AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​​ಗೆ ಸವಲತ್ತು ನೀಡಿಲ್ಲವೆಂದು ಆರೋಪಿಸಿ ಜೈಲು ಅಧಿಕಾರಿಗಳ ವಿರುದ್ಧ ಕೋರ್ಟ್​​ಗೆ ಅರ್ಜಿ

ಕೊಲೆ ಆರೋಪಿ, ನಟ ದರ್ಶನ್ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ. ಕೋರ್ಟ್ ಆದೇಶವಿದ್ದರೂ ಸಹ ದರ್ಶನ್​ ಅವರಿಗೆ ಕೆಲವು ಅಗತ್ಯ ಸವಲತ್ತುಗಳನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ. ಹಾಗಾಗಿ ಖುದ್ದು ಪರಿಶೀಲನೆ ಮಾಡುವಂತೆ ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್​​ಗೆ ಸವಲತ್ತು ನೀಡಿಲ್ಲವೆಂದು ಆರೋಪಿಸಿ ಜೈಲು ಅಧಿಕಾರಿಗಳ ವಿರುದ್ಧ ಕೋರ್ಟ್​​ಗೆ ಅರ್ಜಿ
Darshan Thoogudeepa
ರಮೇಶ್​ ಎಮ್​.
| Edited By: |

Updated on: Oct 06, 2025 | 3:31 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಸದ್ಯಕ್ಕೆ ಪರಪ್ಪನ ಅಗ್ರಹಾರದ (Parappana Agrahara) ಕ್ವಾರಂಟೈನ್ ಸೆಲ್​​ನಲ್ಲಿ ಅವರನ್ನು ಇರಿಸಲಾಗಿದೆ. ಕೆಲವು ಸವಲತ್ತುಗಳನ್ನು ನೀಡುವಂತೆ ದರ್ಶನ್ ಪರ ವಕೀಲರು ಕೋರ್ಟ್​​ಗೆ ಮನವಿ ಮಾಡಿಕೊಂಡಿದ್ದರು. ಅದಕ್ಕೆ ನ್ಯಾಯಾಲಯದಿಂದ ಅನುಮತಿ ಕೂಡ ಸಿಕ್ಕಿತ್ತು. ಆದರೆ ದರ್ಶನ್ (Darshan) ಅವರಿಗೆ ಕನಿಷ್ಠ ಸವಲತ್ತುಗಳನ್ನು ಜೈಲು ಅಧಿಕಾರಿಗಳು ನೀಡಿಲ್ಲ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್ ಪರ ವಕೀಲರಾದ ಸುನಿಲ್ ಅವರು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಖುದ್ದು ಪರಿಶೀಲಿಸುವಂತೆ ಸಿಆರ್​​ಪಿಸಿ 310ರ ಅಡಿ ಅರ್ಜಿ ಸಲ್ಲಿಸಲಾಗಿದೆ. ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ. ಆದರೆ ಆದೇಶ ಪಾಲಿಸಿದ್ದೇವೆಂದು ಕೋರ್ಟ್​ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಖುದ್ದು ಪರಿಶೀಲಿಸುವಂತೆ ಕೋರ್ಟ್​ಗೆ ಅರ್ಜಿ ಹಾಕಲಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ಅಕ್ಡೋಬರ್ 9ಕ್ಕೆ ಕೋರ್ಟ್ ಮುಂದೂಡಿದೆ. ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ. ಕೋರ್ಟ್ ಆದೇಶವಿದ್ದರೂ ಕೂಡ ದರ್ಶನ್​ ಅವರಿಗೆ ಕೆಲವು ಅಗತ್ಯ ಸವಲತ್ತುಗಳನ್ನು ನೀಡಿಲ್ಲವೆಂದು ಆರೋಪಿಸಲಾಗಿದೆ. ಇದಕ್ಕೆ ಜೈಲು ಅಧಿಕಾರಿಗಳು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ತಿಳಿಯಬೇಕಿದೆ.

ಈ ಮೊದಲು ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದರು. ಆ ಕಾರಣಕ್ಕಾಗಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬೇಕಾಯಿತು. ನಂತರ ಅವರಿಗೆ ಜಾಮೀನು ಸಿಕ್ಕಿತು. ಆದರೆ ಸುಪ್​ರೀಂ ಕೋರ್ಟ್​​ನಲ್ಲಿ ಅವರ ಜಾಮೀನು ರದ್ದಾಯಿತು. ಹಾಗಾಗಿ ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಯಿತು. ಈ ಬಾರಿ ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ಇದನ್ನೂ ಓದಿ: ‘ಕೆಟ್ಟ ಕಮೆಂಟ್ ಯಾರೇ ಮಾಡಿದರೂ ತಪ್ಪು’; ದರ್ಶನ್ ಅಭಿಮಾನಿಗಳ ನಡೆ ಖಂಡಿಸಿದ ರಚಿತಾ ರಾಮ್

ಇದು ಹೈಪ್ರೋಫೈಲ್ ಕೇಸ್. ಎಲ್ಲರ ಕಣ್ಣು ಈ ಪ್ರಕರಣದ ಮೇಲಿದೆ. ಈ ಪ್ರಕರಣವು ದೇಶದ 2ನೇ ಪ್ರಮುಖ ಕೇಸ್ ಅನಿಸಿಕೊಂಡಿದೆ. ಒಂದು ವರ್ಷದಲ್ಲಿ ಮೇಜರ್ ಕೇಸ್ ಅನಿಸಿಕೊಂಡ ಪ್ರಕರಣಗಳ ಪಟ್ಟಿಯನ್ನು ಬಹಿರಂಗ ಮಾಡಲಾಗಿದೆ. ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಕೇಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?