Madhagaja Teaser: ಶ್ರೀ ಮುರಳಿ ಚಿತ್ರದಲ್ಲಿ ಜಗಪತಿ ಬಾಬು ಲುಕ್​ ಹೀಗಿದೆ.. ವಿಶೇಷ ವಿಡಿಯೋ​ ರಿಲೀಸ್ ಮಾಡಿದ ಚಿತ್ರತಂಡ

Roaring Star: ಬಹುಭಾಷೆಗಳಲ್ಲಿ ತೆರೆಕಾಣಲಿರುವ ಮದಗಜ ಚಿತ್ರದಲ್ಲಿ ಶ್ರೀ ಮುರಳಿ, ಆಶಿಕಾ ರಂಗನಾಥ್ ಮತ್ತು ಜಗಪತಿ ಬಾಬು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಪಾಲಿಗೆ ರಸದೌತಣವೇ ಆಗಲಿದೆ.

Madhagaja Teaser: ಶ್ರೀ ಮುರಳಿ ಚಿತ್ರದಲ್ಲಿ ಜಗಪತಿ ಬಾಬು ಲುಕ್​ ಹೀಗಿದೆ.. ವಿಶೇಷ ವಿಡಿಯೋ​ ರಿಲೀಸ್ ಮಾಡಿದ ಚಿತ್ರತಂಡ
ಜಗಪತಿ ಬಾಬು
Edited By:

Updated on: Feb 12, 2021 | 5:49 PM

ಉಗ್ರಂ ಸಿನಿಮಾ ಮೂಲಕ ಹೊಸ ಅಲೆಯನ್ನೇ ಎಬ್ಬಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಬಹುನಿರೀಕ್ಷಿತ ಚಿತ್ರ ‘ಮದಗಜ’ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ನಟ ಜಗಪತಿ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಬಿಡುಗಡೆಯಾದ ವಿಶೇಷ ವಿಡಿಯೋದಲ್ಲಿ ಜಗಪತಿ ಬಾಬು ಅವರ ಖಡಕ್​ ಲುಕ್​ ರಿವೀಲ್​ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಬಹುಭಾಷೆಗಳಲ್ಲಿ ತೆರೆಕಾಣಲಿರುವ ಈ ಚಿತ್ರದಲ್ಲಿ ಶ್ರೀ ಮುರಳಿ, ಆಶಿಕಾ ರಂಗನಾಥ್ ಮತ್ತು ಜಗಪತಿ ಬಾಬು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಪಾಲಿಗೆ ರಸದೌತಣವೇ ಆಗಲಿದೆ.

ಬಿಡುಗಡೆಯಾದ ಕೆಲಹೊತ್ತಿನಲ್ಲಿಯೇ ಯೂಟ್ಯೂಬ್​ನಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿರುವ ಈ ವಿಡಿಯೋ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಉಮಾಪತಿ ಬ್ಯಾನರ್ಸ್​ ಅಡಿಯಲ್ಲಿ ಮೂಡಿಬರುತ್ತಿರುವ ಮದಗಜ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದು, ಎಸ್.ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿರುವ ಕಾರಣ ಸಹಜವಾಗಿಯೇ ಚಿತ್ರದ ಕುರಿತು ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಮದಗಜ

ಮದಗಜ

ಮದಗಜ

ಮದಗಜ

Published On - 5:48 pm, Fri, 12 February 21