ಗೋವಾ ಚಿತ್ರೋತ್ಸವ: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ, ಇನ್ಯಾರಿಗೆ ಪ್ರಶಸ್ತಿ

ಗೋವಾ ಚಿತ್ರೋತ್ಸವ (57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಇಂದು ಪೂರ್ಣವಾಗಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಸಿನಿಮಾ, ನಟ-ನಟಿ, ತಂತ್ರಜ್ಞರಿಗೆ ಪ್ರಶಸ್ತಿ ಘೋಷಣೆ ಮಾಡಲಾಯ್ತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಾತ್ರವಲ್ಲದೆ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ವಿಶೇಷ ಮೆನ್ಷನ್ ಸಹ ನೀಡಲಾಗಿದೆ. ಹಲವು ಅಂತರಾಷ್ಟ್ರೀಯ ಸಿನಿಮಾಗಳು, ಕಲಾವಿದರ ನಡುವೆ ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಯ್ತು.

ಗೋವಾ ಚಿತ್ರೋತ್ಸವ: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ, ಇನ್ಯಾರಿಗೆ ಪ್ರಶಸ್ತಿ
Rishab Shetty

Updated on: Nov 28, 2026 | 10:05 PM

ಗೋವಾ ಚಿತ್ರೋತ್ಸವ (57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಇಂದು ಪೂರ್ಣವಾಗಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಸಿನಿಮಾ, ನಟ-ನಟಿ, ತಂತ್ರಜ್ಞರಿಗೆ ಪ್ರಶಸ್ತಿ ಘೋಷಣೆ ಮಾಡಲಾಯ್ತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಮಾತ್ರವಲ್ಲದೆ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ವಿಶೇಷ ಮೆನ್ಷನ್ ಸಹ ನೀಡಲಾಗಿದೆ. ಹಲವು ಅಂತರಾಷ್ಟ್ರೀಯ ಸಿನಿಮಾಗಳು, ಕಲಾವಿದರ ನಡುವೆ ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಯ್ತು.

ಗೋವಾ ಚಿತ್ರೋತ್ಸವದಲ್ಲಿ ಪ್ರಶಸ್ತಿ ಘೋಷಣೆಯಾದ ಪಟ್ಟಿ ಇಲ್ಲಿದೆ

ಅತ್ಯುತ್ತಮ ನಿರ್ದೇಶಕ (ಸಿಲ್ವರ್ ಪೀಕಾಕ್): ವೋಲ್ಕರ್ ಷ್ಲೋಂಡಾರ್ಫ್ (‘ವಿಸಿಟೇಶನ್’ ಚಿತ್ರಕ್ಕಾಗಿ)

Loading...

ವಿಶೇಷ ಉಲ್ಲೇಖ (Special Mention): ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1

ಅತ್ಯುತ್ತಮ ಚೊಚ್ಚಲ ಚಿತ್ರ (ಸಿಲ್ವರ್ ಪೀಕಾಕ್): ದಿ ಗೋಲ್ಡನ್ ಏಜ್ (ನಿರ್ದೇಶನ: ಬೆರೆಂಜರ್ ಥೌಯಿನ್)

ವಿಶೇಷ ತೀರ್ಪುಗಾರರ ಪ್ರಶಸ್ತಿ (ಸಿಲ್ವರ್ ಪೀಕಾಕ್): ದಿ ರಿವರ್ ಟ್ರೈನ್

ಅತ್ಯುತ್ತಮ ನಟಿ (ಸಿಲ್ವರ್ ಪೀಕಾಕ್): ಮಾಯಾ ಓ’ರೂರ್ಕ್ (‘ದಿ ಮೆಲ್ಟ್‌ಡೌನ್’ ಚಿತ್ರಕ್ಕಾಗಿ)

ಅತ್ಯುತ್ತಮ ನಟ (ಸಿಲ್ವರ್ ಪೀಕಾಕ್): ರಿಷಬ್ ಶೆಟ್ಟಿ (‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ)

ಅತ್ಯುತ್ತಮ ವೆಬ್ ಸರಣಿ (OTT ಪ್ರಶಸ್ತಿ): ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ (ನಿರ್ದೇಶನ: ರಾಬಿ ಗ್ರೆವಾಲ್)

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ವಿಶಾಲ್ ಚತುರ್ವೇದಿ (‘ಹನುಮಾನ್ ಅಂಶ್’ ಚಿತ್ರಕ್ಕಾಗಿ)

ರಿಷಬ್ ಶೆಟ್ಟಿ ಏನು ಹೇಳಿದರು?

ಪ್ರಪಂಚದ ವಿವಿಧ ಭಾಗಗಳ ಸಿನಿಮಾಗಳನ್ನು ಪ್ರದರ್ಶಿಸಲು ಚಿತ್ರನಿರ್ಮಾಪಕರಿಗೆ IFFI ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ. ಅಲ್ಲದೆ, ಮುಖ್ಯವಾಹಿನಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಅವಕಾಶ ಸಿಗದಂತಹ ಸಿನಿಮಾಗಳನ್ನು ನೋಡಲು ಪ್ರೇಕ್ಷಕರಿಗೆ ಇದು ಅನುವು ಮಾಡಿಕೊಡುತ್ತದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ‘ಅನೇಕ ಸಿನಿಮಾಗಳನ್ನು ಮುಖ್ಯವಾಹಿನಿಯಲ್ಲಿ ನೋಡುವುದು ಕಷ್ಟ, ಅವುಗಳನ್ನು ನೋಡುವ ಅವಕಾಶವೂ ನಮಗೆ ಸಿಗುವುದಿಲ್ಲ. ಆದರೆ ಗೋವಾ ಚಿತ್ರೋತ್ಸವಗಳಲ್ಲಿ ನಮಗೆ ಆ ಅವಕಾಶ ಸಿಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us