ಕಿಚ್ಚನಿಂದ ಸ್ಫೂರ್ತಿ ಪಡೆದು ಈ ನಿರ್ಧಾರ ತೆಗೆದುಕೊಂಡರು ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ಚಿತ್ರರಂಗಕ್ಕೆ ಬರುವ ಮೊದಲೇ ಸುದೀಪ್ ಅವರನ್ನು ಸ್ಫೂರ್ತಿಯಾಗಿ ಪಡೆದುಕೊಂಡವರು. ಇದನ್ನು ಅನೇಕ ವೇದಿಕೆಗಳ ಮೇಲೆ ಹೇಳುತ್ತಾ ಬರುತ್ತಿದ್ದಾರೆ. ಸುದೀಪ್​​ಗೂ ಈ ವಿಚಾರ ಗೊತ್ತಿದೆ. ರಿಷಬ್ ಅವರ ಸಿನಿಮಾಗಳನ್ನು ಸುದೀಪ್ ಅವರು ಬೆಂಬಲಿಸಿದ್ದು ಇದೆ. ಈಗ ಇವರ ಹಳೆಯ ವಿಡಿಯೋ ವೈರಲ್ ಆಗಿದೆ.

ಕಿಚ್ಚನಿಂದ ಸ್ಫೂರ್ತಿ ಪಡೆದು ಈ ನಿರ್ಧಾರ ತೆಗೆದುಕೊಂಡರು ರಿಷಬ್ ಶೆಟ್ಟಿ
ರಿಷಬ್-ಸುದೀಪ್
Edited By:

Updated on: Oct 07, 2025 | 8:35 AM

ರಿಷಬ್ ಶೆಟ್ಟಿ (Rishab Shetty) ಅವರು ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಅವರ ಹಳೆಯ ಸಂದರ್ಶನಗಳು ಈಗ ವೈರಲ್ ಆಗುತ್ತಾ ಇವೆ. ರಿಷಬ್ ಶೆಟ್ಟಿ ಅವರು ಸುದೀಪ್ ಅವರ ದೊಡ್ಡ ಅಭಿಮಾನಿ. ಇದು ಮೊದಲಿನಿಂದಲೂ ಗೊತ್ತಿರೋ ವಿಚಾರ. ಅವರು ಸುದೀಪ್ ಅವರಿಂದ ಪಡೆದ ಸ್ಫೂರ್ತಿ ಏನು ಎಂಬುದರ ವಿಡಿಯೋ ವೈರಲ್ ಆಗುತ್ತಾ ಇದೆ.

ರಿಷಬ್ ಶೆಟ್ಟಿ ಅವರು ಚಿತ್ರರಂಗಕ್ಕೆ ಬರುವ ಮೊದಲೇ ಸುದೀಪ್ ಅವರನ್ನು ಸ್ಫೂರ್ತಿಯಾಗಿ ಪಡೆದುಕೊಂಡವರು. ಇದನ್ನು ಅನೇಕ ವೇದಿಕೆಗಳ ಮೇಲೆ ಹೇಳುತ್ತಾ ಬರುತ್ತಿದ್ದಾರೆ. ಸುದೀಪ್​​ಗೂ ಈ ವಿಚಾರ ಗೊತ್ತಿದೆ. ರಿಷಬ್ ಅವರ ಸಿನಿಮಾಗಳನ್ನು ಸುದೀಪ್ ಅವರು ಬೆಂಬಲಿಸಿದ್ದು ಇದೆ. ಈ ಮೊದಲು ರಿಷಬ್ ಅವರು ಬಿಗ್ ಬಾಸ್ ವೇದಿಕೆ ಏರಿದ್ದರು ಮತ್ತು ಅವರಿಂದ ಸ್ಫೂರ್ತಿ ಪಡೆದು ಮಾಡುತ್ತಿರುವ ಕೆಲಸಗಳ ಬಗ್ಗೆ ಹೇಳಿದರು.

‘ಶೆಟ್ರಿಗೆ ಈಗಲೂ ಲವ್​ ಲೆಟರ್​ಗಳು ಮೊಬೈಲ್​ನಲ್ಲೇ ಬರುತ್ತೆ’ ಎಂದು ಸುದೀಪ್ ವೇದಿಕೆ ಮೇಲೆ ಕೇಳಿದರು. ‘ಇಲ್ಲ’ ಎಂದರು ರಿಷಬ್. ಆಗ ಸುದೀಪ್ ‘ಲೆಟರ್​ಗಳಲ್ಲಿ ಬರುತ್ತವೆಯೇ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಿಷಬ್, ‘ಮೊಬೈಲ್​ನಲ್ಲಿ ಏಕೆ ಬರಲ್ಲ ಎಂದರೆ’ ಎಂದು ಮಾತು ಆರಂಭಿಸಿ, ‘ಮೊಬೈಲ್​ನಲ್ಲಿ ಲವ್ ಲೆಟರ್ ಬರೋದೇ ಇಲ್ಲ’ ಎಂದರು. ಆಗ ಸುದೀಪ್ ಅವರು ಅಯ್ಯೋ ಎಂಬಂತಹ ಎಕ್ಸ್​​ಪ್ರೆಷನ್ ನೀಡಿದರು. ರಿಷಬ್ ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಾತಿನ ಅರ್ಥವಾಗಿತ್ತು.

ರಿಷಬ್-ಸುದೀಪ್ ಸಂಭಾಷಣೆ

‘ಸುಮಾರು ಒಂದೇ ಮೊಬೈಲ್ ನಂಬರ್ ಇತ್ತು. ಫೇವರಿಟ್ ಸ್ಟಾರ್​ಗಳ ನಂಬರ್ ಚೇಂಜ್ ಆಗಾಗ ಆಗ್ತಿತ್ತು. ಅದನ್ನು ಗಮನಿಸುತ್ತಾ ಇದ್ದೆ. ಕಾಟ ಕಡಿಮೆ ಆಗುತ್ತೆ ಅಂತ ನಂಬರ್ ಚೇಂಜ್ ಮಾಡ್ತಿದೆ. ಇದಕ್ಕೆ ನೀವು ಕೂಡ ಸ್ಫೂರ್ತಿ. ನೀವೇ ನಮ್ಮ ಫೇವರಿಟ್​ ಹೀರೋ ಅಲ್ವ’ ಎಂದರು ರಿಷಬ್.

ಇದನ್ನೂ ಓದಿ: s‘ಅವರಿವರ ಕೈಕಾಲು ಹಿಡಿದಿದ್ದಕ್ಕೆ ಒಂದು ಶೋ ಸಿಕ್ತು’; ಯಶಸ್ಸಿನ ಬೆನ್ನಲ್ಲೇ ರಿಷಬ್ ಹಳೆಯ ಟ್ವೀಟ್ ವೈರಲ್

ಸಿನಿಮ ಕಲಾವಿದರು ಎಂದಾಗ ಬೇರೆಯವರು ಕರೆ ಮಾಡೋದು ಸಾಮಾನ್ಯ. ನಂಬರ್ ಚೇಂಜ್ ಮಾಡಿ ಬಿಟ್ಟರೆ ಇದರ ಸಮಸ್ಯೇ ಇರೋದಿಲ್ಲವಲ್ಲ ಎಂಬುದು ಅವರ ಆಲೋಚನೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳು ಈ ಫಾರ್ಮುಲಾ ಬಳಕೆ ಮಾಡುತ್ತಾ ಇರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.