ಪಿತೃ ಕಾರ್ಯದಲ್ಲಿ ಭಾಗವಹಿಸಲು ಪ್ರದೋಶ್​​ಗೆ ಹೈಕೋರ್ಟ್ ಅನುಮತಿ, ಕಠಿಣ ಷರತ್ತು

ದಿವಂಗತ ತಂದೆಯವರ ಮೊದಲ ವರ್ಷದ ಪಿತೃಕಾರ್ಯವಿದ್ದು, ಅದರಲ್ಲಿ ಭಾಗವಹಿಸಲು 20 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ ಪ್ರದೋಶ್ ಅವರ ಜಾಮೀನು ಅರ್ಜಿ ರದ್ದಾಗಿದೆ. ಅದರ ಬಳಿಕ ಪ್ರದೋಶ್, ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್​​ನಲ್ಲಿ ಇಂದು (ನವೆಂಬರ್ 04) ಸಾಕಷ್ಟು ವಿಚಾರಣೆ ನಡೆದಿದ್ದು, ಅಂತಿಮವಾಗಿ ಪ್ರದೋಶ್​​ಗೆ ಜಾಮೀನು ನೀಡಿಲ್ಲವಾದರೂ ಪಿತೃ ಕಾರ್ಯದಲ್ಲಿ ಭಾಗವಹಿಸಲು ನಿಯಮಿತ ದಿನಗಳ ವರೆಗೆ ಅನುಮತಿ ನೀಡಲಾಗಿದೆ.

ಪಿತೃ ಕಾರ್ಯದಲ್ಲಿ ಭಾಗವಹಿಸಲು ಪ್ರದೋಶ್​​ಗೆ ಹೈಕೋರ್ಟ್ ಅನುಮತಿ, ಕಠಿಣ ಷರತ್ತು
Darshan Pradosh

Updated on: Nov 04, 2026 | 7:58 PM

ಮುಖ್ಯಾಂಶಗಳು

  • ಪ್ರದೋಶ್​​ ಜಾಮೀನು ಅರ್ಜಿಗೆ ನಿರಾಕರಣೆ
  • ಆದರೆ ಪಿತೃ ಕಾರ್ಯದಲ್ಲಿ ಭಾಗವಹಿಸಲು ಅನುಮತಿ
  • ಕಠಿಣ ಷರತ್ತು ವಿಧಿಸಿದ ಹೈಕೋರ್ಟ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಶ್​​, ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದಿವಂಗತ ತಂದೆಯವರ ಮೊದಲ ವರ್ಷದ ಪಿತೃಕಾರ್ಯವಿದ್ದು, ಅದರಲ್ಲಿ ಭಾಗವಹಿಸಲು 20 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ ಪ್ರದೋಶ್ ಅವರ ಜಾಮೀನು ಅರ್ಜಿ ರದ್ದಾಗಿದೆ. ಅದರ ಬಳಿಕ ಪ್ರದೋಶ್, ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್​​ನಲ್ಲಿ ಇಂದು (ನವೆಂಬರ್ 04) ಸಾಕಷ್ಟು ವಿಚಾರಣೆ ನಡೆದಿದ್ದು, ಅಂತಿಮವಾಗಿ ಪ್ರದೋಶ್​​ಗೆ ಜಾಮೀನು ನೀಡಿಲ್ಲವಾದರೂ ಪಿತೃ ಕಾರ್ಯದಲ್ಲಿ ಭಾಗವಹಿಸಲು ನಿಯಮಿತ ದಿನಗಳ ವರೆಗೆ ಅನುಮತಿ ನೀಡಲಾಗಿದೆ.

ಪ್ರದೋಶ್​​ ಸಲ್ಲಿಸಿದ್ದ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಷ್ಮತ್ ಪಾಷಾ ಮಾತ್ರವೇ ಅಲ್ಲದೆ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಸಹ ಆಕ್ಷೇಪ ಸಲ್ಲಿಸಿದ್ದರು. ಪ್ರದೋಶ್, ಈಗ ನೀಡಿರುವ ಮಾಫಿ ಸಾಕ್ಷಿಯ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರ ಪ್ರಭಾವ ಇದ್ದು, ಈಗ ಆರೋಪಿಗೆ ಜಾಮೀನು ನೀಡಿದರೆ ಪ್ರಕರಣದಲ್ಲಿ ಹಲವು ವಿಷಯಗಳನ್ನು ತಿರುಚುವ ಸಾಧ್ಯತೆ ಇದೆ ಎಂದು ಹಷ್ಮತ್ ಪಾಷಾ ವಾದಿಸಿದ್ದರು. ಪಿಪಿ ಪ್ರಸನ್ನ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು.

