ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಚಿತ್ರರಂಗದಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಆಫರ್ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರುಕ್ಮಿಣಿ ವಸಂತ್ ಬೇರೆ ಬೇರೆ ಆಫರ್ಗಳನ್ನು ಪಡೆದುಕೊಂಡರು. ಈಗ ಅವರಿಗೆ ಟಾಲಿವುಡ್ನಿಂದಲೂ ಆಫರ್ ಬರುತ್ತಿದೆ. ಈ ಪೈಕಿ ಸ್ಟಾರ್ ಹೀರೋನ ಚಿತ್ರದಲ್ಲಿ ನಟಿಸೋಕೆ ರುಕ್ಮಿಣಿ ವಸಂತ್ ನೋ ಎಂದಿದ್ದಾರೆ ಎಂಬ ವರದಿ ಹರಿದಾಡಿದೆ.
ವಿಜಯ್ ದೇವರಕೊಂಡ ಅವರು ‘ಕಿಂಗ್ಡಮ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಗೌತಮ್ ತಿನ್ನನುರಿ ಅವರು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಅವರು ‘ರೌಡಿ ಜನಾರ್ಧನ್’ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಬೇಕಿದೆ. ರವಿ ಕಿರಣ್ ಕೋಲಾ ಅವರು ಈ ಚಿತ್ರ ನಿರ್ದೇಶನ ಮಾಡಬೇಕಿದೆ. ದಿಲ್ ರಾಜು ಅವರು ಈ ಚಿತ್ರಕ್ಕೆ ಹಣ ಹೂಡುತ್ತಾ ಇದ್ದಾರೆ. ರುಕ್ಮಿಣಿ ವಸಂತ್ ಅವರು ಈ ಚಿತ್ರದಲ್ಲಿ ನಟಿಸಬೇಕಿತ್ತು.
ರುಕ್ಮಿಣಿ ವಸಂತ್ ಅವರಿಗೆ ಈ ಸಿನಿಮಾದಲ್ಲಿ ನಟಿಸೋ ಆಸಕ್ತಿ ಇತ್ತು. ಆದರೆ, ಡೇಟ್ ಹೊಂದಿಸಲು ಸಾಧ್ಯವಾಗಿಲ್ಲ ಎಂದು ವರದಿ ಆಗಿದೆ. ರುಕ್ಮಿಣಿ ವಸಂತ್ ಅವರು ನಟ ಜೂನಿಯರ್ ಎನ್ಟಿಆರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ‘NTR31’ನಲ್ಲಿ ನಟಿಸಬೇಕಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರುಕ್ಮಿಣಿ ‘ರೌಡಿ ಜನಾರ್ಧನ್’ ಸಿನಿಮಾದಿಂದ ಹೊರ ಹೋಗಿದ್ದಾರಂತೆ.
ಇದನ್ನೂ ನೋಡಿ: ರುಕ್ಮಿಣಿ ವಸಂತ್ ವಿಡಿಯೋನ ಹೇಗೆಲ್ಲ ವೈರಲ್ ಮಾಡ್ತಿದ್ದಾರೆ ನೋಡಿ ಫ್ಯಾನ್ಸ್
ರುಕ್ಮಿಣಿ ವಸಂತ್ ಅವರು ‘ಬೀರ್ಬಲ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಇದಾದ ಬಳಿಕ ಅವರು ಒಂದು ಹಿಂದಿ ಸಿನಿಮಾ ಮಾಡಿದರು. 2023ರಲ್ಲಿ ರಿಲೀಸ್ ಆದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ರಿಯಾ ಪಾತ್ರ ಮಾಡಿ ಭೇಷ್ ಎನಿಸಿಕೊಂಡರು. ಸದ್ಯ ಅವರ ಬಳಿ ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾ ಇದೆ. ಕನ್ನಡದಲ್ಲಿ ಅವರಿಗೆ ಬೇಡಿಕೆ ಇದೆ. ಕನ್ನಡದಲ್ಲಿ ಸಿನಿಮಾಗಳನ್ನು ಒಪ್ಪಿ ಅವರು ನಟಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:05 am, Fri, 7 March 25