ರವಿಚಂದ್ರನ್, ಅಪ್ಪು, ಸುದೀಪ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತು: ಡಿಕೆಶಿ ಪುತ್ರಿ ಬಗ್ಗೆ ರವಿಚಂದ್ರನ್ ಹೇಳಿದ್ದೇನು?

DK Shivakumar: ತಮ್ಮ ಒಡೆತನದ ಗ್ಲೋಬಲ್ ಡಿವಿನಿಟಿ ಮಾಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು, ರವಿಚಂದ್ರನ್, ಪುನೀತ್ ರಾಜ್​ಕುಮಾರ್ ಹಾಗೂ ಸುದೀಪ್ ಬಗ್ಗೆ ಮಾತನಾಡಿದರು.

ರವಿಚಂದ್ರನ್, ಅಪ್ಪು, ಸುದೀಪ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತು: ಡಿಕೆಶಿ ಪುತ್ರಿ ಬಗ್ಗೆ ರವಿಚಂದ್ರನ್ ಹೇಳಿದ್ದೇನು?
ಡಿಕೆ ಶಿವಕುಮಾರ್
Follow us
ಮಂಜುನಾಥ ಸಿ.
|

Updated on:Jun 24, 2023 | 10:05 PM

ಡಿಕೆ ಶಿವಕುಮಾರ್ (DK Shivakumar) ಒಡೆತನದ ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗ್ಲೋಬಲ್ ಡಿವಿನಿಟಿ ಮಾಲ್​ (Global Divinity Mall) ಉದ್ಘಾಟನೆ ಕಾರ್ಯಕ್ರಮ ಇಂದು (ಜೂನ್ 24) ರ ಸಂಜೆ ಅದ್ಧೂರಿಯಾಗಿ ನೆರವೇರಿತು. ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಕುಟುಂಬದ ಜೊತೆಗೆ ನಟ ಕಿಚ್ಚ ಸುದೀಪ್ (Kichcha Sudeep), ಕ್ರೇಜಿಸ್ಟಾರ್ ರವಿಚಂದ್ರನ್ (Ravichandran), ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರವಿಚಂದ್ರ, ಪುನೀತ್ ರಾಜ್​ಕುಮಾರ್ ಹಾಗೂ ಸುದೀಪ್ ಬಗ್ಗೆ ಆಪ್ತ ಮಾತುಗಳನ್ನಾಡಿದರು.

ರವಿಚಂದ್ರನ್ ಸ್ನೇಹವನ್ನು ನೆನಪಿಸಿಕೊಂಡ ಡಿಕೆ ಶಿವಕುಮಾರ್, ನಾನೂ ಹಾಗೂ ರವಿಚಂದ್ರನ್ ಬಾಲ್ಯದ ಗೆಳೆಯರು. ಇಬ್ಬರೂ ಸಹ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಒಟ್ಟಿಗೆ ಓದಿದೆವು. ಈ ಹಿಂದೆ ಚುನಾವಣಾ ಸಮಯದಲ್ಲಿ ಮಾಲ್ ಒಂದರ ಉದ್ಘಾಟನೆ ಮಾಡಿಸಬೇಕಿತ್ತು ಆದರೆ ನಾನೂ ಹಾಜರಿರಲಿಲ್ಲವಾದ್ದರಿಂದ ಕರೆಯಲಾಗಿರಲಿಲ್ಲ. ಆದರೆ ಈಗ ಸಮಯ ಕೂಡಿ ಬಂತು. ಬಂದು ಉದ್ಘಾಟನೆ ಮಾಡಿಕೊಡಿ ಎಂದಾಗ ಬಂದಿದ್ದಾರೆ. ಅವರಿಗೆ ಧನ್ಯವಾದ ಎಂದರು.

