Sanchari Vijay Death: ಕಣ್ಣೀರು ಹಾಕುತ್ತ ನಟ ಸಂಚಾರಿ ವಿಜಯ್ ಬಗ್ಗೆ ಏನು ಹೇಳುತ್ತಿದೆ ಇಡೀ ಸ್ಯಾಂಡಲ್​ವುಡ್​?

Sanchari Vijay: ಸಂಚಾರಿ ವಿಜಯ್​ ​ಅವರನ್ನು ನೆನೆದು ಸಿನಿಮಾ, ಕಿರುತೆರೆ, ರಂಗಭೂಮಿಯ ನೂರಾರು ಸೆಲೆಬ್ರಿಟಿಗಳು ಕಣ್ಣೀರು ಹಾಕುತ್ತಿದ್ದಾರೆ. ಮಹಾನ್​ ಕಲಾವಿದನನ್ನು ಕಳೆದುಕೊಂಡೆವಲ್ಲ ಎಂಬ ನೋವಿನೊಂದಿಗೆ ಎಲ್ಲರೂ ಮರುಗುತ್ತಿದ್ದಾರೆ.

Sanchari Vijay Death: ಕಣ್ಣೀರು ಹಾಕುತ್ತ ನಟ ಸಂಚಾರಿ ವಿಜಯ್ ಬಗ್ಗೆ ಏನು ಹೇಳುತ್ತಿದೆ ಇಡೀ ಸ್ಯಾಂಡಲ್​ವುಡ್​?
ಸಂಚಾರಿ ವಿಜಯ್​ಗೆ ಸ್ಯಾಂಡಲ್​ವುಡ್​ ಶ್ರದ್ಧಾಂಜಲಿ

Updated on: Jun 15, 2021 | 8:53 AM

ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಅಕಾಲಿಕ ಮರಣವನ್ನು ಕನಸಿನಲ್ಲಿಯೂ ಯಾರೂ ಊಹಿಸಿರಲಿಲ್ಲ. ಸದಾ ನಗುಮುಖದಿಂದ ಮಾತನಾಡುತ್ತ, ಅಜಾತಶತ್ರುವಾಗಿದ್ದ ವಿಜಯ್​ ಈಗ ಬಾರದ ಲೋಕಕ್ಕೆ ತೆರಳಿರುವುದನ್ನು ಯಾರಿಗೂ ನಂಬಲಾಗುತ್ತಿಲ್ಲ. ಇಂಥ ಅಪ್ಪಟ ಕಲಾವಿದ ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ತೀವ್ರ ನೋವಿನ ಸಂಗತಿ. ಈ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ನ ನೂರಾರು ಸೆಲೆಬ್ರಿಟಿಗಳು ಸಂಚಾರಿ ವಿಜಯ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಮತ್ತೆ ಹುಟ್ಟಿ ಬನ್ನಿ ಎಂದು ಮನದ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸುದೀಪ್​, ದರ್ಶನ್​, ರಕ್ಷಿತ್​ ಶೆಟ್ಟಿ, ಶಿವರಾಜ್​ಕುಮಾರ್​, ಉಪೇಂದ್ರ, ಪುನೀತ್​ ರಾಜ್​ಕುಮಾರ್​ ಸೇರಿದಂತೆ ಎಲ್ಲ ಕಲಾವಿದರು ಕೂಡ ಸಂಚಾರಿ ವಿಜಯ್​ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಎಂಥ ಒಬ್ಬ ಕಲಾವಿದನನ್ನು ಕಳೆದುಕೊಂಡೆವಲ್ಲ ಎಂಬ ನೋವಿನೊಂದಿಗೆ ಎಲ್ಲರೂ ಮರುಗುತ್ತಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

‘ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರವರು ಬೈಕ್ ಅಪಘಾತದಿಂದ ಅಸುನೀಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯು ಇಡೀ ಚಿತ್ರರಂಗವನ್ನೇ ಶೋಕದಲ್ಲಿ ಮುಳುಗಿಸಿದೆ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.. ಓಂ ಶಾಂತಿ’ ಎಂದು ಉಪೇಂದ್ರ ಟ್ವೀಟ್​ ಮಾಡಿದ್ದಾರೆ.

‘ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅದ್ಭುತ ಯುವ ಕಲಾವಿದ ಸಂಚಾರಿ ವಿಜಯ್ ಅವರು ಅಪಘಾತದಲ್ಲಿ ಅಸುನೀಗಿದ್ದಾರೆ ಎಂಬ ಸುದ್ದಿ ಆಘಾತ ಉಂಟುಮಾಡಿದೆ. ಈ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ’ ಎಂದು ದರ್ಶನ್​ ಟ್ವೀಟ್​ ಮಾಡಿದ್ದಾರೆ. ಹಿರಿತೆರೆ, ಕಿರುತೆರೆ, ರಂಗಭೂಮಿಯ ನೂರಾರು ಕಲಾವಿದರು ವಿಜಯ್​ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ವಿಜಯ್​ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.

ಇದನ್ನೂ ಓದಿ:

Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​

ಸಂಚಾರಿ ವಿಜಯ್​ ರೀತಿಯಲ್ಲೇ ಅಪಘಾತದಲ್ಲಿ ಮೃತಪಟ್ಟ ಸ್ಯಾಂಡಲ್​ವುಡ್​ ಕಲಾವಿದರಿವರು