ದರ್ಶನ್​ಗೆ ಸಂಕಷ್ಟ? ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷಿ ಜೊತೆಯೇ ಸಿನಿಮಾ ವೀಕ್ಷಿಸಿದ ದಾಸ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್, ಸಾಕ್ಷಿ ಜೊತೆ 'ವಾಮನ' ಸಿನಿಮಾ ವೀಕ್ಷಿಸಿದ್ದಾರೆ. ಇದು ದೊಡ್ಡ ವಿವಾದಕ್ಕೆ ಕಾರಣವಾಗಬಹುದು. ಜಾಮೀನಿನ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಬಹುದು. ಪೊಲೀಸರು ಈ ಘಟನೆಯನ್ನು ದರ್ಶನ್ ವಿರುದ್ಧ ಬಳಸುವ ಸಾಧ್ಯತೆಯಿದೆ. ಈ ವಿಚಾರದಲ್ಲಿ ಮತ್ತೆ ಇವರು ಸಮಸ್ಯೆ ಎದುರಿಸೋ ಸಾಧ್ಯತೆ ಹೆಚ್ಚಿದೆ.  

ದರ್ಶನ್​ಗೆ ಸಂಕಷ್ಟ? ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷಿ ಜೊತೆಯೇ ಸಿನಿಮಾ ವೀಕ್ಷಿಸಿದ ದಾಸ
 ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷಿ ಜೊತೆಯೇ ಸಿನಿಮಾ ವೀಕ್ಷಿಸಿದ ದರ್ಶನ್
Edited By:

Updated on: Apr 10, 2025 | 9:11 AM

ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ದರ್ಶನ್ ಅವರು ಎ2 ಆರೋಪಿ ಆಗಿದ್ದಾರೆ. ಒಟ್ಟೂ 17 ಆರೋಪಿಗಳು ಕೇಸ್​ನಲ್ಲಿ ಇದ್ದಾರೆ. ಇನ್ನೂ ಕೆಲವರು ಸಾಕ್ಷಿಗಳಾಗಿದ್ದಾರೆ. ನಟ ಚಿಕ್ಕಣ್ಣ ಅವರು ಈ ಕೊಲೆ ಕೇಸ್​ನ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ವಿಚಿತ್ರ ಎಂದರೆ ದರ್ಶನ್ ಅವರು ಈ ಸಾಕ್ಷಿ ಜೊತೆ ಕುಳಿತು ‘ವಾಮನ’ ಸಿನಿಮಾ (Vamana Movie) ವೀಕ್ಷಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ದರ್ಶನ್ ಜಾಮೀನು ರದ್ದು ಮಾಡಿ ಎಂದು ಕೋರ್ಟ್​ನಲ್ಲಿ ವಾದಿಸಲು ಪೊಲೀಸರು ಇದನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಯಾವುದೇ ಕೇಸ್​​ನಲ್ಲಿ ಜಾಮೀನು ಪಡೆದು ಹೊರ ಬಂದ ನಂತರ ಆರೋಪಿಗಳು ಸಾಕ್ಷಿಗಳನ್ನು ಭೇಟಿ ಮಾಡುವಂತಿಲ್ಲ. ಇದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದಂತೆ ಆಗುತ್ತದೆ. ಆದರೆ, ರೇಣುಕಾ ಸ್ವಾಮಿ ಕೊಲೆ ಕೇಸ್​ನ ಸಾಕ್ಷಿ ಆಗಿರುವ ಚಿಕ್ಕಣ್ಣ ಜೊತೆಯೇ ದರ್ಶನ್ ಸಿನಿಮಾ ನೋಡಿದ್ದಾರೆ. ಈ ವಿಚಾರದಲ್ಲಿ ಮತ್ತೆ ಇವರು ಸಮಸ್ಯೆ ಎದುರಿಸೋ ಸಾಧ್ಯತೆ ಹೆಚ್ಚಿದೆ.

ಜೈಲಿನಲ್ಲೂ ಭೇಟಿ

ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಇದ್ದಾಗ ಚಿಕ್ಕಣ್ಣ ಅವರು ಬಂದು ಭೇಟಿ ಆಗಿದ್ದರು. ಸಾಕ್ಷ್ಯಧಾರನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದ ಹಿನ್ನಲೆಯಲ್ಲಿ ಪೊಲೀಸರು ಚಿಕ್ಕಣ್ಣಗೆ ಬುಲಾವ್ ನೀಡಿದ್ದರು. ಈಗ ಇವರು ಒಟ್ಟಾಗಿ ಕುಳಿತು ಸಿನಿಮಾ ವೀಕ್ಷಿಸಿರುವುದು ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ
‘ಕರ್ನಾಟಕ ಜನತೆಗಾಗಿ ಸಿನಿಮಾ ಮಾಡೋದು, ಪ್ಯಾನ್​ ಇಂಡಿಯಾಗಾಗಿ ಅಲ್ಲ’; ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ಕೇರೆ ಹಾವು ರಕ್ಷಿಸಿ ಅದರ ಮಹತ್ವ ತಿಳಿಸಿದ ದುನಿಯಾ ವಿಜಯ್

ಇದನ್ನೂ ಓದಿ: ‘ನಾವು ಕರ್ನಾಟಕ ಜನತೆಗಾಗಿ ಸಿನಿಮಾ ಮಾಡೋದು, ಪ್ಯಾನ್​ ಇಂಡಿಯಾಗಾಗಿ ಅಲ್ಲ’; ದರ್ಶನ್ ಟಾಂಗ್ ಕೊಟ್ರಾ?

ದರ್ಶನ್ ಕೋರ್ಟ್​ಗೆ ಚಕ್ಕರ್, ಸಿನಿಮಾಗೆ ಹಾಜರ್

ಇತ್ತೀಚೆಗೆ ದರ್ಶನ್ ಅವರು ಕೋರ್ಟ್​ಗೆ ಹಾಜರಿ ಹಾಕಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ‘ಬೆನ್ನು ನೋವು ಇದೆ. ಹೀಗಾಗಿ ವಿನಾಯಿತಿ ನೀಡಿ’ ಎಂದು ದರ್ಶನ್ ಅವರು ಕೋರಿಕೊಂಡಿದ್ದರು. ಈ ವೇಳೆ ದರ್ಶನ್ ಅವರಿಗೆ ಕೋರ್ಟ್ ಕಡೆಯಿಂದ ವಾರ್ನಿಂಗ್ ಬಂದಿತ್ತು. ‘ಮುಂದಿನ ಬಾರಿ ವಿಚಾರಣೆಗೆ ಹಾಜರಾಗಲೇಬೇಕು’ ಎಂದು ಸೂಚಿಸಿತ್ತು. ಆದರೆ, ಏಪ್ರಿಲ್ 9ರಂದು ಮಾತ್ರ ಅವರು ಗೆಳೆಯನ ಸಿನಿಮಾ ವೀಕ್ಷಿಸಿದ್ದಾರೆ. ಈ ವಿಚಾರದಲ್ಲಿ ಕೋರ್ಟ್ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:36 am, Thu, 10 April 25