Loading...

ಪ್ರದೋಶ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ ದಿವಾಕರ್, ‘ಕೇವಲ ಸೀಮಿತ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿದ್ದೇವೆ, ಪ್ರದೋಶ್ ಅವರ ತಂದೆಯ ವಾರ್ಷಿಕ ತಿಥಿ ಕಾರ್ಯ ನಿರ್ವಹಿಸಲು 20 ದಿನಗಳ ಜಾಮೀನು ನೀಡಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೆ, ಹೈಕೋರ್ಟ್​ಗೆ ಮಧ್ಯಂತರ ಜಾಮೀನು ನೀಡುವ ಅಧಿಕಾರವಿದೆ ಹಾಗೂ ದರ್ಶನ್ ಪರ ವಕೀಲರಿಗೆ ಆಕ್ಷೇಪಿಸುವ ಹಕ್ಕಿಲ್ಲವೆಂದು ವಾದ ಮಂಡಿಸಿದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ವಿಚಾರಣೆಗೆ ಗೈರು, ಪ್ರತ್ಯಕ್ಷ ಸಾಕ್ಷಿ ಪುನೀತ್ ಬಂಧನಕ್ಕೆ ವಾರೆಂಟ್

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ, ವಾರ್ಷಿಕ ಪುಣ್ಯಾರಾಧನೆಗೆ ಅನುಮತಿ ನೀಡಲು ಆಕ್ಷೇಪವಿದೆಯೇ?’ ಎಂದು ಪ್ರಶ್ನಿಸಿದರಲ್ಲದೆ, ಮೊದಲ ವಾರ್ಷಿಕ ಪುಣ್ಯಾರಾಧನೆಗೆ ಮಹತ್ವವಿದೆ ಎಂದು ಸಹ ಹೇಳಿದರು. ಪ್ರದೋಶ್​​ಗೆ ಮಧ್ಯಂತರ ಜಾಮೀನು ನೀಡಲಿಲ್ಲವಾದರೂ ಪಿತೃಕಾರ್ಯದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಆದರೆ ಸಾಕಷ್ಟು ಷರತ್ತುಗಳನ್ನು ಸಹ ಹೇರಲಾಗಿದೆ.

ಹೈಕೋರ್ಟ್ ಆದೇಶದ ಪ್ರಕಾರ, ನವೆಂಬರ್ 7ರಿಂದ ನವೆಂಬರ್ 12ರವರೆಗೆ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಪ್ರದೋಶ್ ಅವರು ಬೆಳಗ್ಗೆ 8 ಗಂಟೆಗೆ ಜೈಲಿನಿಂದ ಕರೆದುಕೊಂಡು ಹೋಗಿ ಸಂಜೆ 6 ಗಂಟೆಗೆ ಜೈಲಿಗೆ ವಾಪಸ್ ಕರೆದೊಯ್ಯಬೇಕಿರುತ್ತದೆ. ಜೈಲಿನಿಂದ ಕರೆತರುವಾಗ ನಗರ ಸಶಸ್ತ್ರ ರಿಸರ್ವ್ ಪೊಲೀಸ್ ಬೆಂಗಾವಲು ನೀಡಬೇಕು. ಇದು ಮಾತ್ರವೇ ಅಲ್ಲದೆ, ಪಿತೃಕಾರ್ಯಕ್ಕೆ ಬರುವ ವ್ಯಕ್ತಿಗಳ ಹೆಸರನ್ನು ನ್ಯಾಯಾಲಯಕ್ಕೆ ಹಾಗೂ ಪೊಲೀಸರಿಗೆ ಸಲ್ಲಿಸಬೇಕು. ಪಿತೃಕಾರ್ಯಕ್ಕೆ ಬರುವ ಪುರೋಹಿತರ ಹೆಸರನ್ನೂ ಸಹ ನೀಡಬೇಕು. ಕೇಸಿಗೆ ಸಂಬಂಧಿಸಿದವರ ಭೇಟಿ, ಸಂಪರ್ಕಕ್ಕೆ ಅವಕಾಶ ನೀಡಬಾರದು’ ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Wed, 4 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us