‘ಟಾಕ್ಸಿಕ್’ ಬಗ್ಗೆ ನಟಿಯ ಟಾಕ್ಸಿಕ್ ನುಡಿ, ‘ಜಾಗ ಖಾಲಿ ಮಾಡಿಸುವೆ’ ಎಂದು ಯಶ್​​ಗೆ ಎಚ್ಚರಿಕೆ

Yash in Toxic movie: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ನೋಡಿದವರು ಇದು ನಿಜಕ್ಕೂ ಹಾಲಿವುಡ್ ಲೆವೆಲ್ ಸಿನಿಮಾ ಎಂದು ಕೊಂಡಾಡುತ್ತಿದ್ದಾರೆ. ಸಿನಿಮಾನಲ್ಲಿ ನಟಿಸಿರುವ ನಟಿಯರು ಸಹ ಯಶ ಅವರೊಟ್ಟಿಗೆ ಕೆಲಸ ಮಾಡಿದ ಅನುಭವವನ್ನು ಕೊಂಡಾಡಿದ್ದಾರೆ. ಆದರೆ ಇದೀಗ ಕನ್ನಡದ ನಟಿಯೊಬ್ಬರು ಯಶ್ ಹಾಗೂ ‘ಟಾಕ್ಸಿಕ್’ ಟ್ರೈಲರ್ ಅನ್ನು ಟೀಕೆ ಮಾಡಿದ್ದಾರೆ. ‘ಜಾಗ ಖಾಲಿ’ ಮಾಡಿಸುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

‘ಟಾಕ್ಸಿಕ್’ ಬಗ್ಗೆ ನಟಿಯ ಟಾಕ್ಸಿಕ್ ನುಡಿ, ‘ಜಾಗ ಖಾಲಿ ಮಾಡಿಸುವೆ’ ಎಂದು ಯಶ್​​ಗೆ ಎಚ್ಚರಿಕೆ
Yash Rishika

Updated on: Aug 12, 2026 | 10:15 AM

ಮುಖ್ಯಾಂಶಗಳು

  • ‘ಟಾಕ್ಸಿಕ್’ ಸಿನಿಮಾ ಟ್ರೈಲರ್​​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
  • ಆದರೆ ಕನ್ನಡದ ನಟಿಯೊಬ್ಬರು ಟ್ರೈಲರ್ ಅನ್ನು ಟೀಕೆ ಮಾಡಿದ್ದಾರೆ.
  • ಕರ್ನಾಟಕದಿಂದ ಜಾಗ ಖಾಲಿ ಮಾಡಿಸುವೆ ಎಂದು ಯಶ್​ಗೆ ಎಚ್ಚರಿಕೆ ಸಹ ಕೊಟ್ಟಿದ್ದಾರೆ.

ಟಾಕ್ಸಿಕ್’ (Toxic) ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ಟ್ರೈಲರ್ ಅನ್ನು ಪ್ರೇಕ್ಷಕರು ಬಹುವಾಗಿ ಕೊಂಡಾಡುತ್ತಿದ್ದಾರೆ. ನಿಜವಾಗಿಯೂ ಹಾಲಿವುಡ್ ಲೆವೆಲ್ ಎಂದರೆ ಇದು ಎನ್ನುತ್ತಿದ್ದಾರೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾನಲ್ಲಿ ನಟಿಸಿರುವ ಐದೂ ಜನ ನಟಿಯರು ಸಹ ಭಾಗಿ ಆಗಿದ್ದರು. ಎಲ್ಲರೂ ವೇದಿಕೆ ಏರಿ ಸಿನಿಮಾದ ಬಗ್ಗೆ ಖುಷಿ ಹಂಚಿಕೊಂಡರು, ಯಶ್ ಜೊತೆಗೆ ನಟಿಸಿದ್ದು ಅದ್ಭುತ ಅನುಭವ ಎಂದರು. ಆದರೆ ಇದೀಗ ಕನ್ನಡದ ನಟಿಯೊಬ್ಬರು ‘ಟಾಕ್ಸಿಕ್’ ಬಗ್ಗೆ ತಗಾದೆ ತೆಗೆದಿದ್ದಾರೆ. ‘ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ’ ಎಂದು ಯಶ್​​ ಅನ್ನುದ್ದೇಶಿಸಿ ಡೈಲಾಗ್ ಹೊಡೆದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟಿ ರಿಷಿಕಾ ಸಿಂಗ್, ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಟ್ರೈಲರ್ ಬಗ್ಗೆ ಋಣಾತ್ಮಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಎಚ್ಚರಿಕೆ ಕೊಡುವ ರೀತಿಯಲ್ಲಿ ಟ್ರೈಲರ್​​ನ ವಿಮರ್ಶೆಯನ್ನು ನಟಿ ರಿಷಿಕಾ ಮಾಡಿದ್ದಾರೆ.

