
ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಸಿನಿಮಾದ ಕೆಲಸ ಕೊನೆಯ ಹಂತದಲ್ಲಿ ಇದ್ದು, ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ. ವಿವೇಕ್ ನಿರ್ದೇಶನದ ಈ ಚಿತ್ರಕ್ಕೆ, ಪ್ರಿಯಾ ಹಾಗೂ ಕೆಆರ್ಜಿ ಸ್ಟುಡಿಯೋ ಬಂಡವಾಳ ಹೂಡಿದೆ. ಈ ಚಿತ್ರದ ‘ಅರಗಿಣಿಯೇ..’ ಹಾಡು ಬಿಡುಗಡೆ ಆಗಿದೆ. ಈ ಸಾಂಗ್ನ ಸುದೀಪ್ ಮಗಳು ಸಾನ್ವಿ (Sanvi Sudeep) ಹಾಡಿದ್ದಾರೆ ಅನ್ನೋದು ವಿಶೇಷ.
ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಮಕ್ಕಳು ನಟ/ನಟಿಯಾಗಿ ಚಿತ್ರರಂಗದಲ್ಲಿ ಮಿಂಚಲು ಬಯಸುತ್ತಾರೆ. ಆದರೆ, ಸಾನ್ವಿ ಆ ರೀತಿ ಅಲ್ಲ. ಅವರು ಗಾಯಕಿಯಾಗಿ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡನ್ನು ಇವರು ಹಾಡಿದ್ದರು. ಈ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಈಗ ‘ಅರಗಿಣಿಯೇ..’ ಹಾಡನ್ನು ಹಾಡಿದ್ದಾರೆ.
‘ಅರಗಿಣಿಯೇ..’ ಹಾಡು ಸಖತ್ ಮೆಲೋಡಿಯಾಗಿದೆ. ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಕಿವಿಗೆ ಇಂಪು ನೀಡಿದೆ. ಈ ಹಾಡಿನಲ್ಲಿ ಸಾನ್ವಿ ಸುದೀಪ್ ಜೊತೆ ಕಪಿಲ್ ಕಪಿಲನ್ ಕೂಡ ಹಾಡಿದ್ದಾರೆ. ಧನಂಜಯ ರಂಜನ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಇದನ್ನೂ ಓದಿ: ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಮಗಳು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದಕ್ಕೆ ಬೆಂಬಲ ನೀಡೋದಾಗಿ ಸುದೀಪ್ ಹೇಳಿದ್ದರು. ಸಾನ್ವಿ ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿಸಿದಂತೆ ಇದೆ. ಇದಕ್ಕೆ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ‘ಮಸ್ತ್ ಮಲೈಕಾ’ ಹಾಡಿಗೆ ಸಾನ್ವಿ ಹೆಸರನ್ನು ಸುದೀಪ್ ಅವರೇ ಸೂಚಿಸಿದರೇ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ಸುದೀಪ್, ಈ ಅವಕಾಶ ಸಾನ್ವಿ ಟ್ಯಾಲೆಂಟ್ನಿಂದ ಬಂದಿದೆ ಎಂದಿದ್ದರು.
ಸಾನ್ವಿ ಧ್ವನಿ ಕೇಳಿದ್ದ ಅಜನೀಶ್ ಲೋಕನಾಥ್ ‘ಮಸ್ತ್ ಮಲೈಕಾ’ ಹಾಡಿಗೆ ಅವಕಾಶ ನೀಡಿದರಂತೆ. ಅವರ ಧ್ವನಿ ತುಂಬಾನೇ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಅವರನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಈ ಹಾಡು ಟ್ರೆಂಡ್ನಲ್ಲಿದೆ. ಈಗ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವರ ಧ್ವನಿಯಿಂದ ಇನ್ನಷ್ಟು ಹಾಡು ಮೂಡಿ ಬರಲಿ ಎಂಬುದು ಫ್ಯಾನ್ಸ್ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.