ಕಾವೇರಿ ನದಿಯಲ್ಲಿ ಸಮನ್ವಿ ಅಸ್ತಿ ವಿಸರ್ಜನೆ ಮಾಡಿದ ಕುಟುಂಬ

| Updated By: ರಾಜೇಶ್ ದುಗ್ಗುಮನೆ

Updated on: Jan 16, 2022 | 3:14 PM

ಸಮನ್ವಿ ಅಸ್ತಿಯನ್ನು ಅವಳ ತಂದೆ ರೂಪೇಶ್​ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಅಸ್ತಿ ವಿಸರ್ಜನೆ ಮಾಡಿದ್ದಾರೆ. ಖ್ಯಾತ ವೈದಿಕ ಬಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ.

ಕಾವೇರಿ ನದಿಯಲ್ಲಿ ಸಮನ್ವಿ ಅಸ್ತಿ ವಿಸರ್ಜನೆ ಮಾಡಿದ ಕುಟುಂಬ
ಸಮನ್ವಿ ಅಸ್ತಿ ವಿಸರ್ಜನೆ
Follow us on

ಚಿಕ್ಕ ವಯಸ್ಸಿನಲ್ಲೇ ಕಲರ್ಸ್​ ಕನ್ನಡದ ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಅಂತಹ ದೊಡ್ಡ ವೇದಿಕೆ ಏರಿ ಯಾವುದೇ ಅಂಜಿಕೆ ಇಲ್ಲದೆ ಮಾತನಾಡುವುದು ಅಷ್ಟು ಸುಲಭದ ಮಾತಲ್ಲ. ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಕೂಡ ಅನೇಕರಿಂದ ಸಾಧ್ಯವಾಗುವುದಿಲ್ಲ. ಆರನೇ ವಯಸ್ಸಿಗೆ ಇವೆರಡನ್ನೂ ಮಾಡಿ ತೋರಿಸಿದ್ದಳು ಸಮನ್ವಿ. ಕಿರುತೆರೆ ನಟಿ ಅಮೃತಾ ನಾಯ್ಡು (Amrutha Naidu ) ಮಗಳು ಸಮನ್ವಿ (Samanvi) ‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಳು. ಆದರೆ, ಆರಂಭದಲ್ಲೇ ಅವಳ ಪಯಣ ಅಂತ್ಯವಾಗಿದೆ. ಜನವರಿ 13ರಂದು ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಕೆ ಮೃತಪಟ್ಟಿದ್ದಾಳೆ. ಶುಕ್ರವಾರ (ಜನವರಿ 14) ಸಮನ್ವಿ ಅಂತ್ಯಕ್ರಿಯೆ ನೆರವೇರಿತ್ತು. ಇಂದು (ಜನವರಿ 16) ಸಮನ್ವಿ ಅಸ್ತಿಯನ್ನು ಕಾವೇರಿಯಲ್ಲಿ ವಿಸರ್ಜನೆ ಮಾಡಲಾಗಿದೆ.

ಯಾರೇ ಮೃತಪಟ್ಟರೂ ಅವರ ಅಸ್ತಿಯನ್ನು ಪವಿತ್ರ ನದಿಯಲ್ಲಿ ವಿಸರ್ಜನೆ ಮಾಡುವ ಸಂಪ್ರದಾಯ ಹಿಂದೂ ಧರ್ಮದಲ್ಲಿದೆ. ಮೃತರ ಕುಟುಂಬದವರು ಆ ಕೆಲಸವನ್ನು ಮಾಡುತ್ತಾರೆ. ಈಗ ಸಮನ್ವಿ ಅಸ್ತಿಯನ್ನು ಅವಳ ತಂದೆ ರೂಪೇಶ್​ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಅಸ್ತಿ ವಿಸರ್ಜನೆ ಮಾಡಿದ್ದಾರೆ. ಖ್ಯಾತ ವೈದಿಕ ಬಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ.

ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿದಿದ್ದರು. ಸೃಜನ್​ ಲೋಕೇಶ್​ ಅವರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದರು. ‘ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸೃಜನ್​ ಲೋಕೇಶ್​ ಪೋಸ್ಟ್​ ಮಾಡಿದ್ದರು.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6 ವರ್ಷದ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಆಕೆಗೆ ಅನೇಕ ಮಂದಿ ಅಭಿಮಾನಿಗಳಾಗಿದ್ದರು. ಮನರಂಜನಾ ಲೋಕದಲ್ಲಿ ಎತ್ತರಕ್ಕೆ ಬೆಳೆಯಬೇಕಿದ್ದ ಈ ಪುಟ್ಟ ಬಾಲಕಿ ಸಾವಿನ ಮನೆಯ ಹಾದಿ ಹಿಡಿದಿದಿದ್ದು ತೀವ್ರ ನೋವಿನ ಸಂಗತಿ.

ಇದನ್ನೂ ಓದಿ: ‘ಸಮನ್ವಿ ಸಾವಿಗೆ ಸರ್ಕಾರ ನೇರ ಕಾರಣ’; ರಿಷಿ ಕುಮಾರ ಸ್ವಾಮೀಜಿ ಆರೋಪ

‘ಸಮನ್ವಿಗೆ ದೃಷ್ಟಿ ಬಿದ್ದಿತ್ತು ಅನಿಸುತ್ತೆ’; ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಯ ಮಾತು