ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಎಲ್ಲರ ಅನುಮಾನ
ರೋಸ್ ಕೊಟ್ಟಿದ್ದಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖದಲ್ಲಿ ನಗು ಮೂಡಿದೆ. ಹೂ ಗುಚ್ಛದ ಫೋಟೋವನ್ನು ರಶ್ಮಿಕಾ ಅವರು ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಈ ರೋಸ್ ನೀಡಿರಬಹುದು ಎಂಬುದು ಬಹುತೇಕರ ಅನುಮಾನ. ಯಾಕೆಂದರೆ ಅವರಿಬ್ಬರ ಬಗ್ಗೆ ಮೊದಲಿನಿಂದಲೂ ಗಾಸಿಪ್ ಇದೆ.

ಪ್ರೇಮಿಗಳೆಲ್ಲ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದಾರೆ. ಅನೇಕರು ಪ್ರಪೋಸ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳಲ್ಲಿ ಕೂಡ ಕೆಲವರು ಪ್ರೀತಿಯಲ್ಲಿ ಬಿದ್ದಿದ್ದಾರೆ. ನೇರವಾಗಿ ಹೇಳದೇ ಇದ್ದರೂ ಸೂಚ್ಯವಾಗಿ ಕೆಲವು ನಟಿಯರು ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಸಮಂತಾ ರುತ್ ಪ್ರಭು ಅವರು ಪ್ರೀತಿಯಲ್ಲಿ ಬಿದ್ದಿರುವ ಸೂಚನೆ ನೀಡಿದ್ದಾರೆ. ಅದೇ ರೀತಿ ನಟಿ ರಶ್ಮಿಕಾ ಮಂದಣ್ಣ ಅವರು ಕೂಡ ಪ್ರೀತಿ ಚಿಗುರಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಬಾಯ್ಫ್ರೆಂಡ್ ನೀಡಿರುವ ಗುಲಾಬಿ ಹೂವಿನ ಗುಚ್ಛದ ಫೋಟೋವನ್ನು ರಶ್ಮಿಕಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
‘ನನ್ನ ಮುಖದ ಮೇಲೆ ನಗು ಮೂಡಿಸುವುದು ಹೇಗೆ ಎಂಬುದು ನಿನಗೆ ಯಾವಾಗಲೂ ಗೊತ್ತು’ ಎಂದು ರಶ್ಮಿಕಾ ಮಂದಣ್ಣ ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಆದರೆ ಈ ಗುಲಾಬಿ ಹೂವಿನ ಗುಚ್ಛ ನೀಡಿದ ವ್ಯಕ್ತಿ ಯಾರು ಎಂಬುದನ್ನು ಮಾತ್ರ ಅವರು ಬಹಿರಂಗಪಡಿಸಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಫೋಟೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ ಎಂಬುದು ಗೊತ್ತಿರುವ ವಿಷಯ. ಈ ಮೊದಲು ಅವರು ಒಟ್ಟಿಗೆ ಮಾಲ್ಡೀವ್ಸ್ಗೆ ತೆರಳಿದ್ದರು. ಆದರೂ ಕೂಡ ಅವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ನೇರವಾಗಿ ಏನನ್ನೂ ಹೇಳಿಕೊಂಡಿಲ್ಲ. ಆದರೆ ನೆಟ್ಟಿಗರಿಗೆ ಗುಮಾನಿ ಜೋರಾಗಿದೆ. ಈಗ ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವನ್ನು ನೀಡಿರುವುದು ವಿಜಯ್ ದೇವರಕೊಂಡ ಅಲ್ಲದೇ ಬೇರೆ ಯಾರೂ ಅಲ್ಲ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ಛಾವ’ ಸಿನಿಮಾ ಅಬ್ಬರ; 3 ದಿನಕ್ಕೆ 121 ಕೋಟಿ ರೂ. ಕಲೆಕ್ಷನ್
ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಇರುವ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ‘ಅನಿಮಲ್’, ‘ಪುಷ್ಪ 2’ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿವೆ. ಈಗ ‘ಛಾವ’ ಸಿನಿಮಾ ಸಹ ಸೂಪರ್ ಹಿಟ್ ಆಗಿದೆ. ಸಲ್ಮಾನ್ ಖಾನ್ ಖಾತೆ ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಹೊಸ ಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.