Rishab Shetty: ‘ಕಾಂತಾರ 2’ ವಿಚಾರದಲ್ಲಿ ಹೊಸ ಅಪ್​ಡೇಟ್ ನೀಡಿದ ರಿಷಬ್ ಶೆಟ್ಟಿ

|

Updated on: Feb 24, 2023 | 2:41 PM

ರಿಷಬ್ ಜೊತೆ ನಿಂತು ಪೋಸ್ ನೀಡಿದ್ದ ಊರ್ವಶಿ ಅವರು, ‘ಕಾಂತಾರ 2’ ಲೋಡಿಂಗ್ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು.

Rishab Shetty: ‘ಕಾಂತಾರ 2’ ವಿಚಾರದಲ್ಲಿ ಹೊಸ ಅಪ್​ಡೇಟ್ ನೀಡಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ
Follow us on

ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಈ ಸಿನಿಮಾದಿಂದ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಕರಾವಳಿ ಸೊಗಡಿನ ಕಥೆಯನ್ನು ಇಟ್ಟುಕೊಂಡು ಅವರು ಒಂದೊಳ್ಳೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಈಗ ‘ಕಾಂತಾರ 2’ ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಈ ಸಿನಿಮಾ ಅಧಿಕೃತ ಘೋಷಣೆ ಆಗಲಿದೆ. ಹೀಗಿರುವಾಗಲೇ ರಿಷಬ್ ಅವರು ‘ಕಾಂತಾರ 2’ (Kantara 2) ಬಗ್ಗೆ ಹೊಸ ಅಪ್​ಡೇಟ್ ನೀಡಿದ್ದಾರೆ.

‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಇದಕ್ಕೆ ಕಾರಣ ಆಗಿದ್ದು ರಿಷಬ್ ಜೊತೆ ಅವರು ಹಂಚಿಕೊಂಡಿದ್ದ ಫೋಟೋ. ರಿಷಬ್ ಜೊತೆ ನಿಂತು ಪೋಸ್ ನೀಡಿದ್ದ ಊರ್ವಶಿ ಅವರು, ‘ಕಾಂತಾರ 2’ ಲೋಡಿಂಗ್ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಅವರು ರಿಷಬ್ ಶೆಟ್ಟಿಯ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಈ ವಿಚಾರದಲ್ಲಿ ರಿಷಬ್​ಗೂ ಪ್ರಶ್ನೆ ಎದುರಾಗಿದೆ. ಅವರು ನೇರಮಾತುಗಳಿಂದ ಇದಕ್ಕೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ರಿಷಬ್ ಶೆಟ್ಟಿ ಅವರು ಇತ್ತೀಚೆಗೆ   ‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಪಡೆದರು. ಇದನ್ನು ಪಡೆಯಲು ಅವರು ಮುಂಬೈಗೆ ತೆರಳಿದ್ದರು. ಈ ವೇಳೆ ಪಾಪರಾಜಿಗಳು ಅವರನ್ನು ಎದುರುಗೊಂಡರು. ಓರ್ವ ಪಾಪರಾಜಿ ರಿಷಬ್ ಅವರಿಗೆ ಮೈಕ್ ಹಿಡಿದು ಊರ್ವಶಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಊರ್ವಶಿ ಅವರ ಹೆಸರು ಕೂಡ ಕೇಳಿ ಬರುತ್ತದೆಯಲ್ಲ’ ಎಂದು ರಿಷಬ್​ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ರಿಷಬ್ ಶೆಟ್ಟಿ, ‘ನಮ್ಮ ಸೆಲ್ಫಿ ನೋಡಿ ಈ ರೀತಿಯ ಮಾತುಗಳು ಬರುತ್ತಿವೆ. ಆ ರೀತಿ ಇಲ್ಲ. ಸದ್ಯ ಕಥೆ ಬರೆಯುತ್ತಿದ್ದೇನೆ. ಶೀಘ್ರವೇ ಘೋಷಣೆ ಮಾಡುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಊರ್ವಶಿ ಮಾಡಿದ್ದು ಪ್ರಚಾರದ ಗಿಮಿಕ್ ಅನ್ನೋದು ಸ್ಪಷ್ಟವಾಗಿದೆ.

ಇದನ್ನೂ ಓದಿ: ‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸೋದು ನಿಜವಲ್ಲ; ಫೋಟೋ ಹಿಂದಿನ ಸತ್ಯ ಇಲ್ಲಿದೆ

ಊರ್ವಶಿ ರೌಟೇಲಾ ಅವರು ಇತ್ತೀಚೆಗೆ ಪ್ರಚಾರದ ಘೀಳಿಗೆ ಒಳಗಾಗಿದ್ದಾರೆ. ಅವರು ಕೆಲ ದಿನಗಳ ಹಿಂದೆ ರಿಷಭ್ ಪಂತ್ ಹಿಂದೆ ಬಿದ್ದಿದ್ದರು. ಈಗ ರಿಷಬ್ ಶೆಟ್ಟಿ ಅವರ ಹಿಂದೆ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:25 pm, Fri, 24 February 23