Roberrt Trailer: ಡಿ ಬಾಸ್​ ದರ್ಶನ್​ ಹುಟ್ಟುಹಬ್ಬಕ್ಕೆ ರಾಬರ್ಟ್​ ಕಡೆಯಿಂದ ಟ್ರೇಲರ್​ ಗಿಫ್ಟ್​!

|

Updated on: Feb 11, 2021 | 7:41 PM

Roberrt Trailer: ಸ್ಟಾರ್​ಗಳ ಜನ್ಮದಿನದಂದು ಅವರು ನಟಿಸುತ್ತಿರುವ ಸಿನಿಮಾದಿಂದ ವಿಶೇಷ ಉಡುಗೊರೆ ನೀಡೋದು ನಡೆದುಕೊಂಡ ಪದ್ದತಿ. ಈಗ ಈ ಸಂಪ್ರದಾಯವನ್ನು ರಾಬರ್ಟ್​ ಸಿನಿಮಾ ತಂಡ ಮುಂದುವರಿಸಿದೆ.

Roberrt Trailer: ಡಿ ಬಾಸ್​ ದರ್ಶನ್​ ಹುಟ್ಟುಹಬ್ಬಕ್ಕೆ ರಾಬರ್ಟ್​ ಕಡೆಯಿಂದ ಟ್ರೇಲರ್​ ಗಿಫ್ಟ್​!
ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾದ ಪೋಸ್ಟರ್​
Follow us on

ನಟ ದರ್ಶನ್ ಇದೇ 16ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ  ವಿಶೇಷ ದಿನಕ್ಕೆ ರಾಬರ್ಟ್​ ಕಡೆಯಿಂದ ಟ್ರೈಲರ್​ ಉಡುಗರೆಯಾಗಿ ಸಿಗುತ್ತಿದೆ.  ಇಂದು ಟ್ವೀಟ್​ ಮಾಡಿರುವ ಚಿತ್ರದ ನಿರ್ದೇಶಕ ತರುಣ್​ ಸುಧೀರ್​ ಈ ಘೋಷಣೆ ಮಾಡಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಶಿವರಾತ್ರಿ ಪ್ರಯುಕ್ತ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ.  ಈಗ ಟ್ರೈಲರ್​ ರಿಲೀಸ್​ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. 

ಸ್ಟಾರ್​ಗಳ ಜನ್ಮದಿನದಂದು ಅವರು ನಟಿಸುತ್ತಿರುವ ಸಿನಿಮಾದಿಂದ ವಿಶೇಷ ಉಡುಗೊರೆ ನೀಡೋದು ನಡೆದುಕೊಂಡ ಪದ್ದತಿ. ಈಗ ಈ ಸಂಪ್ರದಾಯವನ್ನು ರಾಬರ್ಟ್​ ಸಿನಿಮಾ ತಂಡ ಮುಂದುವರಿಸಿದೆ. ಫೆಬ್ರವರಿ 16 ಡಿ ಬಾಸ್​ ದರ್ಶನ್​ ಜನ್ಮದಿನ. ಅಂದು ಸಿನಿಮಾ ಟ್ರೈಲರ್​ ಅಭಿಮಾನಿಗಳಿಗೆ ಉಡುಗೊರೆಯಾಗಿ​ ಆಗಿ ಸಿಗುತ್ತಿದೆ.

ತೆಲುಗು ಖಳ ಜಗಪತಿ ಬಾಬು ರಾಬರ್ಟ್​ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್​ನಲ್ಲೂ ಸಿನಿಮಾ ರಿಲೀಸ್​ ಆಗುತ್ತಿರುವುದರಿಂದ ಚಿತ್ರದ ಮೈಲೇಜ್​ ಅನ್ನು ಜಗಪತಿ ಬಾಬು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಫೆಬ್ರವರಿ 12ರಂದು ಜಗಪತಿ ಬಾಬು ಜನ್ಮದಿನ. ಈ ಕಾರಣಕ್ಕೆ ಸಿನಿಮಾದ ಅವರ ಲುಕ್​ ರಿಲೀಸ್​ ಆಗುತ್ತಿದೆ.

ನಾಳೆ, ಸಿನಿಮಾದ ಲಿರಿಕಲ್​ ಸಾಂಗ್​ ಕೂಡ ರಿಲೀಸ್​ ಆಗ್ತಿರೋದು ವಿಶೇಷ. ಒಂದೇ ದಿನ ಮೂರು ವಿಶೇಷ ಅಪ್​ಡೇಟ್​ಗಳನ್ನು ಸಿನಿಮಾ ತಂಡ ನೀಡಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ.

ದರ್ಶನ್​ ನಟನೆಯ ರಾಬರ್ಟ್​ ಚಿತ್ರ ಕೊರೊನಾ ಹಿನ್ನೆಲೆಯಲ್ಲಿ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ದರ್ಶನ್​ ಹೀರೋ ಆಗಿ ಕಾಣಿಸಿಕೊಂಡರೆ, ಜಗಪತಿ ಬಾಬು ವಿಲನ್​. ಆಶಾ ಭಟ್​ ಚಿತ್ರದ ನಾಯಕಿ. ತರುಣ್​ ಸುಧೀರ್​ ನಿರ್ದೇಶನದಲ್ಲಿ 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಬರ್ಟ್. ಇದೇ ಪಾತ್ರದ ಹೆಸರನ್ನು ಇಟ್ಟುಕೊಂಡು ಸಿನಿಮಾ ಸಿದ್ಧವಾಗಿದೆ.

ಇದನ್ನು ಓದಿ: ದರ್ಶನ್​ ಅಭಿಮಾನಿಗಳು ತಲೆ ಮಾಂಸ, ಕುರಿ ಕೇಳುತ್ತಾರೆ ಎಂಬ ವಿವಾದ ತಣ್ಣಗಾಗಿಸಲು ಜಗ್ಗೇಶ್ ಟ್ವೀಟ್