ಬೆಂಗಳೂರು: ಬೈಕ್ ಅಪಘಾತದಲ್ಲಿ ಮರಣ ಹೊಂದಿದ್ದ ಸಂಚಾರಿ ವಿಜಯ್ಗೆ ಇಂದು (ಜುಲೈ 17) 39 ನೇ ವರ್ಷದ ಹುಟ್ಟು ಹಬ್ಬ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟನಾದ ವಿಜಯ್ ತನ್ನದೇ ಆದ ನಟನೆ ಮೂಲಕ ಜನರ ಮನಸು ಗೆದ್ದಿದ್ದರು. ಸಿನಿಮಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯ ಕನಸು ಕಂಡಿದ್ದ ಸಂಚಾರಿ, ಜೂನ್ 15 ರಂದು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯ್ ನೆನಪಿಗಾಗಿ ಅವರ ಸ್ನೇಹಿತರು ಇಂದು ಕೆಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇಂದು ವಿಜಯ್ ನೆನಪಿಗಾಗಿ ಸ್ನೇಹಿತರ ಬಳಗ ಪ್ರಾಣಿ ಪಕ್ಷಿಗಳಿಗೆ ಗೂಡೊಂದನ್ನು ಸಿದ್ಧಮಾಡಿದ್ದು, ಮಧ್ಯಾಹ್ನ ಎಜಿಎಸ್ ಲೇಔಟ್ನಲ್ಲಿ ಗೂಡು ಉದ್ಘಾಟನೆ ಮಾಡಲಿದೆ. ಅಲ್ಲದೇ ‘ಸಂಚಾರ ಮುಗಿಸಿದ ಪ್ರೀತಿಯ ಕಂದ.. ಚಂದನವನದ ನಟನ ಪ್ರಚಂಡ.. ನಿನ್ನೊಳಗೆ ಉರಿದಿತ್ತು ನೋವಿನ ಕೆಂಡ.. ದೇವರು ನಿನ್ನ ಪಡೆದಿದ್ದು ತಪ್ಪು ತಲೆದಂಡ..’ ಎನ್ನುವ ಸಾಲುಗಳಿಂದ ಸ್ನೇಹಿತರ ಬಳಗ, ಸಂಚಾರಿ ವಿಜಯ್ ನಿಜ ಬದುಕಿನ ಸಾರಾಂಶ ಹೇಳಿ ಅವರಿಗೆ ನಟನೆ ವಿಡಿಯೋ ಅರ್ಪಿಸಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈ ವರ್ಷ ತಮ್ಮ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವ ಪ್ಲಾನ್ ಮಾಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜೂನ್ 15 ರಂದು ಸಂಭವಿಸಿದ ಅಪಘಾತದಲ್ಲಿ ಸಂಚಾರಿ ವಿಜಯ್ ಸಾವನ್ನಪ್ಪಿದ್ದಾರೆ. ಇಂದು ಅವರ 39 ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ‘ಅನಂತವಾಗಿರು’ ಅನ್ನೋ ಪುಸ್ತಕವೊಂದನ್ನ ಸ್ನೇಹಿತರ ಬಳಗ ಹೊರತಂದಿದೆ.
ಅಭಿಮಾನಿಗಳಿಗೆ ಹೊಸ ಗಿಫ್ಟ್
ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ ‘ಲಂಕೆ’ ಚಿತ್ರದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ಹುಟ್ಟು ಹಬ್ಬದ ನೆನಪಿಗಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ
ಸಂಚಾರಿ ವಿಜಯ್ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ
ಸಂಚಾರಿ ವಿಜಯ್ ಜನ್ಮದಿನಕ್ಕೂ ಮೊದಲೇ ಅಭಿಮಾನಿಗಳಿಗೆ ಸಿಕ್ತು ವಿಶೇಷ ಗಿಫ್ಟ್
(Sanchari Vijay’s 39th birthday today and his friends have hosted programs)
Published On - 8:46 am, Sat, 17 July 21