ತೆಲುಗು ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದ ರಿಷಬ್ ಶೆಟ್ಟಿ

ಕಾಂತಾರ: ಚಾಪ್ಟರ್ 1 ಪ್ರಚಾರಕ್ಕಾಗಿ ಹೈದರಾಬಾದ್‌ಗೆ ತೆರಳಿದ ರಿಷಬ್ ಶೆಟ್ಟಿ, ತೆಲುಗು ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಸ್ಥಳೀಯ ಭಾಷೆ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುವ ವಾಡಿಕೆ ಇರುವಾಗ, ರಿಷಬ್ ತಮ್ಮ ಮಾತೃಭಾಷೆ ಕನ್ನಡದಲ್ಲೇ ಭಾಷಣ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.

ತೆಲುಗು ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದ ರಿಷಬ್ ಶೆಟ್ಟಿ
ರಿಷಬ್-ಜೂ.ಎನ್​ಟಿಆರ್

Updated on: Sep 29, 2025 | 2:42 PM

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara Movie) ರಿಲೀಸ್​ಗೆ ರೆಡಿ ಇದೆ. ದೇಶಾದ್ಯಂತ 6 ಸಾವಿರಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ. ಈ ಚಿತ್ರಕ್ಕೆ ರಿಷಬ್ ಅವರದ್ದೇ ನಿರ್ದೇಶನ ಕೂಡ ಇದೆ. ಈ ಸಿನಿಮಾದ ಬಜೆಟ್ 150 ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ರಿಷಬ್ ಶೆಟ್ಟಿ ಹಾಗೂ ತಂಡ ಹೈದರಾಬಾದ್​​​ಗೆ ತೆರಳಿ ಸಿನಿಮಾ ಪ್ರಚಾರ ಮಾಡಿದೆ. ಈ ವೇಳೆ ವೇದಿಕೆ ಮೇಲೆ ರಿಷಬ್ ಅವರು ಕನ್ನಡದಲ್ಲೇ ಮಾತನಾಡಿದರು ಅನ್ನೋದು ವಿಶೇಷ.

ಸಾಮಾನ್ಯವಾಗಿ ಬೇರೆ ರಾಜ್ಯದಲ್ಲಿ ಸಿನಿಮಾ ಪ್ರಚಾರಕ್ಕೆ ವೇದಿಕೆ ಏರಿದಾಗ ಕಲಾವಿದರು ಅಲ್ಲಿನ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ. ಇಲ್ಲವೇ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಭಾಷಣ ಇರುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಹೈದರಾಬಾದ್​ನಲ್ಲಿ ನಡೆದ ‘ಕಾಂತಾರ: ಚಾಪ್ಟರ್ 1’  ಪ್ರೀ-ರಿಲೀಸ್ ಈವೇಂಟ್ ಅಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಿಷಬ್ ಮಾತು

ಇದನ್ನೂ ಓದಿ
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆ ಸಿನಿಮಾ ಆಗಿದೆ; JR NTR
‘ಇನ್ಮುಂದೆ ಈ ರೀತಿಯ ವಿಡಿಯೋ ಬರಲ್ಲ’ ಎಂದ ಮಮ್ಮಿ ಅಶೋಕ್
‘ಬಿಗ್ ಬಾಸ್’ ಮನೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಫೋಟೋ, ಹೆಸರು, ವಿವರ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ಮನಸ್ಸಿನಿಂದ ಮಾತನಾಡಬೇಕು, ಹೀಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಅರ್ಥ ಆಗಿಲ್ಲ ಎಂದರೆ ಸಹೋದರ (ಜೂನಿಯರ್ ಎನ್​ಟಿಆರ್) ಟ್ರಾನ್ಸ್​ಲೇಷನ್ ಮಾಡುತ್ತಾರೆ. ಅವರನ್ನು ಫ್ರೆಂಡ್ ಎನ್ನಬೇಕಾ, ಸಹೋದರ ಎನ್ನಬೇಕಾ ಎಂಬುದೇ ಗೊತ್ತಾಗೋದಿಲ್ಲ. ಅವರು ನನ್ನೂರವರಂತೆ ಭಾಸವಾಗುತ್ತದೆ’ ಎಂದು ಮಾತು ಆರಂಭಿಸಿದರು ರಿಷಬ್.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1 ಚಿತ್ರಕ್ಕಾಗಿ 20-25 ವಿಎಫ್​ಎಕ್ಸ್ ಕಂಪನಿಗಳು ಕೆಲಸ ಮಾಡಿವೆ’; ರಿಷಬ್ ಶೆಟ್ಟಿ

‘ಹೈದರಾಬಾದ್​ಗೆ ಬರ್ತೀನಿ ಎಂದಾಗ ನನ್ನ ಆಡಿಯನ್ಸ್​ಗೆ ನಿಮ್ಮನ್ನು ಪರಿಚಯಿಸ್ತೀನಿ ಎಂದು ಅವರೇ ಕರೆದುಕೊಂಡು ಬಂದು ನಿಲ್ಲಿಸಿದರು. ಕುಂದಾಪುರಕ್ಕೆ ಬಂದಾಗ ಅವರಿಗೆ ಟ್ರೀಟ್ ಕೊಡಬೇಕು ಎಂದುಕೊಂಡಿದ್ದೆವು. ಆದರೆ, ಅವರೇ ನಾಟಿಕೋಳಿ ಸಾರು ಮಾಡಿ ನಮಗೆ ತಿನ್ನಿಸಿದರು. ನಾನು-ಅವರು ಹೇಗೋ, ಆಂಧ್ರ-ಕರ್ನಾಟಕ ಹಾಗೆ ಎಂಬ ಭಾವನೆ ನನ್ನದು. ಕಾಂತಾರ: ಚಾಪ್ಟರ್ 1 ಚಿತ್ರಕ್ಕೆ ನಿಮ್ಮ ಬೆಂಬಲ ಇರುತ್ತದೆ ಎಂಬ ನಂಬಿಕೆ ನನ್ನದು’ ಎಂದಿದ್ದಾರೆ ರಿಷಬ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.