AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿತ್ತು ರಚನಾ ವ್ಯಕ್ತಿತ್ವ? ಹೃದಯಾಘಾತದಿಂದ ನಿಧನರಾದ ಆರ್​ಜೆ ಬಗ್ಗೆ ಸೆಲೆಬ್ರಿಟಿಗಳ ಭಾವುಕ ಮಾತು

ಆರ್​ಜೆ ರಚನಾ ಜೊತೆಗಿನ ಫೋಟೋ, ವಿಡಿಯೋವನ್ನು ನಟಿ ಹರ್ಷಿಕಾ ಪೂಣಚ್ಚ, ನಿರ್ದೇಶಕ ಮಯೂರ ರಾಘವೇಂದ್ರ ಮುಂತಾದವರು ಪೋಸ್ಟ್​ ಮಾಡಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಹೇಗಿತ್ತು ರಚನಾ ವ್ಯಕ್ತಿತ್ವ? ಹೃದಯಾಘಾತದಿಂದ ನಿಧನರಾದ ಆರ್​ಜೆ ಬಗ್ಗೆ ಸೆಲೆಬ್ರಿಟಿಗಳ ಭಾವುಕ ಮಾತು
ಆರ್​ಜೆ ರಚನಾ, ಮಯೂರ ರಾಘವೇಂದ್ರ, ಹರ್ಷಿಕಾ ಪೂಣಚ್ಚ
TV9 Web
| Updated By: ಮದನ್​ ಕುಮಾರ್​|

Updated on:Feb 23, 2022 | 10:05 AM

Share

ಹೃದಯಾಘಾತಕ್ಕೆ ಯುವ ಜನರು ಬಲಿಯಾಗುತ್ತಿರುವ ಸುದ್ದಿ ನಿಜಕ್ಕೂ ಶಾಕಿಂಗ್ ಎನಿಸುವಂಥದ್ದು. ಮಂಗಳವಾರ (ಫೆ.22) ಖ್ಯಾತ ರೇಡಿಯೋ ಜಾಕಿ, ನಟಿ ಆರ್​ಜೆ ರಚನಾ ಅವರು ಹೃದಯಾಘಾತದಿಂದ (RJ Rachana Heart Attack) ನಿಧನರಾದರು. ಕೋಟ್ಯಂತರ ಜನರು ರಚನಾ ಧ್ವನಿಯನ್ನು ಇಷ್ಟಪಟ್ಟಿದ್ದರು. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕವೂ ರಚನಾ ಫೇಮಸ್​ ಆಗಿದ್ದರು. ಅನೇಕ ಸೆಲೆಬ್ರಿಟಿಗಳ ಜೊತೆಗೆ ಅವರಿಗೆ ಒಡನಾಟ ಇತ್ತು. ಅವರೆಲ್ಲರೂ ಈಗ ರಚನಾ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ಆರ್​.ಜೆ. ರಚನಾ (RJ Rachana) ವ್ಯಕ್ತಿತ್ವ ಹೇಗಿತ್ತು ಎಂಬುದನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್​ವುಡ್​ ನಿರ್ದೇಶಕ ಮಯೂರ ರಾಘವೇಂದ್ರ, ನಟಿ ಹರ್ಷಿಕಾ ಪೂಣಚ್ಚ (Harshika Poonacha), ಆರ್​.ಜೆ. ರಾಜೇಶ್​ ಸೇರಿದಂತೆ ಅನೇಕರು ರಚನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ರೇಡಿಯೋ ಜಾಕಿ ಆಗಿ ಕೆಲಸ ಮಾಡಿದ್ದ ರಚನಾ ಅವರು ಹಲವು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದರು. ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದವರ ಜೊತೆ ಸ್ನೇಹ ಹೊಂದಿದ್ದರು.

