ರೇಣುಕಾಸ್ವಾಮಿ ಪ್ರಕರಣ: ಉಲ್ಟಾ ಹೊಡೆದ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ರೋಚಕವಾಗುತ್ತಾ ಸಾಗುತ್ತಿದೆ. ಮೊದಲಿಗೆ ಆರೋಪಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದರು. ಅದಾದ ಬಳಿಕ ಸಾಕ್ಷಿ ಪುನೀತ್ ತಿರುಚಿದ ಹೇಳಿಕೆಯನ್ನು ನೀಡಿದ್ದು, ಪೊಲೀಸರ ಮುಂದೆ ಈ ಹಿಂದೆ ದಾಖಲಿಸಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷಿ ನುಡಿದಿದ್ದ. ಅದಾದ ಬಳಿಕ ಈಗ ಮತ್ತೊಬ್ಬ ಸಾಕ್ಷಿಯೂ ಸಹ ತನ್ನ ಹೇಳಿಕೆಯನ್ನು ತಿರುಚಿದ್ದಾನೆ.

ರೇಣುಕಾಸ್ವಾಮಿ ಪ್ರಕರಣ: ಉಲ್ಟಾ ಹೊಡೆದ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ
Renuka Swamy Darshan

Updated on: Nov 23, 2026 | 2:39 PM

ಮುಖ್ಯಾಂಶಗಳು

  • ರೇಣುಕಾ ಸ್ವಾಮಿ ಪ್ರಕರಣ ವಿಚಾರಣೆ
  • ಹೇಳಿಕೆ ನೀಡಿದ ಪ್ರತ್ಯಕ್ಷ ಸಾಕ್ಷಿ ಕಿರಣ್
  • ಹೇಳಿಕೆ ಬದಲಾಯಿಸಿದ ಸಾಕ್ಷಿ ಕಿರಣ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ರೋಚಕವಾಗುತ್ತಾ ಸಾಗುತ್ತಿದೆ. ಮೊದಲಿಗೆ ಆರೋಪಿ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದರು. ಅದಾದ ಬಳಿಕ ಸಾಕ್ಷಿ ಪುನೀತ್ ತಿರುಚಿದ ಹೇಳಿಕೆಯನ್ನು ನೀಡಿದ್ದು, ಪೊಲೀಸರ ಮುಂದೆ ಈ ಹಿಂದೆ ದಾಖಲಿಸಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಸಾಕ್ಷಿ ನುಡಿದಿದ್ದ. ಅದಾದ ಬಳಿಕ ಈಗ ಮತ್ತೊಬ್ಬ ಸಾಕ್ಷಿಯೂ ಸಹ ತನ್ನ ಹೇಳಿಕೆಯನ್ನು ತಿರುಚಿದ್ದಾನೆ.

ಪ್ರತ್ಯಕ್ಷ ಸಾಕ್ಷಿ ಕಿರಣ್​​ ಎಂಬುವರ ವಿಚಾರಣೆ ಇಂದು (ನವೆಂಬರ್ 23) 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯಿತು. ಶೆಡ್​​ನ ಕಾರ್ಮಿಕ ಆದ ಕಿರಣ್, ಘಟನೆ ನಡೆದ 2024ರ ಜೂನ್ 8ರಂದು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಕೆಲಸ ಮಾಡಿದ್ದಾಗಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಮಧ್ಯಾಹ್ನ ಊಟಕ್ಕೆ ತೆರಳಿ ಮತ್ತೆ ಕೆಲಸ ಮುಂದುವರಿಸಿದ್ದಾಗಿ ಹೇಳಿದ್ದಾರೆ. ಪ್ರತಿದಿನವೂ ಹಲವಾರು ವಾಹನಗಳು ಶೆಡ್​​ಗೆ ಬರುತ್ತಿರುತ್ತವೆ, ಅಂದು ತುಸು ಹೆಚ್ಚು ವಾಹನಗಳು ಶೆಡ್​​ಗೆ ಬಂದಿದ್ದವು, ಆದರೆ ಅಂದು ಶೆಡ್​​ನಲ್ಲಿ ಯಾವ ಘಟನೆಯೂ ನಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಸಾಕ್ಷಿ ಕಿರಣ್ ಹೇಳಿದ್ದಾರೆ.

Loading...

ಜೈಲಿನಲ್ಲಿರುವ ಆರೋಪಿಗಳನ್ನು ಗುರುತಿಸಬಹುದೇ ಎಂದು ಎಸ್‌ಪಿಪಿ ಪ್ರಶ್ನೆಗೆ, ತಮಗೆ ದರ್ಶನ್ ಸೇರಿದಂತೆ ಆರೋಪಿಗಳ್ಯಾರೂ ಗೊತ್ತಿಲ್ಲ ಎಂದು ಕಿರಣ್ ಹೇಳಿದ್ದಾರೆ. ದರ್ಶನ್ ಸಹ ತಮಗೆ ಗೊತ್ತಿಲ್ಲ ಎಂದು ಸಾಕ್ಷಿ ಹೇಳಿರುವುದು ಆಶ್ಚರ್ಯ. ಜೊತೆಗೆ ಈ ಹಿಂದೆ ಪೊಲೀಸರಿಗೆ ಏನು ಹೇಳಿಕೆ ನೀಡಿದ್ದೆ ಎಂಬುದು ತಮಗೆ ನೆನಪಿಲ್ಲ, ಹಾಗೆಯೇ ನ್ಯಾಯಾಧೀಶರ ಮುಂದೆ 164 ರ ಅಡಿಯಲ್ಲಿ ನೀಡಿದ ಹೇಳಿಕೆಯ ವಿವರವೂ ನೆನಪಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲರ ವಿರೋಧ

ಕಿರಣ್ ಅನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಎಸ್‌ಪಿಪಿ ಮನವಿ ಮಾಡಿದ್ದು, ಕ್ರಾಸ್ ಎಗ್ಸಾಮಿನೇಷನ್ ಮಾಡಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ. ಆದರೆ ದರ್ಶನ್ ಪರ ವಕೀಲರು ವಿಚಾರಣೆ ಮುಂದೂಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಸಹ ನ್ಯಾಯಾಧೀಶರು ಪ್ರಕರಣವನ್ನು ನವೆಂಬರ್ 30ಕ್ಕೆ ಮುಂದೂಡಿದ್ದು, ಅಂದು ಕ್ರಾಸ್ ಎಕ್ಸಾಮಿನೇಷನ್ ಅಥವಾ ಪಾಠಿ ಸವಾಲು ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us