ಕುತೂಹಲದ ಕಿಡಿ ಹೊತ್ತಿಸಿದ ‘ಕೆಂಡ’ ಸಿನಿಮಾ ಟೀಸರ್; ಡಿಫರೆಂಟ್ ಆಗಿದೆ ಈ ಪ್ರಯತ್ನ
ಟೀಸರ್ನ ಜೊತೆ ಚಿತ್ರತಂಡವೇ ಕೆಲವೊಂದು ಮಾಹಿತಿಗಳನ್ನು ಬಿಟ್ಟುಕೊಟ್ಟಿದೆ. ‘ಕೆಂಡ’ ಸಿನಿಮಾದ ಫ್ಲೇವರ್ ಹೇಗಿರಲಿದೆ ಎಂಬುದು ಇದರಿಂದ ಗೊತ್ತಾಗಿದೆ. ಹಾಗಂತ ಟೀಸರ್ನಲ್ಲಿ ಪೂರ್ತಿ ಕಥೆ ಬಯಲಾಗಿಲ್ಲ. ಕುತೂಹಲ ಸೃಷ್ಟಿಸುವಲ್ಲಿ ಈ ಟೀಸರ್ ಯಶಸ್ವಿಯಾಗಿದೆ. ಸಹದೇವ್ ಕೆಲವಡಿ ಅವರು ‘ಕೆಂಡ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಒಂದಷ್ಟು ದಿನಗಳ ಹಿಂದೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಭಾರಿ ಕುತೂಹಲ ಮೂಡಿಸಿತ್ತು ‘ಕೆಂಡ’ ಸಿನಿಮಾ (Kenda Movie) ಟೀಮ್. ಆ ಬಳಿಕ ಸಿನಿಪ್ರಿಯರ ವಲಯದಲ್ಲಿ ಇದರ ಬಗ್ಗೆ ಒಂದು ಪಾಸಿಟಿವ್ ಟಾಕ್ ಶುರುವಾಗಿತ್ತು. ಅದರ ಬೆನ್ನಲ್ಲೇ ಪಾತ್ರಗಳ ಪರಿಚಯ ಮಾಡಿಸುವಂತಹ ವಿಡಿಯೋ ಅನಾವರಣ ಮಾಡಿ ಗಮನ ಸೆಳೆಯಲಾಗಿತ್ತು. ಆ ಬಳಿಕ ಟೀಸರ್ಗಾಗಿ ನಿರೀಕ್ಷೆ ಮೂಡಿತ್ತು. ನಿರೀಕ್ಷೆಯಂತೆಯೇ ‘ಕೆಂಡ’ ಸಿನಿಮಾ ಟೀಸರ್ (Kenda Movie Teaser) ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮಾಸ್ ಅಂಶಗಳು ಈ ಟೀಸರ್ನಲ್ಲಿ ಇವೆ. ಅಷ್ಟೇ ಅಲ್ಲದೇ, ಡಿಫರೆಂಟ್ ಆದಂತಹ ಕಥೆಯ ಎಳೆ ಏನು ಎಂಬುದರ ಸುಳಿವನ್ನು ಕೂಡ ಈ ಟೀಸರ್ನಲ್ಲಿ ಬಿಟ್ಟುಕೊಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಂದೇ ಬಗೆಯ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಅವುಗಳ ನಡುವೆಯೂ ಭಿನ್ನ ಪ್ರಯೋಗಗಳು ಆಗುತ್ತಿವೆ. ಅದಕ್ಕೆ ಉತ್ತಮ ಉದಾಹರಣೆಯೇ ‘ಕೆಂಡ’ ಸಿನಿಮಾ ಎಂಬ ಅಭಿಪ್ರಾಯ ಸಿನಿಪ್ರಿಯರಲ್ಲಿ ಮೂಡುವ ಮಟ್ಟಕ್ಕೆ ಈ ಟೀಸರ್ ಗಮನಾರ್ಹವಾಗಿದೆ. ಒಬ್ಬ ಸಾಮಾನ್ಯ ಹುಡುಗನು ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕಿಕೊಂಡು ಅಸಾಮಾನ್ಯವಾಗಿ ಅಬ್ಬರಿಸುವ ಕಥೆಯೇ ‘ಕೆಂಡ’ ಸಿನಿಮಾದ ಜೀವಾಳ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಕೆಂಡ’ ಸಿನಿಮಾ ಟೀಸರ್:
ಟೀಸರ್ನ ಜೊತೆ ಚಿತ್ರತಂಡವೇ ಕೆಲವೊಂದು ಮಾಹಿತಿಗಳನ್ನು ಬಿಟ್ಟುಕೊಟ್ಟಿದೆ. ‘ಕೆಂಡ’ ಸಿನಿಮಾದ ಫ್ಲೇವರ್ ಹೇಗಿರಲಿದೆ ಎಂಬುದು ಇದರಿಂದ ಗೊತ್ತಾಗಿದೆ. ಹಾಗಂತ ಟೀಸರ್ನಲ್ಲಿ ಪೂರ್ತಿ ಕಥೆ ಬಯಲಾಗಿಲ್ಲ. ಕುತೂಹಲ ಸೃಷ್ಟಿಸುವಲ್ಲಿ ಈ ಟೀಸರ್ ಯಶಸ್ವಿಯಾಗಿದೆ. ಈ ಮೊದಲು ‘ಗಂಟುಮೂಟೆ’ ಸಿನಿಮಾ ಮಾಡಿದ್ದ ತಂಡವೇ ಸೇರಿಕೊಂಡು ಈಗ ‘ಕೆಂಡ’ ಸಿನಿಮಾವನ್ನು ಜನರ ಮುಂದಿಡಲು ಬರುತ್ತಿದೆ. ಆ ಕಾರಣದಿಂದಲೂ ಈ ಸಿನಿಮಾ ವಿಶೇಷ ಎನಿಸಿಕೊಂಡಿದೆ. ‘ಗಂಟುಮೂಟೆ’ ಸಿನಿಮಾದ ನಿರ್ದೇಶಕಿ ರೂಪಾ ರಾವ್ ಅವರು ‘ಕೆಂಡ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇದನ್ನೂ ಓದಿ: ‘ಕೆಂಡ’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಹೊಸ ವಿಡಿಯೋ ಬಿಡುಗಡೆ; ಇಲ್ಲಿದೆ ಝಲಕ್
‘ಗಂಟುಮೂಟೆ’ ಚಿತ್ರದ ಛಾಯಾಗ್ರಾಹಕರಾಗಿ, ‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ನಿರ್ಮಾಣದಲ್ಲೂ ಭಾಗಿ ಆಗಿದ್ದ ಸಹದೇವ್ ಕೆಲವಡಿ ಅವರು ಈಗ ‘ಕೆಂಡ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಕಲಾವಿದರೇ ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಗೋಪಾಲ ದೇಶಪಾಂಡೆ, ಬಿ.ವಿ. ಭರತ್, ವಿನೋದ್ ರವೀಂದ್ರನ್, ಪ್ರಣವ್ ಶ್ರೀಧರ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ ಅವರು ‘ಕೆಂಡ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ ಎಂಬುದು ವಿಶೇಷ. 2 ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಶ್ರೇಯಾಂಕ್ ನಂಜಪ್ಪ ಅವರು ಈ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.