
ದರ್ಶನ್ ಅವರು ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಈಗಾಗಲೇ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಳ್ಳುವ ಹಂತ ತಲುಪಿದೆ. ದರ್ಶನ್ ತಮಗೆ ಇರುವ ಪ್ರಭಾವ ಬಳಸಿಕೊಂಡು ಹೊರಗೆ ಬರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದ ಅವರು ಕಂಗಾಲಾಗಿದ್ದಾರೆ.
ಪ್ರಕರಣದ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ದರ್ಶನ್ ಮೃದುವಾಗಿದ್ದಾರಂತೆ. ಅರೆಸ್ಟ್ ಆದ ಮೊದಲ ದಿನ ಇದ್ದ ಗತ್ತು ಈಗ ಅವರಲ್ಲಿ ಉಳಿದುಕೊಂಡಿಲ್ಲ. ನಿರಂತರ ವಿಚಾರಣೆಯಿಂದ ಫುಲ್ ಸೈಲೆಂಟ್ ಆಗಿದ್ದಾರೆ. ದರ್ಶನ್ ಘಟನೆ ಬಗ್ಗೆ ಗೊತ್ತಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಹೀಗಾಗಿ, ಇತರೆ ಆರೋಪಿಗಳ ಹೇಳಿಕೆ ಆಧರಿಸಿ ದರ್ಶನ್ ವಿಚಾರಣೆ ಮಾಡಲಾಗುತ್ತಿದೆ. ಸ್ಥಳ ಮಹಜರು ಸಂದರ್ಭದಲ್ಲಿ ಇತರೆ ಆರೋಪಿಗಳ ಹೇಳಿಕೆ ಆಧಾರದರ ಮೇಲೆ ದರ್ಶನ್ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ‘ಅಪ್ಪ-ಅಮ್ಮನಿಗೆ ಬೆಂಬಲ ಬೇಕಿರುವ ಈ ಸಮಯದಲ್ಲಿ..’: ದರ್ಶನ್ ಪುತ್ರನ ಅಳಲು
ಪೊಲೀಸರಿಂದ ದರ್ಶನ್ಗೆ ರಾಜಾತಿಥ್ಯ ಸಿಗುತ್ತಿರುವ ಆರೋಪ ಇದೆ. ಇದರ ಮಧ್ಯೆಯೂ ದರ್ಶನ್ ಬಸವಳಿದಿದ್ದಾರೆ. ತಮ್ಮ ಸ್ಟಾರ್ಡಮ್ ಹಾಗೂ ಭವಿಷ್ಯದ ಬಗ್ಗೆ ಅವರಿಗೆ ತೀವ್ರ ಚಿಂತೆ ಕಾಡಿದೆ. ಅವರು ಪ್ರಕರಣದ ಭಾಗವಾಗಿರುವುದಕ್ಕೆ ಮರುಗುತ್ತಿದ್ದಾರೆ. ತಡರಾತ್ರಿ ದರ್ಶನ್ ಎರಡುಮೂರು ಬಾರಿ ಎಚ್ಚರಗೊಂಡಿದ್ದರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.