ಅಕ್ಕನ ಮಗ ಸಂಚಿತ್ ಸಿನಿಮಾಗೆ ‘ಜಿಮ್ಮಿ’ ಟೈಟಲ್ ಕೊಟ್ಟಿದ್ದು ಯಾರು? ವಿಶೇಷ ವ್ಯಕ್ತಿ ಬಗ್ಗೆ ಸುದೀಪ್ ಮಾತು

|

Updated on: Jun 26, 2023 | 7:50 AM

‘ಜಿಮ್ಮಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾದ ಟೈಟಲ್ ಅನೇಕರಿಗೆ ಇಷ್ಟವಾಗಿದೆ. ಈ ಟೈಟಲ್ ನೀಡಿದ್ದು ಯಾರು ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ.

ಕಿಚ್ಚ ಸುದೀಪ್ (Sudeep) ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಮೊದಲ ಚಿತ್ರಕ್ಕೆ ‘ಜಿಮ್ಮಿ’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಸಂಚಿತ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ‘ಜಿಮ್ಮಿ’ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾದ ಟೈಟಲ್ ಅನೇಕರಿಗೆ ಇಷ್ಟವಾಗಿದೆ. ಈ ಟೈಟಲ್ ನೀಡಿದ್ದು ಯಾರು ಎನ್ನುವ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. ಆ ವ್ಯಕ್ತಿಯನ್ನು ಹಾಡಿ ಹೊಗಳಿದ್ದಾರೆ ಸುದೀಪ್.

‘ಜಿಮ್ಮಿ’ ಟೈಟಲ್ ನೀಡಿದ್ದು ಅನೂಪ್ ಬಂಡಾರಿ. ‘ರಂಗಿ ತರಂಗ’ ಸಿನಿಮಾ ಮೂಲಕ ಅನೂಪ್ ಖ್ಯಾತಿ ಹೆಚ್ಚಿಸಿಕೊಂಡರು. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರವನ್ನು ಅನೂಪ್ ಬಂಡಾರಿ ನಿರ್ದೇಶನ ಮಾಡಿದ್ದರು. ಅನೂಪ್ ಬಗ್ಗೆ ಸುದೀಪ್​ಗೆ ವಿಶೇಷ ಗೌರವ ಹಾಗೂ ಪ್ರೀತಿ. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಟೈಟಲ್ ನೀಡಿದ್ದಕ್ಕೆ ಥ್ಯಾಂಕ್ಸ್​ ಎಂದಿದ್ದಾರೆ ಸುದೀಪ್​.

‘ಜಿಮ್ಮಿ ಟೈಟಲ್ ಸಿಗೋಕೆ ಕಾರಣ ಅನೂಪ್ ಬಂಡಾರಿ. ನನಗೆ ಅನೂಪ್ ಮೇಲೆ ಅಪಾರ ಪ್ರೀತಿ, ಗೌರವ ಇದೆ. ಸಿನಿಮಾದ ಕಥೆ ರೆಡಿ ಆದಾಗ ನಾನು ಕಾಲ್ ಮಾಡಿದ್ದು ಅನೂಪ್​ಗೆ. ಸಾಮಾನ್ಯವಾಗಿ ರಾತ್ರಿ 2 ಅಥವಾ 3 ಗಂಟೆಗೆ ಅನೂಪ್​ಗೆ ಕಾಲ್ ಮಾಡ್ತೀನಿ. ಅವರೂ ಎದ್ದಿರುತ್ತಾರೆ. ಎಲ್ಲಿದೀರಾ, ಬನ್ನಿ ಟೈಟಲ್ ಬೇಕು ಎಂದೆ’ ಎಂಬುದಾಗಿ ಸುದೀಪ್ ಮಾತು ಆರಂಭಿಸಿದರು.

‘ಅನೂಪ್ ಬಂಡಾರಿ ಅವರ ಕೆಲಸ ನಂಗೆ ತುಂಬಾನೇ ಇಷ್ಟ. ಅವರ ಬಳಿ ಅನ್ನ ಕೇಳಿದ್ರೆ ಬಿರಿಯಾನಿ ಮಾಡಿ ಕೊಡ್ತಾರೆ. ಮರುದಿನ ಒಂದಷ್ಟು ಟೈಟಲ್​ನೊಂದಿಗೆ ಬಂದರು. ಆ ಟೈಟಲ್​ಗೆ ಫಾಂಟ್​ ಕೂಡ ಹಾಕಿದ್ದರು. ಎಲ್ಲರಿಗೂ ಒಟ್ಟಿಗೆ ಇಷ್ಟವಾದ ಟೈಟಲ್ ಜಿಮ್ಮಿ. ಥ್ಯಾಂಕ್​ ಯೂ ಅನೂಪ್​’ ಎಂದರು ಸುದೀಪ್.

ಇದನ್ನೂ ಓದಿ: Kichcha Sudeep: ‘K46’ ಟೀಸರ್​ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ ನಟ ಕಿಚ್ಚ ಸುದೀಪ್  

ಸುದೀಪ್ ಹ್ಯಾಟ್ರಿಕ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಪೈಕಿ ಅನೂಪ್ ಜೊತೆಗೂಡಿ ಸುದೀಪ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ‘ಬಿಲ್ಲ ರಂಗ ಭಾಷ’ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