Sai Pallavi: ‘ಯಶ್ 19’ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ? ಕಥೆ ನಡೆಯೋದು ಎಲ್ಲಿ?

|

Updated on: Dec 05, 2023 | 8:25 AM

ಯಶ್ ಅವರು ತಮ್ಮ ಪ್ರೋಫೈಲ್ ಫೋಟೋನ ‘ಲೋಡಿಂಗ್​’ ಎಂದು ಬದಲಿಸಿದ್ದರು. ಡಿಸೆಂಬರ್ 8ರ ಬೆಳಿಗ್ಗೆ 9:55ಕ್ಕೆ ಟೈಟಲ್ ರಿವೀಲ್ ಆಗಲಿದೆ. ಈಗ ನಾಯಕಿ ಬಗ್ಗೆ ಚರ್ಚೆ ಶುರುವಾಗಿದೆ.

Sai Pallavi: ‘ಯಶ್ 19’ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ? ಕಥೆ ನಡೆಯೋದು ಎಲ್ಲಿ?
ಸಾಯಿ ಪಲ್ಲವಿ
Follow us on

ನಟ ಯಶ್ ನಟನೆಯ ‘Yash 19 ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಡಿಸೆಂಬರ್ 8ರಂದು ಸಿನಿಮಾ ಟೈಟಲ್ ರಿವೀಲ್ ಆಗಲಿದೆ ಎಂದು ತಂಡ ಈಗಾಗಲೇ ಘೋಷಣೆ ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಮೂಲಕ ಒಂದೂವರೆ ವರ್ಷದ ಕಾಯುವಿಕೆಗೆ ಕೊನೆ ಬೀಳಲಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವದಂತಿ ಹರಿದಾಡುತ್ತಿದೆ. ‘ಯಶ್ 19’ ಚಿತ್ರಕ್ಕೆ ಸಾಯಿ ಪಲ್ಲವಿ (Sai Pallavi) ನಾಯಕಿ ಎನ್ನಲಾಗುತ್ತಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ.

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಕಳೆದ ವರ್ಷ ಏಪ್ರಿಲ್​ನಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಈಗ ಅವರು ಘೋಷಿಸುತ್ತಿರುವ ಚಿತ್ರಕ್ಕೆ ಸಾಕಷ್ಟು ಹೋಮ್​ವರ್ಕ್ ನಡೆದಿದೆ. ಹೀಗಾಗಿ ಸಿನಿಮಾ ಘೋಷಣೆ ವಿಳಂಬ ಆಗಿದೆ. ‘ಯಶ್ 19’ ಚಿತ್ರಕ್ಕೆ ಲೇಡಿ ಡೈರೆಕ್ಟರ್ ನಿರ್ದೇಶನ ಮಾಡಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಂ ಬ್ಯೂಟಿಯ ಆಗಮನವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ.

ನಟಿ ಸಾಯಿ ಪಲ್ಲವಿ ‘ಪ್ರೇಮಂ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಯಶಸ್ಸು ಕಂಡಿತು. ಆ ಬಳಿಕ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಕನ್ನಡದ ಸಿನಿಮಾದಲ್ಲಿ ಇನ್ನೂ ನಟಿಸಿಲ್ಲ. ಈಗ ಹರಿದಾಡುತ್ತಿರುವ ಸುದ್ದಿ ನಿಜವೇ ಆದರೆ ‘ಯಶ್ 19’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡಲಿದ್ದಾರೆ. ಡಿಸೆಂಬರ್ 8ರಂದು ಈ ಬಗ್ಗೆ ಘೋಷಣೆ ಆಗಲಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ಹೊಸ ಸಿನಿಮಾ ಘೋಷಣೆ: ನಾಗ ಚೈತನ್ಯ ಅದೃಷ್ಟ ಬದಲಾಗುತ್ತಾ?

ಸಿನಿಮಾದ ಕಥೆ ಗೋವಾದಲ್ಲಿ ಸಾಗಲಿದೆ ಎನ್ನುತ್ತಿವೆ ವರದಿಗಳು. ಡ್ರಗ್ ಮಾಫಿಯಾ ಕಥೆಯನ್ನು ಸಿನಿಮಾ ಹೊಂದಿರಲಿದೆ. ಈಗಾಗಲೇ ಮಾದಕ ವಸ್ತುಗಳಿಗೆ ಸಂಬಂಧಿಸಿ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಿಗಿಂತ ಈ ಚಿತ್ರ ಹೇಗೆ ಭಿನ್ನವಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇತ್ತೀಚೆಗೆ ಯಶ್ ಅವರು ತಮ್ಮ ಪ್ರೋಫೈಲ್ ಫೋಟೋನ ‘ಲೋಡಿಂಗ್​’ ಎಂದು ಬದಲಿಸಿದ್ದರು. ಡಿಸೆಂಬರ್ ನಾಲ್ಕರಂದು ಸಿನಿಮಾ ಟೈಟಲ್ ರಿವೀಲ್ ವಿಚಾರದ ಬಗ್ಗೆ ಅಪ್​ಡೇಟ್ ನೀಡಿದ್ದರು. ಡಿಸೆಂಬರ್ 8ರ ಬೆಳಿಗ್ಗೆ 9:55ಕ್ಕೆ ಟೈಟಲ್ ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:08 am, Tue, 5 December 23