‘ಹೆಣ್ಮಕ್ಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ, ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ. ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್​​​ಗಳ ಜೊತೆ ನಿನ್ನ ಚಕ್ಕಂದ ಕಂದ. ನಂಗೆ ಇಷ್ಟ ಆಗ್ಲಿಲ್ಲ ನಿನ್ನ ಹೊಸ ಗಂಧ. ನಿಂಗೂ ಹೆಣ್ ಮಗ್ಳು ಇದಾಳೆ ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ? ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ‘ಟಾಕ್ಸಿಕ್’’ ಎಂದು ರಿಷಿಕಾ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಪಡೆದಿದ್ದಾರೆ ಭಾರೀ ಸಂಭಾವನೆ; ಉಳಿದ ಕಲಾವಿದರು ಪಡೆದಿದ್ದೆಷ್ಟು?

ರಿಷಿಕಾ ಅವರ ಈ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ರಿಷಿಕಾರನ್ನು ಟ್ರೋಲ್ ಮಾಡುತ್ತಿದ್ದು, ಅವರ ಅಭಿಪ್ರಾಯ ತಪ್ಪು ಎಂದಿದ್ದಾರೆ. ‘ಖುದ್ದು ನಟಿಯರೇ ವೇದಿಕೆಗೆ ಬಂದು ತಮಗೆ ಯಶ್ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದಿದ್ದಾರೆ. ಚಿತ್ರತಂಡದ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ. ಹಾಗಿದ್ದಮೇಲೆ ಇವರಿಗೇನು ಸಮಸ್ಯೆ?’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು, ‘ನಟಿಯರು ಒಪ್ಪಂದದ ಪ್ರಕಾರ ಒಪ್ಪಿಯೇ, ಸಂಭಾವನೆ ಪಡೆದು ಅವರ ಮಿತಿಗಳ ನಡುವೆಯೇ ನಟಿಸಿದ್ದಾರೆ. ಅದರ ಬಗ್ಗೆ ಪ್ರಶ್ನೆ ಮಾಡುವುದು ಏಕೆ?’ ಎಂದಿದ್ದಾರೆ.

ಇನ್ನು ಕೆಲವರು ನಟಿ ರಿಷಿಕಾ ಅವರು ಸಿನಿಮಾನಲ್ಲಿ ನಟಿಸುವಾಗ ಧರಿಸಿದ್ದ ಬಿಕಿನಿ ಸೀನ್​​ಗಳ ಸ್ಕ್ರೀನ್​​ ಶಾಟ್​​ಗಳನ್ನು ಹಂಚಿಕೊಂಡಿದ್ದಾರೆ. ಕೆಲ ಹಾಟ್ ಫೋಟೊಗಳನ್ನು ಹಂಚಿಕೊಂಡು, ‘ಇದು ಸಂಸ್ಕಾರವೇ?’ ಎಂದು ಪ್ರಶ್ನಿಸಿದ್ದಾರೆ. ಯಶ್ ಅವರನ್ನು ಪ್ರಶ್ನಿಸಿದ್ದಕ್ಕೆ, ಕರ್ನಾಟಕದಿಂದ ಜಾಗ ಖಾಲಿ ಮಾಡಿಸುತ್ತೇವೆ ಎಂದಿದ್ದಕ್ಕೆ ಕೆಲ ಯಶ್ ಅಭಿಮಾನಿಗಳು ಆಕ್ರೋಶದ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.

ರಿಷಿಕಾ ಸಿಂಗ್ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ದುನಿಯಾ ವಿಜಿ ಜೊತೆಗೆ 2011 ರಲ್ಲಿ ಬಂದ ‘ಕಂಠೀರವ’, ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’, ‘ತುಂಟರು’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಮೊದಲ ಬಿಗ್​​ಬಾಸ್​​ನಲ್ಲಿ ಅವರು ಸ್ಪರ್ಧಿ ಸಹ ಆಗಿದ್ದರು. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ನಟ ಆದಿತ್ಯ ಅವರ ಸಹೋದರಿ ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:05 am, Wed, 12 August 26

Loading...
Unable to load recommendations.
Follow Us