‘ಪಾರ್ಟಿ ಅನ್ನೋದು ವೈಯಕ್ತಿಕ’; ಕಿಚ್ಚ ಸುದೀಪ್ ಅವರ ಆಲೋಚೆನೆಯೇ ಬೇರೆ
Kichcha Sudeep: ನಟ ಕಿಚ್ಚ ಸುದೀಪ್ ಇತರೆ ನಟರಂತೆ ಅಲ್ಲ. ಪಾರ್ಟಿಗಳು ಇನ್ನಿತರೆಗಳಿಂದ ದೂರ. ಏನೇ ಪಾರ್ಟಿ ಮಾಡುವುದಿದ್ದರೂ ಕೆಲವೇ ಜನರ ಜೊತೆಗೆ ತಮ್ಮ ಮನೆಯ ತಾರಸಿ ಮೇಲೆಯೇ ಮಾಡುತ್ತಾರೆ. ಹೀಗೆ ಹೆಚ್ಚು ಜನರ ಜೊತೆಗೆ ಪಾರ್ಟಿ ಮಾಡದೇ ಇರುವುದಕ್ಕೆ ಕಾರಣವೂ ಇದೆ. ಈ ಬಗ್ಗೆ ಸುದೀಪ್ ವಿವರಣೆ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರು ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಅವರು ಹಲವು ಗೆಳೆಯರ ಜೊತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ರೇಲರ್ ಲಾಂಚ್ ಕಾರ್ಯಕ್ರಮ, ಟೀಸರ್ ಲಾಂಚ್, ಸಿನಿಮಾ ಸ್ಪೆಷಲ್ ಶೋಗಳಿಗೆ ಸುದೀಪ್ ತೆರಳುತ್ತಾರೆ. ಆದರೆ, ಅವರು ಎಂದಿಗೂ ಪಬ್ಲಿಕ್ನಲ್ಲಿ ಅಥವಾ ದೊಡ್ಡ ಕಾರ್ಯಕ್ರಮದಲ್ಲಿ ಪಾರ್ಟಿ ಮಾಡೋದು ಕಾಣೋದಿಲ್ಲ. ಇದು ಅವರು ಹಾಕಿಕೊಂಡು ಬಂದ ಸೂತ್ರ. ಇದಕ್ಕೆ ಕಾರಣವೂ ಇದೆ.
ಕಿಚ್ಚ ಸುದೀಪ್ ಅವರಿಗೆ ಪಾರ್ಟಿ ಅನ್ನೋದು ದೊಡ್ಡ ಗುಂಪಿನ ಮಧ್ಯೆ ನಡೆಯೋದಲ್ಲ. ಕೆಲವೇ ಕೆಲವು ಆಪ್ತರ ಜೊತೆ ನಡೆಯೋದು ಅವರಿಗೆ ಪಾರ್ಟಿ. ಇದನ್ನು ಅನೇಕ ಬಾರಿ ಹೇಳಿದ್ದಾರೆ. ಸುದೀಪ್ ಉಳಿದುಕೊಳ್ಳೋದು ಕೂಡ ಅವರ ಮನೆಯಲ್ಲಿ ಮಾತ್ರ. ಇದು ಅವರ ಗೆಳೆಯರಿಗೂ ಗೊತ್ತಿದೆಯಂತೆ. ಪಾರ್ಟಿ ಎಂದರೇನು ಎಂಬ ವ್ಯಾಖ್ಯಾನವನ್ನು ಅವರು ಈ ಮೊದಲು ಮಾಡಿದ್ದರು.
‘ಪಾರ್ಟಿ ಎಂದರೇನು? 150 ಜನರ ಮ್ಯೂಸಿಕ್ ಹಾಕಿಕೊಂಡು ಕುಣಿಯೋದಾ ಅಥವಾ ಇರೋ 4 ಗೆಳೆಯರ ಜೊತೆ ಹಾಕಿಕೊಂಡು ಪಾರ್ಟಿ ಮಾಡೋದು ಪಾರ್ಟಿನಾ? ಇದು ಅವರವವರ ಚಾಯ್ಸ್. ಹಾಡನ್ನು ಇಯರ್ ಪಾಡ್ನಲ್ಲಿ ಕೇಳಬಹುದು ಅಥವಾ ದೊಡ್ಡ ಮ್ಯೂಸಿಕ್ ಹಾಕಿ ಕೂಡ ಕೇಳಬಹುದು. ಇದು ನಿಮಗೆ ಬಿಟ್ಟ ವಿಚಾರ. ನಾನು ಇಯರ್ಪಾಡ್ನಲ್ಲಿ ಕೇಳುವ ವ್ಯಕ್ತಿ. ಪಾರ್ಟಿ ಹಾಗೂ ಮ್ಯೂಸಿಕ್ ಅನ್ನೋದು ವೈಯಕ್ತಿಕ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ:ಮನೆ ಅಡ ಇಟ್ಟು ‘ಮೈ ಆಟೋಗ್ರಾಫ್’ ನಿರ್ಮಾಣ ಮಾಡಿದ್ದ ಸುದೀಪ್
ಸುದೀಪ್ ಅವರು ತಮ್ಮ ಜೆಪಿ ನಗರದ ಮನೆಯಲ್ಲಿ ಟೆರೇಸ್ ಮೇಲೆ ಕಿಚನ್ ಮಾಡಿಕೊಂಡಿದ್ದಾರೆ. ಅಲ್ಲಿ ಕುಳಿತು ಅವರು ಪಾರ್ಟಿ ಮಾಡುತ್ತಾರೆ. ತಮ್ಮಿಷ್ಟದ ವ್ಯಕ್ತಿಯನ್ನು ಕರೆದು ಅವರು ಇಲ್ಲಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ, ಅವರು ಯಾರ ಜೊತೆಗೂ ಹೋಗಿ ಕುಳಿತು ಪಾರ್ಟಿ ಮಾಡಿಲ್ಲ. ಈ ನಿಯಮವನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
View this post on Instagram
ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರ ಯಶಸ್ಸು ಕಂಡಿದೆ. ಈ ಸಿನಿಮಾ ಗಳಿಕೆಯಿಂದ ತಂಡ ಖುಷಿಯಾಗಿದೆ. ಸುದೀಪ್ ಅವರು ‘ಬಿಲ್ಲ ರಂಗ ಭಾಷ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ ಎನ್ನುವ ಮಾಹಿತಿ ಸದ್ಯಕ್ಕೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Thu, 20 February 25