ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?

ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಅವರು ಸರಿಗಮಪ ಕಾರ್ಯಕ್ರಮದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗಿದ್ದಾರೆ. ಸುದೀಪ್ ಅವರು ಕನ್ನಡ ಭಾಷೆಗೆ ಬಹಳ ಮಹತ್ವ ನೀಡುತ್ತಾರೆ. ಈಗ ಅವರ ಮಗಳ ಇಂಗ್ಲಿಷ್ ಮಾತು ಅನೇಕರನ್ನು ಬೇಸರಗೊಳಿಸಿದೆ. ಕೆಲವರು ಸಾನ್ವಿಯನ್ನು ಸಮರ್ಥಿಸಿಕೊಂಡಿದ್ದಾರೆ, ಇನ್ನೂ ಕೆಲವರು ಈ ವಿಚಾರ ಚರ್ಚೆ ಮಾಡಿದ್ದಾರೆ.

ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಸಾನ್ವಿ
Follow us
ರಾಜೇಶ್ ದುಗ್ಗುಮನೆ
|

Updated on:Jan 06, 2025 | 11:54 AM

ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ, ಏಕಾಏಕಿ ಸುದೀಪ್ ಮಗಳ ಮೇಲೆ ನೆಟ್ಟಿಗರು ಕೋಪಗೊಂಡಿದ್ದು ಏಕೆ? ಅವರು ಮಾಡಿದ ತಪ್ಪೇನು? ಆ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿ ಉತ್ತರ ಸಿಗಲಿದೆ. ಸುದೀಪ್ ಅವರು ಈ ವಿಚಾರವಾಗಿ ಏನಾದರೂ ಸ್ಪಷ್ಟನೆ ನೀಡುತ್ತಾರಾ ಎನ್ನುವ ಕುತೂಹಲವೂ ಇದೆ.

ಘಟನೆ ಏನು?

ಇತ್ತೀಚೆಗೆ ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಆಗಮಿಸಿದ್ದರು. ಈ ವೇಳೆ ಸಾನ್ವಿ ಅವರು ತಂದೆಗಾಗಿ, ‘ಜಸ್ಟ್ ಮಾತ್ ಮಾತಲ್ಲಿ..’ ಹಾಡನ್ನು ಸುಮಧುರವಾಗಿ ಹಾಡಿದರು. ಈ ಹಾಡಿನ ಬಳಿಕ ಅವರು ಸಂಪೂರ್ಣವಾಗಿ ಮಾತನಾಡಿದ್ದು ಇಂಗ್ಲಿಷ್​​ನಲ್ಲಿ. ‘ಪ್ರತಿವರ್ಷ’ ಎಂಬ ಶಬ್ದ ಬಿಟ್ಟು ಅವರು ಮತ್ತೆಲ್ಲಿಯೂ ಕನ್ನಡ ಶಬ್ದ ಮಾತನಾಡಿಲ್ಲ. ಇದು ಟ್ರೋಲ್​ಗೆ ಕಾರಣವಾದ ವಿಚಾರ.

ಸುದೀಪ್ ಕನ್ನಡ ಪ್ರೀತಿ

ಕಿಚ್ಚ ಸುದೀಪ್ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಬಿಗ್ ಬಾಸ್​ನಲ್ಲಿ ಕನ್ನಡಕ್ಕೆ ಗೌರವ ನೀಡದ ಸಂದರ್ಭದಲ್ಲಿ ಅವರು ಇದನ್ನು ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಸ್ಪರ್ಧಿಗಳು ಇಂಗ್ಲಿಷ್ ಮಾತನಾಡಿದಾಗ ಅದನ್ನು ಪ್ರಶ್ನೆ ಮಾಡಬೇಕು ಮತ್ತು ಕನ್ನಡ ಬಳಕೆ ಹೆಚ್ಚುವಂತೆ ಆಗಬೇಕು ಎಂದು ಸುದೀಪ್ ಅವರು ಬಿಗ್ ಬಾಸ್ ಆಯೋಜಕರ ಬಳಿ ಒತ್ತಾಯಿಸಿದ್ದರು ಎನ್ನಲಾಗಿದೆ. ಪರಭಾಷಾ ಸಂದರ್ಶನಗಳಲ್ಲಿ ಯಾರಾದರೂ ‘ಕನ್ನಡ್’ ಎಂದರೆ ‘ಅದು ಕನ್ನಡ್ ಅಲ್ಲ ಕನ್ನಡ’ ಎಂದು ತಿದ್ದುವ ಕೆಲಸ ಮಾಡಿದ್ದಾರೆ. ಆದರೆ, ಕನ್ನಡ ರಿಯಾಲಿಟಿ ಶೋನಲ್ಲಿ ಮಗಳಿಗೇಕೆ ಅವರು ಕನ್ನಡ ಮಾತನಾಡುವಂತೆ ಒತ್ತಾಯಿಸಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾ ಇದ್ದಾರೆ.

ಇದನ್ನೂ ಓದಿ: ಸಮಾಜ ಸೇವೆಗೆ ಮತ್ತೊಂದು ಕೊಡುಗೆ; ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಆರಂಭ  

ಸಮರ್ಥನೆ

ಇನ್ನೂ ಕೆಲವು ಸಾನ್ವಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಸುದೀಪ್ ಮಗಳು ಸಾನ್ವಿ ಇಂಗ್ಲಿಷ್​ನಲ್ಲೇ ಮಾತನಡಿರಬಹುದು, ಆದರೆ, ಅವರು ಹಾಡಿದ್ದು ಕನ್ನಡದ ಹಾಡನ್ನೇ. ಈ ಕಾರಣಕ್ಕೆ ಸಂತೋಷ ವ್ಯಕ್ತಪಡಿಸಬೇಕು ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Mon, 6 January 25

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