ರಚನಾ ಜೊತೆಗಿನ ಫೋಟೋವನ್ನು ಆರ್​ಜೆ, ಸಿನಿಮಾ ನಿರ್ದೇಶಕ ಮಯೂರ ರಾಘವೇಂದ್ರ ಅವರು ಪೋಸ್ಟ್​ ಮಾಡಿಕೊಂಡಿದ್ದಾರೆ. ‘5 ವರ್ಷಗಳ ಹಿಂದೆ ನಮ್ಮಿಬ್ಬರ ಮಾತುಕತೆ ಆಗಿತ್ತು. ರೇಡಿಯೋ ಕೆಲಸದಿಂದ ನಾನು ಹೊರಬಂದಾಗ ‘ನಮ್ಮ ಕ್ಲಬ್​ಗೆ ಸ್ವಾಗತ. ಶೀಘ್ರದಲ್ಲೇ ಭೇಟಿ ಆಗೋಣ’ ಅಂತ ಮಾತಾಡಿದ್ವಿ. ಇಂದು ಅವರ ಮನೆಯಿಂದ ಹೊರಬರುತ್ತಿರುವಾಗ ಎಲ್ಲ ನೆನಪುಗಳ ಬಗ್ಗೆ ಯೋಚಿಸುತ್ತ ನಾನು ಶಾಕ್​ನಲ್ಲಿದ್ದೇನೆ. ನಾನು ಅವರ ಕಾರ್ಯಕ್ರಮಗಳ ಕೇಳುಗನಾಗಿದ್ದೆ. ನಂತರ ನಾನೂ ಕೂಡ ರೇಡಿಯೋ ಸೇರಿಕೊಂಡೆ. ಕಾರ್ಯಕ್ರಮಗಳ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಡುವೆ ಆರೋಗ್ಯಕರವಾದ ಸ್ಪರ್ಧೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಉತ್ತಮ ಸ್ನೇಹಿತರಾಗಿದ್ದೆವು. ನಮ್ಮ ಕಾಲದಲ್ಲಿ ಅವರು ಉದಯೋನ್ಮುಖ ಆರ್​ಜೆ ಆಗಿದ್ದರು. ಪತ್ರಿಕೆ ಜಾಹೀರಾತು, ಹೋರ್ಡಿಂಗ್ಸ್​, ಸಿನಿಮಾ, ರೇಡಿಯೋ ಹೀಗೆ ಎಲ್ಲ ಕಡೆಗಳಲ್ಲೂ ಅವರೇ ಇರುತ್ತಿದ್ದರು. ಅದು ಅವರ ಎನರ್ಜಿ ಮತ್ತು ಚಾರ್ಮ್​ ಆಗಿತ್ತು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ. ರಚನಾ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮಯೂರ ರಾಘವೇಂದ್ರ ಬರೆದುಕೊಂಡಿದ್ದಾರೆ.

‘ರೇ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರು ರಚನಾ ಅವರನ್ನು ಭೇಟಿ ಆಗಿದ್ದರು. ಆ ನೆನಪುಗಳನ್ನು ಹರ್ಷಿಕಾ ಮೆಲುಕು ಹಾಕಿದ್ದಾರೆ. ‘ನೀವು ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕೋಟ್ಯಂತರ ಜನರನ್ನು ರೇಡಿಯೋ ಮೂಲಕ ರಂಜಿಸಿದ ನಿಮ್ಮ ಸುಮಧುರವಾದ ಧ್ವನಿ ಮತ್ತು ಸುಂದರ ನಗುವನ್ನು ಮಿಸ್​ ಮಾಡಿಕೊಳ್ಳುತ್ತೇನೆ. ‘ರೇ’ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ನಾನು ಮತ್ತು ರಮೇಶ್​ ಅರವಿಂದ್​ ಅವರು ಆರ್​ಜೆಗಳ ಜೊತೆಯಲ್ಲಿ ಕಳೆದ ಆ ಖುಷಿಯ ಕ್ಷಣ ನನಗೆ ಈಗಲೂ ನೆನಪಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಡಾರ್ಲಿಂಗ್​. ಓಂ ಶಾಂತಿ’ ಎಂದು ಹರ್ಷಿಕಾ ಪೋಸ್ಟ್​ ಮಾಡಿದ್ದಾರೆ. ಹಳೆಯ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಆರ್​ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದಾರೆ.

ಇದನ್ನೂ ಓದಿ:

RJ Rachana: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಆರ್​ಜೆ ರಚನಾ

ರಕ್ಷಿತ್​ ಸಿನಿಮಾದಲ್ಲಿ ನಟಿಸಿದ್ದ ಆರ್​ಜೆ ರಚನಾಗೆ ಹೃದಯಾಘಾತ; ಮನೆಯಲ್ಲಿದ್ದಾಗಲೇ ಕಾಣಿಸಿಕೊಂಡಿತ್ತು ಎದೆನೋವು

Published On - 9:58 am, Wed, 23 February 22

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!