Rishab Shetty: ರಿಷಬ್​ ಶೆಟ್ಟಿ ರಿಯಲ್​ ಬದುಕಿಗೆ ಹತ್ತಿರವಾಗಿದೆ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ; ಏನು ಇದರ ಕಹಾನಿ?

Harikathe Alla Girikathe: ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಜೂನ್​ 23ರಂದು ಬಿಡುಗಡೆ ಆಗುತ್ತಿದೆ. ಟ್ರೇಲರ್​ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಕಥೆ ರಿಷಬ್​ ಶೆಟ್ಟಿ ಅವರಿಗೆ ಹೆಚ್ಚು ಕನೆಕ್ಟ್​ ಆಗುವಂತಿದೆ.

Rishab Shetty: ರಿಷಬ್​ ಶೆಟ್ಟಿ ರಿಯಲ್​ ಬದುಕಿಗೆ ಹತ್ತಿರವಾಗಿದೆ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ; ಏನು ಇದರ ಕಹಾನಿ?
‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ತಂಡ
Edited By:

Updated on: Jun 19, 2022 | 7:30 AM

ಹತ್ತಾರು ವರ್ಷಗಳಿಂದ ರಿಷಬ್​ ಶೆಟ್ಟಿ (Rishab Shetty) ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ ಅವರು ಯಶಸ್ಸು ಕಂಡಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಆದರೆ ಆರಂಭದ ದಿನಗಳು ಹೀಗಿರಲಿಲ್ಲ. ನಿರ್ದೇಶಕನಾಗಬೇಕು ಎಂದು ಕನಸು ಕಂಡಿದ್ದ ಅವರು ಅನೇಕ ನಿರ್ಮಾಪಕರ ಮನೆ ಬಾಗಿಲಿಗೆ ಅಲೆದಿದ್ದರು. ಅಂಥ ಓರ್ವ ನಿರ್ದೇಶಕನ ಕಥೆಯೇ ಈಗ ಸಿನಿಮಾ ಆಗಿದೆ. ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಸಿನಿಮಾದಲ್ಲಿ ಈ ರೀತಿಯ ಕಹಾನಿ ಇದೆ. ಅದರಲ್ಲಿ ರಿಷಬ್​ ಶೆಟ್ಟಿ ಅವರು ಹೀರೋ ಆಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಚನಾ ಇಂದರ್​ (Rachana Inder), ತಪಸ್ವಿನಿ ಪೂಣಚ್ಚ ಅವರು ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ತಪಸ್ವಿನಿ ಅವರಿಗೆ ಇದು ಮೊದಲ ಸಿನಿಮಾ.

ಕಿರಣ್​ ಅನಂತ್​, ಅನಿರುದ್ಧ್ ಮಹೇಶ್​ ಅವರು ಜೊತೆಯಾಗಿ ‘ಹರಿಕಥೆ ಅಲ್ಲ ಹಿರಿಕಥೆ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜೂನ್​ 23ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಕಥೆ ಏನು ಎಂಬ ಎಳೆಯನ್ನು ಟ್ರೇಲರ್​ನಲ್ಲಿ ಬಿಟ್ಟುಕೊಡಲಾಗಿದೆ. ನಿರ್ದೇಶಕನಾಗಬೇಕು ಎಂಬ ಯುವಕ ಎಷ್ಟೆಲ್ಲ ಕಷ್ಟಪಡುತ್ತಾನೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ರಿಯಲ್​ ಲೈಫ್​ನಲ್ಲಿ ರಿಷಬ್​ ಕೂಡ ಹೀಗೆ ಕಷ್ಟಪಟ್ಟು ಮೇಲೆ ಬಂದವರು. ಹಾಗಾಗಿ ಅವರಿಗೆ ಈ ಕಥೆ ಹೆಚ್ಚು ಕನೆಕ್ಟ್​ ಆಗಿದೆ.

‘ಸಂದೇಶ್​ ಪ್ರೊಡಕ್ಷನ್ಸ್’​ ಮೂಲಕ ಈ ಚಿತ್ರವನ್ನು ಸಂದೇಶ್​ ಅವರು ನಿರ್ಮಾಣ ಮಾಡಿದ್ದಾರೆ. ಪ್ರಮೋದ್​ ಶೆಟ್ಟಿ ಅವರು ಒಂದು ಮುಖ್ಯಪಾತ್ರ ಮಾಡುವುದರ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ರಿಷಬ್​ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ದಿನೇಶ್​ ಮಂಗಳೂರು, ಹೊನ್ನವಳ್ಳಿ ಕೃಷ್ಣ ಅವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ
ದಸರಾ ಹಬ್ಬಕ್ಕೆ ಬರಲಿದೆ ‘ಕಾಂತಾರ’; ರಿಷಬ್​ ಶೆಟ್ಟಿ ಚಿತ್ರದ ರಿಲೀಸ್​ ಡೇಟ್​ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್​’
ತೆಲುಗು ಸಿನಿಮಾದಲ್ಲಿ ರಿಷಬ್​ ಶೆಟ್ಟಿ; ಸೆನ್ಸೇಷನ್​ ಸೃಷ್ಟಿಸಿದ ಟ್ರೇಲರ್​
ಎರಡನೇ ಬಾರಿ ತಂದೆಯಾದ ರಿಷಬ್​ ಶೆಟ್ಟಿ; ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಗತಿ ಶೆಟ್ಟಿ
‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ

ಗಿರಿ ಕೃಷ್ಣ ಕಥೆ ಬರೆದಿದ್ದು, ವಾಸುಕಿ ವೈಭವ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ಈಗಾಗಲೇ 35 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ‘ಈ ಸಿನಿಮಾದಲ್ಲಿ ಪ್ರೇಕ್ಷಕರನ್ನು ನಕ್ಕು ನಲಿಸುವ ಭರಪೂರ ಕಾಮಿಡಿ ದೃಶ್ಯಗಳಿವೆ. ಎಲ್ಲ ಪಾತ್ರಗಳು ಕ್ರೇಜಿ ಆಗಿವೆ’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.