ರಿಷಬ್​ ಶೆಟ್ಟಿ ಜನ್ಮದಿನ: ‘ಮಗಾ..’ ಎಂದು ಆತ್ಮೀಯ ಗೆಳೆಯನಿಗೆ ರಕ್ಷಿತ್​ ಶೆಟ್ಟಿ ವಿಶ್​ ಮಾಡಿದ್ದು ಹೀಗೆ..

| Updated By: ಮದನ್​ ಕುಮಾರ್​

Updated on: Jul 07, 2021 | 2:20 PM

Happy Birthday Rishab Shetty: ರಕ್ಷಿತ್​ ಶೆಟ್ಟಿ ನಟನೆಯ ‘ಕಿರಿಕ್​ ಪಾರ್ಟಿ’ ಚಿತ್ರದಿಂದ ರಿಷಬ್​ ಶೆಟ್ಟಿಗೆ ನಿರ್ದೇಶಕನಾಗಿ ಒಳ್ಳೆಯ ಹೆಸರು ಸಿಕ್ಕಿತು. ಬಳಿಕ ‘ಬೆಲ್​ ಬಾಟಂ’ ಸಿನಿಮಾದಲ್ಲಿ ಹೀರೋ ಆಗಿ ಬಡ್ತಿ ಪಡೆದಿದ್ದು ರಿಷಬ್​ ಜೀವನದ ಒಂದು ಟರ್ನಿಂಗ್​ ಪಾಯಿಂಟ್​.

ರಿಷಬ್​ ಶೆಟ್ಟಿ ಜನ್ಮದಿನ: ‘ಮಗಾ..’ ಎಂದು ಆತ್ಮೀಯ ಗೆಳೆಯನಿಗೆ ರಕ್ಷಿತ್​ ಶೆಟ್ಟಿ ವಿಶ್​ ಮಾಡಿದ್ದು ಹೀಗೆ..
ರಕ್ಷಿತ್​ ಶೆಟ್ಟಿ, ರಿಷಬ್​ ಶೆಟ್ಟಿ
Follow us on

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡ ರಿಷಬ್​ ಶೆಟ್ಟಿ ಅವರಿಗೆ ಇಂದು (ಜು.7) ಜನ್ಮದಿನದ ಸಂಭ್ರಮ. ಹಲವು ವರ್ಷಗಳಿಂದ ಚಂದನವನದಲ್ಲಿ ತೊಡಗಿಕೊಂಡಿರುವ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಇಂದು ಎಲ್ಲರೂ ರಿಷಬ್​ ಶೆಟ್ಟಿಗೆ ಹುಟ್ಟುಹಬ್ಬದ ಶುಭ ಹಾರೈಸುತ್ತಿದ್ದಾರೆ. ಅವರ ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ರಕ್ಷಿತ್​ ಶೆಟ್ಟಿ ಕೂಡ ತುಂಬಾ ಆತ್ಮೀಯತೆಯಿಂದ ವಿಶ್​ ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಅನೇಕ ಸೋಲು-ಗೆಲುವುಗಳನ್ನು ಜೊತೆಯಾಗಿ ಕಂಡವರು ಈ ಗೆಳೆಯರು.

‘ನಿನ್ನ ಜೊತೆಗಿನ ಈ ಸಂತಸದ ಪಯಣವು ಪ್ರೀತಿ, ನಗು, ಕಲಿಕೆಯಿಂದ ತುಂಬಿದೆ. ಹುಟ್ಟುಹಬ್ಬದ ಶುಭಾಶಯಗಳು ಮಗಾ. ನಿನ್ನ ಬದುಕು ಯಾವಾಗಲೂ ಖುಷಿಯಾಗಿರಲಿ ಮತ್ತು ಅದ್ಭುತವಾಗಿರಲಿ ಎಂದು ಹಾರೈಸುತ್ತೇನೆ’ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ. ‘ಧನ್ಯವಾದಗಳು ಮಗಾ’ ಎಂದು ರಿಷಬ್​ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್​ ಶೆಟ್ಟಿ ಒಡೆತನದ ಪರಮ್​ವಾ ಸ್ಟುಡಿಯೋಸ್​ ಮೂಲಕವೂ ರಿಷಬ್​ಗೆ ಶುಭಕೋರಲಾಗಿದೆ.

ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್​ ಪಾರ್ಟಿ ಮುಂತಾದ ಸಿನಿಮಾಗಳಲ್ಲಿ ರಕ್ಷಿತ್​ ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಜೊತೆಯಾಗಿ ಕೆಲಸ ಮಾಡಿದರು. ಈಗ ಅವರವರ ಪ್ರತ್ಯೇಕ ಪ್ರಾಜೆಕ್ಟ್​ಗಳಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ. ಮೊದಲು ನಿರ್ದೇಶನದಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಿಷಬ್​ ಅವರಿಗೆ ಈಗ ನಟನೆಯ ಆಫರ್​ಗಳು ಹೆಚ್ಚಾಗಿವೆ. ಅದರ ಜೊತೆಗೆ ನಿರ್ದೇಶನಕ್ಕೂ ಅವರು ಸೂಕ್ತ ಸಮಯ ಮೀಸಲಿಡುತ್ತಿದ್ದಾರೆ.

ನಿರ್ದೇಶಕನಾಗಿ ‘ಕಿರಿಕ್​ ಪಾರ್ಟಿ’ ಚಿತ್ರದಿಂದ ಅಭೂತಪೂರ್ವ ಯಶಸ್ಸು ಕಂಡ ಬಳಿಕ ‘ಬೆಲ್​ ಬಾಟಂ’ ಸಿನಿಮಾದಲ್ಲಿ ಹೀರೋ ಆಗಿ ಬಡ್ತಿ ಪಡೆದಿದ್ದು ರಿಷಬ್​ ಜೀವನದ ಒಂದು ಟರ್ನಿಂಗ್​ ಪಾಯಿಂಟ್​. ಈಗ ಆ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ‘ರುದ್ರಪ್ರಯಾಗ’ ಚಿತ್ರವನ್ನು ರಿಷಬ್​ ನಿರ್ದೇಶಿಸುತ್ತಿದ್ದು, ಅದರ ಬಗ್ಗೆಯೂ ಅಭಿಮಾನಿಗಳಿಗೆ ಅಪಾರ ನಿರೀಕ್ಷೆ ಇದೆ.

ನಿರ್ದೇಶಕ ಪವನ್​ ಒಡೆಯರ್​, ನಿರ್ಮಾಪಕ ಕಾರ್ತಿಕ್​ ಗೌಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿ​ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಇದನ್ನೂ ಓದಿ:

ರಕ್ಷಿತ್​ ಶೆಟ್ಟಿ Vs​ ಸುದ್ದಿ ವಾಹಿನಿ: ‘ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು’ ಎಂದ ಪುಷ್ಕರ್​

ರಕ್ಷಿತ್​ Vs ಲಹರಿ ವೇಲು ವಿವಾದ​ ಶುರುವಾಗಿದ್ದು ಯಾಕೆ? ಅಂತ್ಯವಾಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್​