ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹುಲಿ ದತ್ತು ಪಡೆದ ಸಂಯುಕ್ತಾ ಹೊರನಾಡು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ 2.5 ವರ್ಷದ ವಯಸ್ಸಿನ ಹುಲಿಯನ್ನ ನಟಿ ಸಂಯುಕ್ತ ಹೊರನಾಡು ದತ್ತು ಪಡೆದಿದ್ದಾರೆ. ಬೆಂಗಳೂರಿನ tekion ಸಂಸ್ಥೆ ಹಾಗೂ ನಟಿ ಸಂಯುಕ್ತ ಹೊರನಾಡು ಅವರು ಹುಲಿಯ ಆರೈಕೆಯ ಜವಾಬ್ದಾರಿ ಪಡೆದಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹುಲಿ ದತ್ತು ಪಡೆದ ಸಂಯುಕ್ತಾ ಹೊರನಾಡು
ಸಂಯುಕ್ತಾ ಹೊರನಾಡು

Updated on: Aug 31, 2024 | 6:56 AM

ನಟಿ ಸಂಯುಕ್ತಾ ಹೊರನಾಡು ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾ ಇರುತ್ತಾರೆ. ಈಗ ಅವರಿಂದ ಒಂದು ಒಳ್ಳೆಯ ಕೆಲಸ ಆಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಹುಲಿಯೊಂದನ್ನು ಅವರು ದತ್ತು ಪಡೆದಿದ್ದಾರೆ. ಈ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ 2.5 ವರ್ಷದ ವಯಸ್ಸಿನ ಹುಲಿಯನ್ನ ನಟಿ ಸಂಯುಕ್ತ ಹೊರನಾಡು ದತ್ತು ಪಡೆದಿದ್ದಾರೆ. ಬೆಂಗಳೂರಿನ tekion ಸಂಸ್ಥೆ ಹಾಗೂ ನಟಿ ಸಂಯುಕ್ತ ಹೊರನಾಡು ಅವರು ಹುಲಿಯ ಆರೈಕೆಯ ಜವಾಬ್ದಾರಿ ಪಡೆದಿದ್ದಾರೆ. ಅವರಿಗೆ ಅರಣ್ಯ ಇಲಾಖೆ ಕಡೆಯಿಂದ ದತ್ತು ಪಡೆದ ಪ್ರಮಾಣ ಪತ್ರ ನೀಡಲಾಗಿದೆ.

ಕೊವಿಡ್ ಸಂದರ್ಭದಲ್ಲಿ ಪ್ರಾಣಿ ಸಂಗ್ರಹಾಲಯಗಳಿಗೆ ಯಾರೂ ಹೆಚ್ಚಾಗಿ ಭೇಟಿ ಕೊಟ್ಟಿರಲಿಲ್ಲ. ಇದರಿಂದ ಅವುಗಳ ಆರೈಕೆ ತುಂಬಾನೇ ಕಷ್ಟ ಆಗಿತ್ತು. ಆಗ ನಟ ದರ್ಶನ್ ಅವರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯಲು ಕರೆ ನೀಡಿದ್ದರು. ಇದಾದ ಬಳಿಕ ಅನೇಕರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದರು. ಈ ಮೂಲಕ ಅವುಗಳ ಸಹಾಯಕ್ಕೆ ನಿಂತರು.

ಇದನ್ನೂ ಓದಿ: ಹಳ್ಳಿ ಜೀವನ ನೆನೆದ ಸಂಯುಕ್ತಾ ಹೊರನಾಡು; ಅವರು ಗ್ರಾಮ ವಾಸ್ತವ್ಯ ಮಾಡಿದ್ದೇಕೆ?

ಸಂಯುಕ್ತಾ ಹೊರನಾಡು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರು ಖ್ಯಾತ ನಟಿ ಸುಧಾ ಬೆಳವಾಡಿ ಅವರ ಮಗಳು. 2007ರ ‘ಆ ದಿನಗಳು’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಅವರ ನಟನೆಯ ಕೆಲವು ಸಿನಿಮಾಗಳು ರಿಲೀಸ್ ಆಗಿದ್ದವು. ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us