ಯಶ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ‘ಕೆಜಿಎಫ್ 2’ ಅವರ ಬದಕುನ್ನು ಬದಲಾಯಿಸಿದೆ. ಅವರನ್ನು ಎಲ್ಲರೂ ಗುರುತಿಸುತ್ತಾರೆ. ಕನ್ನಡ ಮಾತ್ರವಲ್ಲದೆ ವಿದೇಶದಲ್ಲೂ ಅವರು ಹೆಸರು ಮಾಡಿದ್ದಾರೆ. ಯಶ್ ಅವರನ್ನು ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ಆದರೆ, ಯಶ್ ಅವರು ಒಂದು ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ. ಅವರು ಯಶ್ (Yash) ಜೀವನದಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಯಾರು ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಯಶ್ ಅವರ ಜೀವನದಲ್ಲಿ ಅವರ ತಂದೆ-ತಾಯಿ ಸಾಕಷ್ಟು ಪಾತ್ರವಹಿಸಿದ್ದಾರೆ. ಯಶ್ ತಂದೆ ಈ ಮೊದಲು ಬಸ್ ಡ್ರೈವರ್ ಆಗಿದ್ದರು. ಯಶ್ ಅವರು ತಂದೆಯನ್ನು ಸಾಕಷ್ಟು ಗೌರವಿಸುತ್ತಾರೆ. ಅವರು ತಂದೆಗೆ ಬಾಸ್ ಎಂದು ಈ ಮೊದಲು ಕರೆದಿದ್ದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.
‘ಮಗ ಹಾಳಾಗಬಾರದು ಅನ್ನೋದು ತಂದೆಯ ಆಸೆ. ಗೋಲಿ ಆಡಿ ಬೆಳೆದವರು ನಾವು. ಇದನ್ನು ಆಡಬಾರದು ಎಂಬುದು ನನ್ನ ತಂದೆಯ ಉದ್ದೇಶ ಆಗಿತ್ತು. ಹಾಗೆ ಆದ್ರೆ ಮಗಳ ಹಾಳಾಗ್ತಾನೆ ಎಂಬ ಭಯ ಅವರದ್ದಾಗಿತ್ತು. ನನ್ನ ತಂದೆಯನ್ನು ಫ್ರೆಂಡ್ಸ್ ಟೈಗರ್ ಎಂದೇ ಕರೆಯುತ್ತಾ ಇದ್ದರು. ಒಂದು ದಿನ ತಂದೆ ಡ್ಯೂಟಿಗೆ ಹೋಗಿದ್ದರು. ನಾನು ಗೋಲಿ ಆಡ್ತಾ ಇದ್ದೆ. ಸಾಕಷ್ಟು ಗೆಲ್ಲುತ್ತಾ ಇದ್ದೆ. ಆಗ ನನಗೆ ಏಟು ಬಿತ್ತು, ನೋಡಿದರೆ ಬಾಸ್ ನಿಂತಿದ್ದರು’ ಎಂದಿದ್ದರು ಯಶ್. ಈ ಮೂಲಕ ತಂದೆಗೆ ಅವರು ಬಾಸ್ ಎಂದು ಸಂಭೋದಿಸಿದ್ದರು.
ಯಶ್ ಅವರ ಕಾರ್ ನಂಬರ್ 8055. ಇದು ಇಂಗ್ಲಿಷ್ನಲ್ಲಿ BOSS ನಂಬರ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಶ್ ಅವರ ಕಾರ್ ನಂಬರ್ ಪ್ಲೇಟ್ ಗಮನ ಸೆಳೆದಿದೆ. ಅವರನ್ನು ಫ್ಯಾನ್ಸ್ ಕೂಡ ಯಶ್ ಬಾಸ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: ಸುದೀಪ್, ದರ್ಶನ್, ಯಶ್ ಫ್ಯಾನ್ಸ್ ಕೂಡ ನನಗಾಗಿ ಪ್ರಾರ್ಥನೆ ಮಾಡಿದ್ದರು: ಶಿವಣ್ಣ
ಯಶ್ ಅವರು ಸದ್ಯ ಟಾಕ್ಸಿಕ್ ಹಾಗೂ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳು ಬಿಗ್ ಬಜೆಟ್ ಚಿತ್ರವೇ ಆಗಿದೆ. ‘ಟಾಕ್ಸಿಕ್’ ಕನ್ನಡ ಸಿನಿಮಾ. ‘ರಾಮಾಯಣ’ ಹಿಂದಿ ಚಿತ್ರ. ಇದರಲ್ಲಿ ರಾವಣನ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಇದಕ್ಕೆ ಅವರು ನಿರ್ಮಾಪಕರು ಕೂಡ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Sat, 8 March 25