ಪುನೀತ್ ರಾಜ್​ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ನೆನಪಿಸಿಕೊಂಡ ಡಿಕೆ ಶಿವಕುಮಾರ್, ”ನನ್ನ ಆತ್ಮೀಯ ಗೆಳೆಯ ಪುನೀತ್ ರಾಜ್​ಕುಮಾರ್ ಇದ್ದಿದ್ದರೆ ನಮ್ಮ ಎರಡೂ ಮಾಲ್​ನ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿರುತ್ತಿದ್ದರು. ಆದರೆ ಅವರ ಧರ್ಮಪತ್ನಿ, ಸಹೋದರಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ನಮ್ಮ ಆಹ್ವಾನ ಮನ್ನಿಸಿ ಬಂದಿದ್ದಾರೆ ಅವರಿಗೆ ಆಭಾರಿಯಾಗಿದ್ದೇನೆ ಎಂದರು. ನಟ ಸುದೀಪ್ ಬಗ್ಗೆಯೂ ಮಾತನಾಡಿ, ಅವರು ಆಗಮಿಸಿರುವುದಕ್ಕೆ ಬಹಳ ಸಂತೋಷವಿದೆ. ನಮ್ಮ ಸಂಸ್ಥೆಯ ಹಲವು ಕಾರ್ಯಕ್ರಮಗಳಿಗೆ ಅವರು ಆಗಮಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಹ ಡಿಕೆಶಿ ಹೇಳಿದರು.

ಇದನ್ನೂ ಓದಿ:ರವಿಚಂದ್ರನ್ ಮನೆ ಮುಂದೆ ಅಭಿಮಾನಿಗಳ ದಂಡು, ರವಿಮಾಮನ ನೋಡಲು ದೂರದೂರದಿಂದ ಬಂದ ಅಭಿಮಾನಿಗಳು

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರವಿಚಂದ್ರನ್, ”ಯಾವುದೇ ಕೆಲಸ ಮಾಡಬೇಕಾದರೂ ಉದ್ದೇಶ ಚೆನ್ನಾಗಿರಬೇಕು ಎನ್ನುತ್ತಾರೆ. ಅಂತೆಯೇ ಈ ಕಾರ್ಯಕ್ರಮದ ಉದ್ದೇಶ ಚೆನ್ನಾಗಿದೆ. ಐಶ್ವರ್ಯಾರ ಹುಮ್ಮಸ್ಸು ಸಹ ಚೆನ್ನಾಗಿದೆ ಹಾಗಾಗಿ ಒಳ್ಳೆಯದೇ ಆಗುತ್ತದೆ. ಐಶ್ವರ್ಯಾ ಅವರು ಬಹಳ ಉತ್ಸಾಹದಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಅಪ್ಪನಿಗೆ ತಕ್ಕ ಮಗಳು ಅನ್ನುತ್ತಾರಲ್ಲ ಹಾಗೆಯೇ ಡಿಕೆ ಶಿವಕುಮಾರ್​ಗೆ ತಕ್ಕ ಮಗಳು ಐಶ್ವರ್ಯಾ ಎಂದು ಹೊಗಳಿದರು. ಮಾಲ್ ಬಗ್ಗೆ ಮಾತನಾಡಿ, ”ಗ್ಲೋಬಲ್ ಜೊತೆಗೆ ಡಿವಿನಿಟಿ ಹೆಸರು ಸೇರಿಸಿದ್ದು ಬಹಳ ಖುಷಿಯಾಯಿತು. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಅವರ ಉದ್ದೇಶ ಸಫಲವಾಗಲಿ, ಸಾಕಷ್ಟು ಜನರಿಗೆ ಇಲ್ಲಿ ಉದ್ಯೋಗ ಸಿಗಲಿ” ಎಂದಿದ್ದಾರೆ ಕ್ರೇಜಿಸ್ಟಾರ್.

ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ನಟ ರವಿಚಂದ್ರನ್ ಹಾಗೂ ಸುದೀಪ್ ಅವರನ್ನು ಸನ್ಮಾನಿಸಿದರು. ಡಿ.ಕೆ.ಶಿವಕುಮಾರ್ ಪತ್ನಿ, ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಸನ್ಮಾನ ಮಾಡಿದರು. ಅತಿಥಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಣೆ ಮಾಡಲಾಯ್ತು. ಕಾರ್ಯಕ್ರಮವನ್ನು ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರೇ ನಡೆಸಿದರು. ಡಿಕೆಶಿ ಪುತ್ರ ಸಹ ವೇದಿಕೆ ಮೇಲಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Sat, 24 June 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್