ಗಿಲ್ಲಿಯ ಆ ಒಂದು ಡೈಲಾಗ್​​ನಿಂದ ಸಹನಾ ಶೆಟ್ಟಿಗೆ ಸಿಕ್ತು ಮತ್ತಷ್ಟು ಜನಪ್ರಿಯತೆ; ಧನ್ಯವಾದ ಹೇಳಿದ ಮೋನಿಕಾ

ಬಿಗ್ ಬಾಸ್ ಕನ್ನಡ 12ರಲ್ಲಿ 'ಗೌರಿ ಕಲ್ಯಾಣ' ಧಾರಾವಾಹಿಯ ಮೋನಿಕಾ ಪಾತ್ರಧಾರಿ ಸಹನಾ ಶೆಟ್ಟಿ ಹಾಗೂ ಗಿಲ್ಲಿಯವರ ಸಂಭಾಷಣೆ ಭಾರಿ ವೈರಲ್ ಆಗಿದೆ. ಇದರಿಂದ ಸಹನಾ ಶೆಟ್ಟಿ ಜನಪ್ರಿಯತೆ ಹೆಚ್ಚಿದ್ದು, ಗಿಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಈ ಫನ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಗಿಲ್ಲಿಯ ಆ ಒಂದು ಡೈಲಾಗ್​​ನಿಂದ ಸಹನಾ ಶೆಟ್ಟಿಗೆ ಸಿಕ್ತು ಮತ್ತಷ್ಟು ಜನಪ್ರಿಯತೆ; ಧನ್ಯವಾದ ಹೇಳಿದ ಮೋನಿಕಾ
ಮೋನಿಕಾ-ಗಿಲ್ಲಿ

Updated on: Dec 30, 2025 | 8:45 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಭಾನುವಾರದ ಎಪಿಸೋಡ್ ಭರ್ಜರಿ ಗಮನ ಸೆಳೆಯಿತು. ಕಲರ್ಸ್ ಕನ್ನಡದಲ್ಲಿ ‘ಗೌರಿ ಕಲ್ಯಾಣ’ ಧಾರಾವಾಹಿ ಶೀಘ್ರವೇ ಪ್ರಸಾರ ಕಾಣಲಿದೆ. ಈ ಧಾರಾವಾಹಿ ತಂಡ ಬಿಗ್ ಬಾಸ್ ಮನೆಗೆ ಪ್ರವೇಶಿಸಿತ್ತು. ಈ ಧಾರಾವಾಹಿಯಲ್ಲಿ ಮೋನಿಕಾ ಪಾತ್ರದಲ್ಲಿ ಸಹನಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಹಾಗೂ ಗಿಲ್ಲಿ ಮಧ್ಯೆ ನಡೆದ ಸಂಭಾಷಣೆಗಳು ಸಾಕಷ್ಟು ವೈರಲ್ ಆಗುತ್ತಿವೆ. ಸಹನಾ ಶೆಟ್ಟಿ ಜನಪ್ರಿಯತೆ ಕೂಡ ಹೆಚ್ಚುತ್ತಿದೆ. ಅವರು ಗಿಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸಹನಾ ಶೆಟ್ಟಿ ಅವರು ‘ಗೌರಿ ಕಲ್ಯಾಣ’ ಧಾರಾವಾಹಿಯಲ್ಲಿ ಮೋನಿಕಾ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಮೋನಿಕಾನ ಇಂಪ್ರೆಸ್ ಮಾಡಬೇಕು ಎಂಬ ಟಾಸ್ಕ್​ ಗಿಲ್ಲಿಗೆ ನೀಡಲಾಯಿತು. ಈ ವೇಳೆ ಗಿಲ್ಲಿ ಅವರು ಬಂದು, ‘ನನ್ನ ಬಳಿ ಫ್ಲ್ಯಾಟ್ ಇದೆ, ಜಾಗ ಇದೆ’ ಎಂದೆಲ್ಲ ಹೇಳಿದರು. ಕೊನೆಗೆ ಇದ್ಯಾವುದೂ ತಮ್ಮ ಹೆಸರಲ್ಲಿ ಇಲ್ಲ ಎಂದು ಉಲ್ಲೇಖಿಸಿದರು. ಆ ಬಳಿಕ ಮೋನಿಕಾಗೋಸ್ಕರ ಒಂದು ಕವನ ಬರೆದರು ಗಿಲ್ಲಿ.

‘ಮೋನಿಕಾ, ಬೇಡ ನಿನನಗೆ ಆತಂಕ, ಜೊತೆಗೆ ಇರ್ತೀನಿ ಕೊನೆ ತನಕ’ ಎಂದರು ಗಿಲ್ಲಿ. ಇದಕ್ಕೆ ಅವರ ತಾಯಿ ಪಾತ್ರಧಾರಿ, ‘ನಾನು ಇಂಪ್ರೆಸ್ ಆಗಿಲ್ಲ’ ಎಂದರು. ಆಗ ಮೋನಿಕಾ ಪಾತ್ರಧಾರಿ ಸಹನಾ ಶೆಟ್ಟಿ, ‘ನಾನು ಇಂಪ್ರೆಸ್ ಆದೆ ಅಮ್ಮ’ ಎಂದಿದ್ದಾರೆ. ಈ ವಿಡಿಯೋ ಸಖತ್ ಕ್ಯೂಟ್ ಆಗಿದೆ. ಟ್ರೋಲ್​ ಪೇಜ್​​ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಮೋನಿಕಾ ಕ್ಯೂಟ್​​ನೆಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇದೆ. ಇದರಿಂದ ಸಹನಾ ಶೆಟ್ಟಿ ಅವರ ಹಿಂಬಾಲಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಾವಿರಾರು ಸಂಖ್ಯೆಯ ಹಿಂಬಾಲಕರು ಅವರ ಖಾತೆಯನ್ನು ಫಾಲೋ ಮಾಡೋಕೆ ಆರಂಭಿಸಿದ್ದಾರೆ. ‘ಗಿಲ್ಲಿ ಬಾಯ್ಸ್, ನಿಮಗೆ ಧನ್ಯವಾದ’ ಎಂದು ಸಹನಾ ಶೆಟ್ಟಿ ಹೊಸ ಪೋಸ್ಟ್​​ನಲ್ಲಿ ಹೇಳಿದ್ದಾರೆ. ಕಮೆಂಟ್ ಬಾಕ್ಸ್​ ಅಲ್ಲಿ ‘ಗಿಲ್ಲಿ ಗಿಲ್ಲಿ’ ಎಂಬ ಕಮೆಂಟ್​​ಗಳು ತುಂಬಿ ಹೋಗಿವೆ.

ಇದನ್ನೂ ಓದಿ: ಎಲಿಮಿನೇಷನ್​ನಿಂದ ಉ.ಕರ್ನಾಟಕ ಅಳ್ತಿದೆ ಎಂದ ಮಾಳುಗೆ ಅವರದ್ದೇ ಭಾಷೆಯಲ್ಲಿ ಬಂತು ಖಡಕ್ ಉತ್ತರ

ಸದ್ಯ ‘ಗೌರಿ ಕಲ್ಯಾಣ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಈ ಧಾರಾವಾಹಿ ಪ್ರಸಾರ ಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.